ದೆಹಲಿ ಹತ್ಯಾಕಾಂಡ: ಎಸ್ಸೆಸ್ಸೆಫ್ ದ.ಕ.ಈಸ್ಟ್ ಝೋನ್ ವತಿಯಿಂದ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ದೆಹಲಿ ಹತ್ಯಾಕಾಂಡ ಹಾಗೂ ಅಸಂವಿಧಾನಿಕ NRC, CAA, NPR ಕಾನೂನಿನ ವಿರುದ್ಧ ಎಸ್ಸೆಸ್ಸೆಫ್ ಈಸ್ಟ್ ಝೋನ್ ವತಿಯಿಂದ ಘಟಕದ ಅಧ್ಯಕ್ಷ ಅಯ್ಯೂಬ್ ಮಹ್ಲರಿ ಉಸ್ತಾದರ ನೇತೃತ್ವದಲ್ಲಿ  ಮಿತ್ತೂರು ಕೆಜಿಎನ್ ಕ್ಯಾಂಪಸ್’ನಲ್ಲಿ  ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಜಿಲ್ಲಾ ಕೋಶಾಧಿಕಾರಿ ಮುಹಮ್ಮದಲಿ ತುರ್ಕಳಿಕೆಯವರು ಮಾತನಾಡಿ ಕೋಮುವಾದಿ ಶಕ್ತಿಗಳು ಅಲ್ಪಸಂಖ್ಯಾತ, ಹಿಂದುಳಿದ, ವರ್ಗದ ಬಡ ಜನರನ್ನು ಟಾರ್ಗೆಟ್ ಮಾಡಿ ನಡೆಸುತ್ತಿರುವ ಅನ್ಯಾಯ, ದಬ್ಬಾಳಿಕೆ,ಹಿಂಸಾಚಾರದ ವಿರುದ್ಧ ಎಸ್ಸೆಸ್ಸೆಫ್ ಪ್ರತಿ ಘಟಕಗಳಲ್ಲಿಯೂ ಧ್ವನಿ ಎತ್ತಲಿದೆ ಎಂದ ಅವರು ಇವತ್ತಿನ ಸನ್ನಿವೇಶದಲ್ಲಿ ನಿರಂತರವಾಗಿ ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನ ನಾಶ ನಷ್ಟ ಮಾಡಿ ಧೀನ ಧಮನಿತರನ್ನೇ ದೇಶದ್ರೋಹಿಗಳನ್ನಾಗಿ ಚಿತ್ರೀಕರಿಸುವ ಕೆಲಸ ಆಡಳಿತ ರೂಡ ಸರಕಾರದಿಂದಲೇ ನಡೆಯುತ್ತಿರುವುದು ಖೇದಕರ, ಹಲವಾರು ಅಮಾಯಕರ ಸಾವು ನೋವುಗಳಿಗೆ ನಾಶ ನಷ್ಟಗಳಿಗೆ ಕಾರಣವಾದ ದೆಹಲಿ ಹಿಂಸಾಚಾರವನ್ನು ಎಸ್ಸೆಸ್ಸೆಫ್ ದ.ಕ.ಈಸ್ಟ್ ಝೋನ್ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು. ಕಾನೂನಿನ ವಿರುದ್ಧ ಧ್ವನಿ ಎತ್ತುವುದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದನ್ನು ದಮನಿಸುವ ಷಡ್ಯಂತ್ರ ಸರ್ಕಾರ ಹಾಗೂ ಕಾನೂನು ಪಾಲಕರ ಭಾಗದಿಂದ ನಡೆಯುತ್ತಿದ್ದು ಇಂತಹ ಘಟನೆಗಳ ಹಾಗೂ ಕರಾಳ ಕಾನೂನುಗಳ ವಿರುದ್ದ ನಾವೆಲ್ಲಾ ಧ್ವನಿ ಎತ್ತಬೇಕು ಎಂದು ಅವರು ಕಾರ್ಯಕರ್ತರಿಗೆ ಮನವಿ ಮಾಡಿದರು.

ಜಿಲ್ಲಾ ನಾಯಕರಾದ ರಶೀದ್ ಹಾಜಿ ವಗ್ಗ, ತೌಸೀಫ್ ಸಅದಿ ಹರೇಕಳ, ಶರೀಫ್ ಬೇರ್ಕಳ, ಅಬ್ದುರ್ರಹ್ಮಾನ್ ಶರಫಿ ವಿಟ್ಲ, ಫೈಝಲ್ ಝುಹ್ರಿ ಕಲ್ಲಗುಂಡಿ, ಹಕೀಂ ಕಳಂಜಿಬೈಲು, ಇಕ್ಬಾಲ್ ಮಾಚಾರ್, ರಝಾಕ್ ಸಅದಿ ಕೊಡಿಪ್ಪಾಡಿ, ಮುಸ್ತಫಾ ಉರುವಾಲುಪದವು, ಈಸ್ಟ್ ಝೋನ್ ಪ್ರ.ಕಾರ್ಯದರ್ಶಿ ಶಫೀಕ್ ಮಾಸ್ಟರ್ ತಿಂಗಳಾಡಿ, ಕೋಶಾಧಿಕಾರಿ ರಫೀಖ್ ಅಹ್ಸನಿ ಕುಪ್ಪೆಟ್ಟಿ ಸಹಿತ ಇನ್ನಿತರ ಜಿಲ್ಲಾ, ಝೋನ್, ಡಿವಿಷನ್ ನಾಯಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.