Breaking News

ಶಿರಾಡಿ: ಅನಿಲ ಸಾಗಾಟದ ವೇಳೆ ಅಪಾಯ ಸಂಭವಿಸಿದಲ್ಲಿ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಬಗ್ಗೆ ‘ಅಣಕು ಕಾರ್ಯಾಚರಣೆ’

Puttur_Advt_NewsUnder_1
Puttur_Advt_NewsUnder_1


ನೆಲ್ಯಾಡಿ: ಅನಿಲ ಸಾಗಾಟದ ವೇಳೆ ಹೆದ್ದಾರಿ ಮಧ್ಯೆ ಏನಾದರೂ ಅಪಾಯ ಸಂಭವಿಸಿದಲ್ಲಿ ಯಾವ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬಹುದು ಎಂಬ ಕುರಿತ ಚಾಲಕರಿಗೆ ಮಾಹಿತಿ ನೀಡುವ ಸಲುವಾಗಿ ‘ಅಣಕು ಕಾರ್ಯಾಚರಣೆ’ ರಾಷ್ಟ್ರೀಯ ಹೆದ್ದಾರಿ ೭೫ರ ಕೆಂಪುಹೊಳೆಯ ಶಿರಾಡಿ ಘಾಟಿ ಪ್ರದೇಶದಲ್ಲಿ ನಡೆಯಿತು.

ರಾಷ್ಟ್ರೀಯ ಹೆದ್ದಾರಿ ೭೫ರ ಮೂಲಕ ಮಂಗಳೂರಿನಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗೆ ಅನಿಲ ಸಾಗಾಟ ಮಾಡುವ ನೂರಾರು ಲಾರಿಗಳು ಸಂಚರಿಸುತ್ತಲೇ ಇರುತ್ತವೆ. ಇಂತಹ ಸಂದರ್ಭದಲ್ಲಿ ಹೆದ್ದಾರಿ ಮಧ್ಯೆ ಅಪಘಾತ ಸಂಭವಿಸಿದಲ್ಲಿ ಅಥವಾ ವಾಹನ ಪಲ್ಟಿಯಾಗಿ ಅನಿಲ ಸೋರಿಕೆಯಾಗುವ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬಹುದು ಎಂಬುದರ ಕುರಿತು ಲಾರಿ ಚಾಲಕರುಗಳಿಗೆ ಸಿಕಾಲ್ ಲಾಜಿಸ್ಟಿಕ್ ಕಂಪೆನಿಯ ವತಿಯಿಂದ ಅಣಕು ಕಾರ್‍ಯಾಚರಣೆ ಮೂಲಕ ಮಾಹಿತಿ ನೀಡಲಾಯಿತು. ಅಗ್ನಿಶಾಮಕ, ಪೊಲೀಸ್, ಆಂಬುಲೆನ್ಸ್, ಸ್ಕ್ರೇನ್‌ನ ಸಹಾಯದಿಂದ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆಯೂ ತಿಳಿಸಿಕೊಡಲಾಯಿತು. ತುರ್ತು ಸಂದರ್ಭಗಳಲ್ಲಿ ನಾಗರಿಕರ ಜೀವಕ್ಕೆ ಅಪಾಯವಾಗದ ರೀತಿಯಲ್ಲಿ ಏನೇನು ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಕುರಿತು ಚಾಲಕರಿಗೆ ತಿಳಿಸಲಾಯಿತು. ಸಿಕಾಲ್ ಲಾಜಿಸ್ಟಿಕ್ ಕಂಪೆನಿಯ ಸುಂದರೇಶ್, ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯ ಮಂಜೇಗೌಡ, ಶಿವಕುಮಾರ್, ಪರಶುರಾಮ, ಸ್ಕ್ರೇನ್‌ನ ಮಾಲಕ ಸುಭಾಷ್ ಗುಂಡ್ಯ, ಸಕಲೇಶಪುರ ಅಗ್ನಿಶಾಮಕ ದಳದ ಎಮ್.ಸಿ.ಕೇಶವ ಗೌಡ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಮೊಬೈಲ್ ನೆಟ್‌ವರ್ಕ್ ಸಹ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಇಂಧನ ಸಾಗಾಟದ ವಾಹನಗಳು ಅಪಘಾತಕ್ಕೆ ಒಳಗಾದಲ್ಲಿ ಯಾವ ರೀತಿಯಲ್ಲಿ ಪರಿಸ್ಥಿತಿ ಹತೋಟಿಗೆ ತರಬಹುದು ಎಂಬ ಕುರಿತು ಲಾರಿ ಚಾಲಕರಿಗೆ ತಿಳಿಸಿಕೊಡಲು ಹಾಗೂ ವಿವಿಧ ಇಲಾಖೆಗಳ ಕಾರ್ಯವೈಖರಿ ಪರೀಕ್ಷಿಸುವ ಸಲುವಾಗಿ ಇಂತಹ ಅಣಕು ಕಾರ್‍ಯಾಚರಣೆ ಪ್ರತೀ ವರ್ಷ ನಡೆಸಲಾಗುತ್ತಿದೆ -ಪ್ರಶಾಂತ್ ಕುಮಾರ್ ಮೇನೇಜರ್, ಸಿಕಾಲ್ ಲಾಜಿಸ್ಟಿಕ್ಸ್ ಕಂಪೆನಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.