ಮಾ.19: ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲ ಚಿಂತನೆ

Puttur_Advt_NewsUnder_1
Puttur_Advt_NewsUnder_1


ಕಾಣಿಯೂರು: ಕುದ್ಮಾರು ಗ್ರಾಮದ ಪಾಂಡವ ಪ್ರತಿಷ್ಠೆಯ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರ ನಡೆಸುವ ಉದ್ದೇಶದಿಂದ ಅಷ್ಟಮಂಗಲ ಚಿಂತನೆಗೆ ದೈವಜ್ಞ ಚೆಕೋಡು ಸುಬ್ರಹ್ಮಣ್ಯ ಭಟ್ ಅವರು ಮಾ ೧೯ರಂದು ದಿನ ನಿಗದಿ ಪಡಿಸಿದ್ದಾರೆ. ದೇವಸ್ಥಾನದ ವತಿಯಿಂದ ಅನುವಂಶೀಯ ಮೊಕ್ತೇಸರರಾದ ಜನೇಶ್ ಭಟ್ ಬರೆಪ್ಪಾಡಿ, ಈಶ್ವರಮಂಗಲ ಶ್ರೀ ಕ್ಷೇತ್ರ ಹನುಮಗಿರಿಯ ಧರ್ಮದರ್ಶಿ ನನ್ಯ ಅಚ್ಯುತ ಮೂಡಿತ್ತಾಯ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಅಷ್ಟಮಂಗಲ ಸಮಿತಿಯ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿ, ಕಾರ್ಯದರ್ಶಿ ಲೋಕೇಶ್ ಬಿ.ಎನ್ ಬರೆಪ್ಪಾಡಿ ಹಾಗೂ ಸಮಿತಿ ಪದಾಧಿಕಾರಿಗಳು ದೈವಜ್ಞರನ್ನು ಭೇಟಿಯಾಗಿ ದಿನ ನಿಗದಿ ಮಾಡಿದರು. ಮಾ.19ರಂದು ಬರೆಪ್ಪಾಡಿ ದೇವಸ್ಥಾನದಲ್ಲಿ ಪ್ರಶ್ನಾ ಚಿಂತನೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪದಾಧಿಕಾರಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.