ಮುಂಡ್ರಬೈಲು ರಜತಾದ್ರಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಇಡ್ಕಿದು ಗ್ರಾಮದ ಮುಂಡ್ರಬೈಲು ರಜತಾದ್ರಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎ.೨೪ರಿಂದ ನಡೆಯಲಿರುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಪೂರ್ವಭಾವಿಯಾಗಿ ಭಕ್ತಾಧಿಗಳ ಸಭೆಯು ಶ್ರೀ ಧಾಮ ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ  ನಡೆಯಿತು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ವಿವಿಧ ಸಮಿತಿಗಳನ್ನು ರಚಿಸಲಾಯಿತು.

ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಕೃಷ್ಣಪ್ಪ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿ ಸಯೋಜಕ ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾದ ಪ್ರಕಾಶ್ ಕೆ.ಎಸ್. ಉರಿಮಜಲು, ಸುರೇಶ್ ಕೆ.ಎಸ್. ಮುಕ್ಕುಡ, ಅಧ್ಯಕ್ಷರಾದ ಈಶ್ವರ ನಾಯ್ಕ್, ಚಂದ್ರಶೇಖರ ಪುತ್ತೂರು, ರಾಮಣ್ಣ ಪೂಜಾರಿ ಅರ್ಬಿ, ಮದನ ಗೌಡ, ಜಗದೀಶ್ ದೇವಸ್ಯ, ರೋಹಿತ್ ನೇರ್ಲಾಜೆ, ಈಶ್ವರ ಗೌಡ ನಾಯ್ತೊಟ್ಟು, ಕೃಷ್ಣಪ್ಪ ಸಪಲ್ಯ ಕೆಮನಾಜೆ, ಪದ್ಮನಾಭ ಕೊಡೆಂಚರ ಪಾಲು, ನವೀನ್ ಮುಂಡ್ರೆಬೈಲು ಸಹಿತ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.