Breaking News

ಇರ್ದೆ ವಿಷ್ಣುಮೂರ್ತಿ ದೇವಾಲಯದಲ್ಲಿ 16 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ

Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಹಾಗೂ ‌ ಶ್ರೀ ವಿಷ್ಣುಮೂರ್ತಿ ದೇವಾಲಯ ಇರ್ದೆ  ಇದರ ಆಶ್ರಯದಲ್ಲಿ ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಬೆಟ್ಟಂಪಾಡಿ, ದೂಮಡ್ಕ, ಉಪ್ಪಳಿಗೆ, ಪೇರಲ್ತಡ್ಕ, ಅಜ್ಜಿಕಲ್ಲು, ಕಕ್ಕೂರು, ಗುಮ್ಮಟೆಗದ್ದೆ ಇವುಗಳ ಸಹಕಾರದೊಂದಿಗೆ 16 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ  ಪೂಜೆ ಹಾಗೂ ಧಾರ್ಮಿಕ ಸಭೆ ಪುರೋಹಿತ ರಾಧಾಕೃಷ್ಣ ಭಟ್ ಕಕ್ಕೂರು ಇವರ ನೇತೃತ್ವದಲ್ಲಿ ಮಾ.4 ರಂದು ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ನಡೆಯಿತು.
ಬೆಳಿಗ್ಗೆ  ಶ್ರೀ ಸತ್ಯನಾರಾಯಣ ಪೂಜೆ ಅರಂಭವಾಗಿ  ಮಹಾಪೂಜೆ ನಂತರ ಧಾರ್ಮಿಕ ಸಭೆ ಮಧ್ಯಾಹ್ನ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕ್ರತ ಉಪನ್ಯಾಸಕ ಶ್ರೀಶ ಕುಮಾರ್ ಧಾರ್ಮಿಕ ಉಪನ್ಯಾಸ ನೀಡಿದರು. ಎಸ್.ಕೆ.ಡಿ.ಅರ್.ಡಿ.ಪಿ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ,ದೇವಸ್ಥಾನದ ನಿಕಟಪೂರ್ವ ಮೊಕ್ತೇಸರ ವಿಠಲ ರೈ ಬೈಲಾಡಿ, ಪೂಜಾ ಸಮಿತಿಯ ಗೌರವಾಧ್ಯಕ್ಷ ಜತ್ತಪ್ಪ ಗೌಡ ದೇವಸ್ಯ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಉಮಾವತಿ ಸುಬ್ಬಪ್ಪ ಮಣಿಯಾಣಿ, ಒಕ್ಕೂಟದ ವಲಯಾಧ್ಯಕ್ಷ ನವೀನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂಜಾ ಸಮಿತಿಯ ಅಧ್ಯಕ್ಷ ನಾರಾಯಣ ಪಾಟಾಳಿ ದೆಯ್ಯರಡ್ಕ ಅಧ್ಯಕ್ಷತೆ ವಹಿಸಿದ್ದರು.ವಸಂತ ನಾಯ್ಕ ಸ್ವಾಗತಿಸಿ ಜಗದೀಶ್ ವರದಿ ವಾಚಿಸಿದರು. ದಾಮೋದರ ಪಾಟಾಳಿ ವಂದಿಸಿ ನಮಿತಾ ಬೈಲಾಡಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.