ರಾಮಕುಂಜ: ಎಮ್.ಜಿ.ಗುಬ್ಬಿ, ಎ.ಎನ್.ಕೊಳಂಬೆಯವರಿಗೆ ಬೀಳ್ಕೊಡುಗೆ

Puttur_Advt_NewsUnder_1
Puttur_Advt_NewsUnder_1


ರಾಮಕುಂಜ: ಶ್ರೀ ರಾಮಕುಂಜೇಶ್ವರ ಸಂಸ್ಕೃತ ಪಾಠಶಾಲೆಯಲ್ಲಿ 1987ರಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯಕ್ಕೆ ಸೇರಿ 33 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಫೆ.29ರಂದು ನಿವೃತ್ತರಾದ ಎಮ್.ಜಿ.ಗುಬ್ಬಿ ಹಾಗೂ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ 1981ರಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯಕ್ಕೆ ಸೇರಿ 39 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಫೆ.29ರಂದು ನಿವೃತ್ತರಾದ ಎ.ಎನ್ ಕೊಳಂಬೆಯವರಿಗೆ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಪಾಠಶಾಲೆಯ ವತಿಯಿಂದ ಫೆ.3ರಂದು ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ಶಾಲಾ ಶಿಕ್ಷಕರಾದ ವೆಂಕಟೇಶ್ ದಾಮ್ಲೆ, ದಿನೇಶ್, ಪುಷ್ಪಾವತಿ, ಬಾಲಚಂದ್ರ ಮುಚ್ಚಿಂತಾಯ, ಕೆ.ಜೆ.ಜನಾರ್ದನ, ಪ್ರವೀಣ್‌ಕುಮಾರ್, ಪ್ರಫುಲ್ಲಾ ರೈ, ಜ್ಯೋತಿ, ರುದ್ರನಾಯ್ಕ್, ಮಲ್ಲಿಕಾರವರು ನಿವೃತ್ತರಾದ ಎಮ್.ಜಿ.ಗುಬ್ಬಿ ಹಾಗೂ ಎ.ಎನ್. ಕೊಳಂಬೆಯವರೊಂದಿಗಿನ ಒಡನಾಟದ ಕ್ಷಣಗಳನ್ನು ಹಂಚಿಕೊಂಡರು. ಶಾಲಾ ಮುಖ್ಯ ಶಿಕ್ಷಕ ಸತೀಶ್ ಭಟ್‌ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕರಾದ ಕೆ.ಜೆ.ಜನಾರ್ದನ ಸ್ವಾಗತಿಸಿ, ಬಾಲಚಂದ್ರ ಮುಚ್ಚಿಂತ್ತಾಯ ವಂದಿಸಿದರು. ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು, ಶ್ರೀ ರಾಮಕುಂಜೇಶ್ವರ ಸಂಸ್ಕೃತ ಪಾಠಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.