ಬರ್ತ್‌ಡೇ ಪಾರ್ಟಿಗೆ ಸಿಡಿಮದ್ದು ಪ್ರದರ್ಶನ – ದೇವಳದ ಗದ್ದೆಯಲ್ಲಿ ಸ್ಪೋಟಕ ಸಿಡಿದ ಪ್ರಕರಣ, ಸ್ಟೋಟಕ ಪ್ರಕರಣ ಬೇಧಿಸಿದ ಪುತ್ತೂರು ಪೊಲೀಸರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಗೆ ಸ್ವಿಫ್ಟ್ ಕಾರೊಂದರಲ್ಲಿ ಬಂದ ಅಪರಿಚಿತರು ದೇವಳದ ಅನ್ನಛತ್ರದ ಬಳಿ ಸಿಡಿಮದ್ದು ಮಾದರಿಯ ಸ್ಪೋಟಕ ಸಿಡಿಸಿ ಪರಾರಿಯಾದ ಘಟನೆ ಮಾ.4 ರಂದು ತಡರಾತ್ರಿ ನಡೆದ ಬಗ್ಗೆ ಸುದ್ದಿಯಾಗುತ್ತಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಯುವಕರ ತಂಡವೊಂದು ದೇವಳದ ಗದ್ದೆಗೆ ಬಂದು ಸ್ನೇಹಿತನೋರ್ವನ ಬರ್ತ್‌ಡೆ ಪಾರ್ಟಿ ಮಾಡಿ ಸಿಡಿಮದ್ದು ಪ್ರದರ್ಶನ ನಡೆಸಿದ್ದಾರೆ ಎಂದು ಘಟನೆಯ ಒಟ್ಟು ವಿಚಾರವನ್ನು ಬೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾ.೪ರಂದು ರಾತ್ರಿ ಗಂಟೆ 12 ಗಂಟೆ ಸುಮಾರಿಗೆ ದೇವಳದ ಅನ್ನ ಛತ್ರದ ಬಳಿ ಸಿಡಿಮದ್ದು ಮಾದರಿಯ ಸ್ಪೋಟಕದ ಭಾರಿ ಸದ್ದು ಮಾಡಿತ್ತು. ಈ ಕುರಿತು ಸ್ಥಳೀಯರು ಗಾಭರಿಗೊಂಡು ನೋಡಿದಾಗ ಕಾರಿನಲ್ಲಿ ಬಂದ ತಂಡ ಈ ಕೃತ್ಯ ಎಸಗಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ನಗರಸಭಾ ಸದಸ್ಯರಾದ ದೇವಳದ ವಾಸ್ತು ಇಂಜಿನಿಯರ್ ಸ್ಥಳಕ್ಕೆ ಬೇಟಿ ನೀಡಿದ್ದರು. ದೇವಳದಲ್ಲಿ ಯಾವುದೇ ಉತ್ಸವ ಇಲ್ಲದ ಸಮಯ ದೇವಳದ ಕಡೆಯಿಂದ ಸಿಡಿಮದ್ದು ಸ್ಪೋಟಿಸಿಲ್ಲ ಬದಲಾಗಿ ಯಾರೋ ಅಪರಿಚಿತರು ಕಾರಿನಲ್ಲಿ ಬಂದು ಸ್ಪೋಟಕ ಸಿಡಿಸಿ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿತ್ತು. ಪೊಲೀಸರು ಕೂಡಾ ರಾತ್ರಿ ಸ್ಥಳಕ್ಕೆ ಬಂದು ದೇವಳದ ಸಿ.ಸಿ ಕ್ಯಾಮರ ಮತ್ತು ಠಾಣೆಯ ಸಿ.ಸಿ.ಕ್ಯಾಮರ ಪರಿಶೀಲಿಸಿ ಕಾರನ್ನು ಪತ್ತೆ ಮಾಡಿದರು. ವಿಚಾರಣೆ ವೇಳೆ ಹಾಸನದ ಮತ್ತು ಪುತ್ತೂರು ಮೂಲಕ ಯುವಕರ ತಂಡ ಸ್ನೇಹಿತನೋರ್ವನ ಬರ್ತ್‌ಡೆ ಪಾರ್ಟಿ ಮಾಡಲು ದೇವಳದ ಗದ್ದಗೆ ಬಂದು ರಾತ್ರಿ ಗಂಟೆ 12ಕ್ಕೆ ಬರ್ತ್‌ಡೆ ಕೇಕ್ ಕಟ್ ಮಾಡಿ ಬಳಿಕ ಆಕಾಶಕ್ಕೆ ಚಿಮ್ಮುವ ಬಣ್ಣ ಬಣ್ಣದ ಸಿಡಿಮದ್ದು ಪ್ರದರ್ಶನ ಮಾಡಿರುವುದಾಗಿ ತಿಳಿದು ಬಂದಿದೆ. ಇದರಿಂದಾಗಿ ಒಟ್ಟು ಸಾರ್ವಜನಿಕರ ಮನದಲ್ಲಿದ್ದ ಆತಂಕ ದೂರ ಆಗಿದೆ. ಘಟನೆಯ ಕುರಿತು ಕಾನೂನಾತ್ಮಕವಾಗಿ ತನಿಖೆ ನಡೆಸಬೇಕೆಂದು ದೇವಳದ ಆಡಳಿತಾಧಿಕಾರಿ ಮತ್ತು ಕಾರ್ಯನಿರ್ವಹಣಾಧಿಕಾರಿ ಹಾಗೂ ಬಿಜೆಪಿ ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲದಿಂದ ಠಾಣೆಗೆ ದೂರು ನೀಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.