Breaking News

ಮಾ.5-7: ಆಲಂಕಾರಿನಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ

Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಯುವ ಭಾರತ ಸೈಬರ್ ಸೆಂಟರ್ ಆಲಂಕಾರು, ಭಾರತೀಯ ಅಂಚೆ ಇಲಾಖೆ ಪುತ್ತೂರು, ಗ್ರಾಮ ಪಂಚಾಯತ್ ಆಲಂಕಾರು,ಜೆ.ಸಿ.ಐ ಆಲಂಕಾರು, ಸ.ಹಿ.ಪ್ರಾಥಮಿಕ ಶಾಲೆ ಆಲಂಕಾರು ಇದರ ಸಹಯೋಗದಲ್ಲಿ ಅಧಾರ್ ನೋಂದಣಿ ಮತ್ತು ತಿದ್ದುಪಡಿಯ ಶಿಬಿರವು ಮಾ.5 ರಿಂದ ಮಾ.7ರ ತನಕ ನಡೆಯಲಿದ್ದು ಇದರ ಉದ್ಘಾಟಣೆಯು ಆಲಂಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಪುತ್ತೂರು ಉಪವಿಭಾಗದ ಅಂಚೆ ಇಲಾಖೆಯ ಸಹಾಯಕ ಅಧೀಕ್ಷಕರಾದ ಲೋಕನಾಥ ರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೇರವೇರಿಸಿ ಆಧಾರ್ ನೋಂದಣಿ ಮತ್ತು ತಿದ್ದುಪಡಿಯ ಮಹತ್ವ ತಿಳಿಸಿದರು. ಶಾಲಾ ಎಸ್.ಡಿ.ಎಂ.ಸಿ ಅದ್ಯಕ್ಷ ಸಭಾದ್ಯಕ್ಷತೆ ವಹಿಸಿ, ಆಲಂಕಾರು ಜೆ.ಸಿ.ಐ ನ ಅದ್ಯಕ್ಷ ಸತೀಶ್ ಜಿ.ಆರ್.ಮುಖ್ಯ ಅತಿಥಿಯಾಗಿ ಪಾಲ್ಗೋಂಡು ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು, ಸಿ.ಆರ್.ಪಿ ಪ್ರದೀಪ್ ಬಾಕಿಲ ಸ್ವಾಗತಿ,ಶಾಲಾ ಮುಖ್ಯಗುರುಗಳಾದ ಕೆ.ಪಿ ನಿಂಗರಾಜು ಧನ್ಯವಾದ ಸಮರ್ಪಿಸಿದರು, ಯುವ ಭಾರತ ಸೈಬರ್ ಸೆಂಟರ್ ಆಲಂಕಾರಿನ ಮಾಲಕರಾದ ನೋಣಯ್ಯ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.