Breaking News

ದೇವಳದ ಗದ್ದೆಯಲ್ಲಿ ಸ್ಪೋಟಕ ಸಿಡಿಸಿ ಪರಾರಿಯಾದ ಅಪರಿಚಿತರು..!!

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಗೆ ಕಾರೊಂದರಲ್ಲಿ ಬಂದ ಅಪರಿಚಿತರು ದೇವಳದ ಅನ್ನಛತ್ರದ ಬಳಿ ಸಿಡಿಮದ್ದು ಮಾದರಿಯ ಸ್ಪೋಟಕ ಸಿಡಿಸಿ ಪರಾರಿಯಾದ ಘಟನೆ ಮಾ.4ರಂದು ತಡರಾತ್ರಿ ನಡೆದಿದೆ.

ರಾತ್ರಿ ಗಂಟೆ 11.45 ರ ಸುಮಾರಿಗೆ ದೇವಳದ ಅನ್ನ ಛತ್ರದ ಬಳಿ ಸಿಡಿಮದ್ದು‌ಮಾದರಿಯ ಸ್ಪೋಟಕದ ಭಾರಿ ಸದ್ದು‌ ಕೇಳಿಸಿದ್ದು. ಈ ಕುರಿತು ಸ್ಥಳೀಯರು ಗಾಭರಿಗೊಂಡು ನೋಡಿದಾಗ ಕಾರಿನಲ್ಲಿ ಬಂದ ತಂಡ ಈ ಕ್ರತ್ಯ ಎಸಗಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ನಗರಸಭಾ ಸದಸ್ಯರಾದ ದೇವಳದ ವಾಸ್ತು ಇಂಜಿನಿಯರ್ ಸ್ಥಳಕ್ಕೆ ಬೇಟಿ ನೀಡಿದ್ದಾರೆ. ದೇವಳದಲ್ಲಿ ಯಾವುದೇ ಉತ್ಸವ ಇಲ್ಲದ ಸಮಯ ದೇವಳದ ಕಡೆಯಿಂದ ಸಿಡಿಮದ್ದು ಸ್ಪೋಟಿಸಿಲ್ಲ ಬದಲಾಗಿ ಯಾರೋ ಅಪರಿಚಿತರು ಕಾರಿನಲ್ಲಿ ಬಂದು ಸ್ಪೋಟಕ ಸಿಡಿಸಿ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದ್ದು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.