ಮಾ.7: ಮುಗೇರಡ್ಕ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ನೇಮೋತ್ಸವ

ಪುತ್ತೂರು: ನರಿಮೊಗರು ಗ್ರಾಮದ ಮುಗೇರಡ್ಕ ಪೊಸಮೆನ್ಪದವು ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ಶ್ರೀ ಕಲ್ಕುಡ-ಕಲ್ಲುರ್ಟಿ ದೈವಗಳ ನೇಮೋತ್ಸವ ಮತ್ತುಪಂಜುರ್ಲಿ, ಗುಳಿಗ ದೈವಗಳ ಪ್ರತಿಷ್ಠಾಪನೆ ಹಾಗೂ ನೇಮೋತ್ಸವ ಮಾ.7ರಂದು ನಡೆಯಲಿದೆ.

ಬೆಳಿಗ್ಗೆ ಗಣಪತಿ ಯಾಗ, ಪಂಜುರ್ಲಿ, ಗುಳಿಗ ದೈವಗಳ ಪ್ರತಿಷ್ಠಾಪನೆ, ಕಲಶಾಭಿಷೇಕ, ಸರ್ವ ಪೂಜೆ, ಶ್ರೀ ಸ್ತಯನಾರಾಯಣ ಪೂಜೆ, ಅನ್ನಸಂತರ್ಪಣೆ ಹಾಗೂ ಸಂಜೆ ದೈವಗಳ ಭಂಡಾದ ತೆಗೆದು ರಾತ್ರಿ ಕಲ್ಕುಡ ಮತ್ತುಕಲ್ಲುರ್ಟಿ ದೈವಗಳ ನೇಮೋತ್ಸವ, ಅನ್ನಸಂತರ್ಪಣೆ, ತುಳು ಹಾಸ್ಯಮಯ ನಾಟಕ ಪುಳಿಮುಂಚಿ ನಡೆಯಲಿದೆ. ಬಳಿಕ ಪಂಜುರ್ಲಿ ಮತ್ತು ಗುಳಿಗ ದೈವಗಳ ನೇಮೋತ್ಸವ ಜರಗಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.