ನೂಜಿಬಾಳ್ತಿಲ ಬೆಥನಿ ಕಾಲೇಜ್ ಬಳಿ ಬಸ್ ತಂಗುದಾಣ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1


ಕಡಬ : ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವತಿಯಿಂದ ನೂಜಿಬಾಳ್ತಿಲ ಗ್ರಾಮದ ಬೆಥನಿ ವಿದ್ಯಾ ಸಂಸ್ಥೆಯ ಬಳಿ ನಿರ್ಮಿಸಲಾದ ಬಸ್ ತಂಗುದಾನವನ್ನು ಮಾ.5ರಂದು ಉದ್ಘಾಟಿಸಲಾಯಿತು. ನೂಜಿಬಾಳ್ತಿಲ ಬೆಥನಿ ವಿದ್ಯಾಸಂಸ್ಥೆಯ ನಿರ್ದೇಶಕರಾದ ವಂ.ಫಾ.ಸಕರಿಯಾಸ್ ನಂದಿಯಾಟ್ ಉದ್ಘಾಟಿಸಿ ಮಾತನಾಡಿ, ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಗ್ರಾಮವು ಶೀಘ್ರ ಗತಿಯಲ್ಲಿ ಬೆಳೆಯುತ್ತಿದೆ. ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬಂದಿಗಳ ಪ್ರಾಮಾಣಿಕ, ನಿಷ್ಠೆಯುತ ಕೆಲಸ ಕಾರ್ಯಗಳಿಂದ ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಪ್ರದೇಶಗಳು ಅಭಿವೃದ್ಧಿ ಕಾಣುತ್ತಿದ್ದು ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಪ್ರಶಸ್ತಿ ಗಳಿಸಲು ಅರ್ಹವಾಗಿದೆ ಎಂದ ಅವರು ಸಂಸ್ಥೆಯ ಬಳಿ ಬಸ್ ತಂಗುದಾಣ ನಿರ್ಮಿಸಿದಕ್ಕೆ ಕೃತಜ್ಞತೆ ಸಲ್ಲಿಸಿದರು.

ಜಿ.ಪಂ ಸದಸ್ಯ ಪಿ.ಪಿ ವರ್ಗೀಸ್, ಮಾತನಾಡಿ ಜಿ.ಪಂ ,ತಾ.ಪಂ, ಹಾಗೂ ಗ್ರಾ.ಪಂ ಅನುದಾನವನ್ನು ಹೊಂದಿಸಿಕೊಂಡು ಈ ಭಾಗದ ಎಲ್ಲಾ ರಸ್ತೆ, ಕುಡಿಯುವ ನೀರು, ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಶ್ರಮಿಸುತ್ತಿದ್ದು ಗ್ರಾ.ಪಂ ವ್ಯಾಪ್ತಿಯ ಹೆಚ್ಚಿನ ಎಲ್ಲಾ ಭಾಗಗಳಲ್ಲಿ ಅಚ್ಚು ಕಟ್ಟಾದ ಬಸ್ಸು ತಂಗುದಾಣಗಳನ್ನು ನಿರ್ಮೀಸಲಾಗಿದೆ. ಈ ಬೆಥನಿ ವಿದ್ಯಾಸಂಸ್ಥೆಗೆ ಊರಿನ ಪರಿಸರದ ವಿದ್ಯಾರ್ಥಿಗಳಲ್ಲದೆ ಬೇರೆ-ಬೇರೆ ಪ್ರದೇಶಗಳಿಂದ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಬರುತ್ತಿದ್ದು ಬಸ್ಸಿನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೂ ಅನುಕೂಲವಾಗುವಂತೆ ಬೆಥನಿ ವಿದ್ಯಾಸಂಸ್ಥೆಯ ಎದುರು ಬಸ್ಸು ತಂಗುದಾಣ ನಿರ್ಮಿಸಲಾಗಿದೆ. ಪ್ರತಿಯೊಬ್ಬರೂ ಸ್ವಚ್ಚತೆಯನ್ನು ಕಾಪಾಡುವುದರೊಂದಿಗೆ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದ್ದರು.

ಈ ಸಂದರ್ಭದಲ್ಲಿ ತಾ.ಪಂ. ಸದಸ್ಯ ಗಣೇಶ್ ಕೈಕುರೆ, ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ಸದಸ್ಯರಾದ ಕೆ.ಜೆ.ತೋಮಸ್, ರಜಿತಾಪದ್ಮನಾಭ, ಜಾನಕಿ ಕಲ್ಲುಗುಡ್ಡೆ, ಪಿ.ಯು.ಸ್ಕರಿಯಾ, ರಾಜು ಗೋಳಿಯಡ್ಕ, ಹೊನ್ನಮ್ಮ, ಅಮ್ಮಣಿ ಜೋಸೆಫ್, ಪುಷ್ಪಲತಾ, ಪ್ರಮುಖರಾದ ಗುರುವಪ್ಪ ಕಲ್ಲುಗುಡ್ಡೆ, ವಸಂತ ಕುಬುಲಾಡಿ, ತೋಮಸ್ ಇಡೆಯಾಳ, ರತ್ನಶ್ರೀ ಸಂಸ್ಥೆಯ ಮಾಲಕ ಸತೀಶ ಭಟ್ , ಬೆಥನಿ ಪ್ರೌಡಶಾಲಾ ಮುಖ್ಯ ಶಿಕ್ಷಕ ಸುಬ್ರಮಣ್ಯ ಭಟ್, ಹಿರಿಯ ಶಿಕ್ಷಕ ತೋಮಸ್ ಎ.ಕೆ, ಶಾರೀರಿಕ ಶಿಕ್ಷಕ ಮತ್ತಾಯಿ ಒ.ಜೆ, ಗುಮಾಸ್ತ ಯೋಹನ್ನಾನ್, ಧರ್ಮ ಭಗಿನಿಯರು , ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು, , ಸಾರ್ವಜನಿಕರು, ಉಪಸ್ಥಿತರಿದ್ದರು. ಪಂ.ಅಭಿವೃದ್ಧಿ ಅಧಿಕಾರಿ ಆನಂದ ಸ್ವಾಗತಿಸಿ, ಬೆಥನಿ ಕಾಲೇಜಿನ ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್. ವಂದಿಸಿದರು. ಗ್ರಾ.ಪಂ. ಸಿಬಂದಿಗಳು ಸಹಕರಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು.

ನೂಜಿಬಾಳ್ತಿಲ ಗ್ರಾ.ಪಂ ವತಿಯಿಂದ ನಿರ್ಮಿಸಲಾಗಿರುವ ಇಲ್ಲಿಯ ಬಸ್ಸು ನಿಲ್ದಾಣದಿಂದ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗಿದ್ದು ಬಸ್ಸು ನಿಲ್ದಾಣದ ಸ್ವಚ್ಚತೆಯ ಬಗ್ಗೆ ಸಂಸ್ಥೆಯಿಂದ ಸಂಪೂರ್ಣ ಜವಾಬ್ದಾರಿ ವಹಿಸಲಾಗುವುದು ಜಾರ್ಜ್ ಟಿ.ಎಸ್  ಪ್ರಾಚಾರ್ಯರು ಬೆಥನಿ ಪ.ಪೂ ಕಾಲೇಜ್ ನೂಜಿಬಾಳ್ತಿಲ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.