ಮಾ.7-8: ನಿಡ್ಪಳ್ಳಿ ಕರ್ನಪ್ಪಾಡಿ ಗರಡಿಯ ವಾರ್ಷಿಕ ನೇಮೋತ್ಸವ

Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ: ಕರ್ನಪ್ಪಾಡಿ ಪವಿತ್ರ ನೆಲದಲ್ಲಿ ಸುಮಾರು 5 ಶತಮಾನಗಳ ಹಿಂದೆ ಮೂಡಿಬಂದ ಮಾತೆ ದೇಯಿ ಬೈದೆತಿಯ ಅವಳಿ ಪುತ್ರರಾದ ಕೋಟಿ- ಚೆನ್ನಯರು ನಡೆದಾಡಿದ ಕರ್ನಪ್ಪಾಡಿ ಗರಡಿಯಲ್ಲಿ ವಾರ್ಷಿಕ ನೇಮೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಲ್  ಶ್ರೀ ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ ಮಾ.7 ಮತ್ತು 8 ರಂದು ನಡೆಯಲಿದೆ.
ಕಾರ್ಯಕ್ರಮಗಳು; ಮಾ.7 ರಂದು ಶನಿವಾರ ಬೆಳಿಗ್ಗೆ 10 ರಿಂದ ಗಣಹೋಮ, ಬ್ರಹ್ಮರ ತಂಬಿಲ ಮತ್ತು ನಾಗತಂಬಿಲ. ಸಂಜೆ ಗಂಟೆ 6 ರಿಂದ ಭಜನಾ ಕಾರ್ಯಕ್ರಮ. ರಾತ್ರಿ ಗಂಟೆ 7 ಕ್ಕೆ ಕೊಡಮಂತಾಯ ದೈವದ ಭಂಡಾರ ತೆಗೆದು ರಾತ್ರಿ ಗಂಟೆ 10 ರಿಂದ ನೇಮ.
ಮಾ.8  ಸಂಜೆ ಗಂಟೆ 5 ಕ್ಕೆ ಹೋಮ, ಗಂಟೆ 6 ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಂತರ ರಾತ್ರಿ ಗಂಟೆ 8 ಕ್ಕೆ ಪ್ರಸಾದ ವಿತರಣೆ  ನಂತರ ಅನ್ನಸಂತರ್ಪಣೆ. ರಾತ್ರಿ ಗಂಟೆ 10 ಕ್ಕೆ ಬೈದರುಗಳ ಗರಡಿ ಇಳಿಯುವುದು.ರಾತ್ರಿ ಗಂಟೆ 2 ಕ್ಕೆ ಕಿನ್ನಿದಾರು ಗರಡಿ ಇಳಿಯುವುದು. ಬೆಳಿಗ್ಗೆ ಗಂಟೆ 4 ಕ್ಕೆ ದರ್ಶನ ಪಾತ್ರಿಗಳ ಸೇಟ್.ಬೆಳಿಗ್ಗೆ ಗಂಟೆ 5.30 ಕ್ಕೆ ಬೈದರುಗಳ ಸೇಟ್. ಮಾ.9 ಬೆಳಿಗ್ಗೆ ಗಂಟೆ 6 ಕ್ಕೆ ಪ್ರಸಾದ ವಿತರಣೆ ನಡೆಯಲಿದೆ ಎಂದು ಸೇವಾ ಸಮಿತಿ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು ಹಾಗೂ ಕರ್ನಪ್ಪಾಡಿ ಮನೆಯವರು ತಿಳಿಸಿದ್ದಾರೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.