ಮಿತ್ತೂರು ಅಂಗನವಾಡಿಯಲ್ಲಿ ವಾರ್ಷಿಕ ಸಮ್ಮಿಲನ ವಿದಾಯೋತ್ಸವ ಕಾರ್ಯಕ್ರಮ


ವಿಟ್ಲ: ದ.ಕ.ಜಿ.ಪಂ.ಅಂಗನವಾಡಿ ಕೇಂದ್ರ ಮಿತ್ತೂರು ಇಡ್ಕಿದು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಯೋಜನೆ ಇಲಾಖೆ ವಿಟ್ಲ, ಮತ್ತು ಪೋಷಕರ, ಸ್ತ್ರೀ ಶಕ್ತಿ ಗುಂಪಿನ ಸದಸ್ಯರ ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ವಾರ್ಷಿಕ ಸಮ್ಮಿಲನ ವಿದಾಯೋತ್ಸವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ತಾ.ಪಂ ಸದಸ್ಯೆ ವನಜಾಕ್ಷಿ.ಎಸ್.ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇಡ್ಕಿದು ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಡ್ಕಿದು ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ಈಶ್ವರನಾಯ್ಕ, ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಬಿ.ಸುಧಾಕರ ಶೆಟ್ಟಿ ಬೀಡಿನಮಜಲು, ಇಡ್ಕಿದು ಗ್ರಾ. ಪಂ.ಅಭಿವೃದ್ದಿ ಅಧಿಕಾರಿ ಗೋಕುಲ್ ದಾಸ್ ಭಕ್ತ , ಮಿತ್ತೂರು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಆದಂ. ಎಂ.ಎಂ.ಎಸ್, ಪಂ.ಸದಸ್ಯೆ ಜಗದೀಶ್ವರಿ, ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಜೈನಾಬಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಭವಾನಿ ವರದಿ ವಾಚಿಸಿದರು. ಪಂ. ಉಪಾಧ್ಯಕ್ಷರಾದ ಎಂ.ಸುಧೀರ್‌ಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಮಕ್ಕಳ ಪೋಷಕರಾದ ಜ್ಯೋತಿ ಸ್ವಾಗತಿಸಿ, ಅಂಗನವಾಡಿ ಸಹಾಯಕಿ ಸರಿತಾ.ಡಿ.ಶೆಟ್ಟಿ ವಂದಿಸಿದರು. ಬಳಿಕ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.