Breaking News

ಯುಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ ಮಿಥುನ್‌ರಾಜ್ ಕಂಠದಲ್ಲಿ ಮೂಡಿಬಂದ ‘ಗೆಜ್ಜೆಗಿರಿ ಬೆಳಗ್ಂಡ್’ ಹಾಡು

Puttur_Advt_NewsUnder_1
Puttur_Advt_NewsUnder_1

 

@ ಸಿಶೇ ಕಜೆಮಾರ್

ಪುತ್ತೂರು: ಈಗಾಗಲೇ ಬ್ರಹ್ಮಕಲಶೋತ್ಸವದ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ತುಳುನಾಡಿನ ವೀರಪುರುಷರಾದ ಕೋಟಿ ಚೆನ್ನಯ, ಮಾತೆ ದೇಯಿ ಬೈದ್ಯೆತಿಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಬಗ್ಗೆ ಸಾಹಿತ್ಯವಿರುವ ಬಹಳಷ್ಟು ಹಾಡುಗಳು ಲೋಕಾರ್ಪಣೆಗೊಂಡಿವೆ. ಈ ಎಲ್ಲಾ ಹಾಡುಗಳ ಮಧ್ಯೆ ಭಕ್ತಸಾಗರದಲ್ಲಿ ಭಾರೀ ಸದ್ದು ಮಾಡಿದ ಹಾಡು ‘ಮಾಯೊದ ಸಿರಿ, ಸತ್ಯೊದ ತಿರಿ ಲಕ್ಕ್ ತೋಜುಂಡು…ಗೆಜ್ಜೆಗಿರಿ ಬೆಳಗ್ಂಡ್…’. ವಿಜಯ ಕರ್ನಾಟಕ ದೈನಿಕದ ವರದಿಗಾರ ಸುಧಾಕರ ಸುವರ್ಣ ತಿಂಗಳಾಡಿ ಸಾಹಿತ್ಯ ರಚಿಸಿರುವ ಈ ಹಾಡಿಗೆ ಯುವ ಗಾಯಕ, ಸಂಗೀತ ನಿರ್ದೇಶಕ ಕಬಕದ ಮಿಥುನ್‌ರಾಜ್ ವಿದ್ಯಾಪುರ ಸಂಗೀತ ನೀಡಿ ಹಾಡಿದ್ದಾರೆ. ಶ್ರೀ ಕ್ಷೇತ್ರದ ದೃಶ್ಯಾವಳಿಗಳನ್ನು ಸೇರಿಸಿಕೊಂಡು ಮಾಡಿದ ಈ ವಿಡಿಯೋ ಹಾಡನ್ನು ಈಗಾಗಲೇ ಲಕ್ಷಾಂತರ ಮಂದಿ ಯೂಟ್ಯೂಬ್‌ನಲ್ಲಿ ವೀಕ್ಷಿಸಿದ್ದಾರೆ. ಗೆಜ್ಜೆಗಿರಿಯ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಈ ಹಾಡು ಬಹಳಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು ಪ್ರತಿಯೊಬ್ಬರು ವಾಟ್ಸಫ್ ಸ್ಟೇಟಸ್‌ನಲ್ಲೂ ರಾರಾಜಿಸಿದೆ.

ಗೆಜ್ಜೆಗಿರಿಯಲ್ಲಿ ಮೂಡಿದ ಪವಾಡಕ್ಕೂ ಈ ಹಾಡು
ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಗೆಜ್ಜೆಗಿರಿಯ ಸತ್ಯಧರ್ಮ ಚಾವಡಿಯೊಳಗೆ ಒಂದು ಪವಾಡ ನಡೆದು ಹೋಯಿತು. ಬಾಗಿಲು ಹಾಕಿದ್ದ ಚಾವಡಿಯೊಳಗೆ ಬಿಡಿಸಲಾಗಿದ್ದ ರಂಗೋಲಿಯ ಮೇಲೆ ಎಂಟು ಹೆಜ್ಜೆಗಳು ಮೂಡಿದ್ದವು. ಇದು ಸಾಕ್ಷಾತ್ ಕೋಟಿ ಚೆನ್ನಯರ ಹೆಜ್ಜೆಗುರುತುಗಳೇ ಆಗಿವೆ ಎಂದು ಭಕ್ತರು ನಂಬಿದರು. ಈ ಹೆಜ್ಜೆಗುರುತುಗಳಿರುವ ವಿಡಿಯೋಗೆ ಕೂಡ ಇದೇ ಹಾಡನ್ನು ಬಳಸಿಕೊಳ್ಳಲಾಗಿತ್ತು.

ವಿದ್ಯಾಪುರದ ಮಿಥುನ್‌ರಾಜ್
ಚಿಕ್ಕ ಪ್ರಾಯದಲ್ಲೇ ಸಂಗೀತದ ಬಗ್ಗೆ ಒಲವು ಇರಿಸಿಕೊಂಡಿದ್ದ ಮಿಥುನ್‌ರಾಜ್‌ರವರು ಆರ್ಕೆಸ್ಟ್ರಾದಿಂದಲೇ ಮೇಲೆ ಬಂದವರರಾಗಿದ್ದಾರೆ. ತನ್ನ ಮಾವನ ಪ್ರೇರಣೆಯಿಂದ ಭಜನಾ ಸಂಕೀರ್ತನೆ ಮೂಲಕ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟ ಇವರು ಮಂಗಳೂರಿನ ಗಣರಾಜ್ ಭಟ್‌ರವರಿಂದ ೬ ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡಿದ್ದಾರೆ. ಹಾಗೆ ಕಬಕದ ವಿಜಯಲಕ್ಷ್ಮೀ ಭಟ್‌ರವರಿಂದಲೂ ಸಂಗೀತ ತರಗತಿ ಪಡೆದುಕೊಂಡಿದ್ದಾರೆ.

ಹಲವು ಆಲ್ಬಮ್ ಸಾಂಗ್‌ಗಳಿಗೆ ಧ್ವನಿ ನೀಡಿದ್ದಾರೆ
ಮಿಥುನ್‌ರಾಜ್‌ರವರು ಈಗಾಗಲೇ ಹಲವು ಆಲ್ಬಮ್ ಸಾಂಗ್‌ಗಳಿಗೆ ಧ್ವನಿ ನೀಡಿದ್ದಾರೆ. ತುಳು, ಕನ್ನಡ ಸಿನಿಮಾದಲ್ಲೂ ಇವರ ಕಂಠಸಿರಿ ಛಾಪು ಮೂಡಿಸಿದೆ. ತುಳು ಸಿನಿಮಾ `ಅಪ್ಪೆ ಟೀಚರ್’, ಕನ್ನಡದ ವಿ.ಮನೋಹರ್ ಸಂಗೀತ ನಿರ್ದೇಶನದ `ಗೀತಾ ಬ್ಯಾಂಗಲ್ ಸ್ಟೋರ್’ ಇತ್ಯಾದಿ ಚಿತ್ರಗಳಲ್ಲಿ ಹಾಡಿದ್ದಾರೆ. ಬಹಳಷ್ಟು ಹಾಡುಗಳು ಇವರ ಸಂಗೀತ ನಿರ್ದೇಶನದಲ್ಲಿ ಹೊರಬಂದಿವೆ. ಹಲವು ಕಡೆಗಳಲ್ಲಿ ಸನ್ಮಾನ,ಬಿರುದುಗಳನ್ನು ಪಡೆದುಕೊಂಡ ಇವರು ` ಗಾಯನ ರತ್ನ’ `ಗಡಿನಾಡ ಧ್ವನಿ’ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕಲಾಂಜಲಿ ಕ್ರಿಯೇಷನ್ಸ್ ಕೊಡುಗೆ
`ಗೆಜ್ಜೆಗಿರಿ ಬೆಳಗ್ಂಡ್’ ಹಾಡನ್ನು ಕಲಾಂಜಲಿ ಕ್ರೀಯೇಷನ್ಸ್ ಲೋಕಾರ್ಪಣೆ ಮಾಡಿದೆ. ಅಕ್ಷಯ್ ನಾಯಕ್ ಕರೋಪಾಡಿ ಮತ್ತು ಶಶಿಧರ್ ಕಿನ್ನಿಮಜಲು ನಿರ್ಮಾಣದಲ್ಲಿ ಮೂಡಿಬಂದ ಹಾಡನ್ನು ಕಬಕದ ಶ್ರೀರಾಜ್ ಮ್ಯೂಸಿಕ್‌ವಲ್ಡ್ ಸ್ಟುಡಿಯೋದಲ್ಲಿ ರೇಕಾರ್ಡಿಂಗ್ ಮಾಡಲಾಗಿದೆ. ಕೀಬೋರ್ಡ್‌ನಲ್ಲಿ ಅಶ್ವಿನ್ ಪುತ್ತೂರು, ತಾಸೆ ಮತ್ತು ರಿದಂ ಸಚಿನ್ ಪುತ್ತೂರು ನೀಡಿದ್ದಾರೆ. ವಿಡಿಯೋ ಎಡಿಟಿಂಗ್ ನಮ್ಮ ಟಿವಿಯ ರಾಜೇಶ್ ಭಂಡಾರಿ ಮಾಡಿದ್ದಾರೆ. ಒಟ್ಟಿನಲ್ಲಿ ಈ ಹಾಡು ಲಕ್ಷಾಂತರ ಮಂದಿಯ ಮನದಾಳದಲ್ಲಿ ನಿಂತಿದ್ದು ಮಾತ್ರ ಸತ್ಯ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.