Breaking News

50 ವರ್ಷದ ಹಿಂದಿನ ಬೇಡಿಕೆ ಈಡೇರಿದ ಖುಷಿಯಲ್ಲಿ ಗ್ರಾಮಸ್ಥರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬರೋಬ್ಬರಿ 50 ವರ್ಷಗಳಿಂದ ಇಲ್ಲಿನ ರಸ್ತೆಯೊಂದರ ಕಾಂಕ್ರಿಟೀಕರಣ ಬೇಡಿಕೆ ಈ ಬಾರಿ ಈಡೇರಿದೆ. ಜಿಪಂ ಅಧ್ಯಕ್ಷರ ಕ್ಷೇತ್ರದಲ್ಲಿ ನಡೆದ ಅಭಿವೃದ್ದಿ ಕಾಮಗಾರಿಯೊಂದು ಗ್ರಾಮಸ್ಥರಲ್ಲಿ ಸಂತಸಕ್ಕೆ ಕಾರಣವಾಗಿದೆ.

ಒಳಮೊಗ್ರು ಗ್ರಾಮದ ಒಂದನೇ ವಾರ್ಡಿನಲ್ಲಿರುವ ಕೊಯಿಲತ್ತಡ್ಕ- ಮಗಿರೆ ರಸ್ತೆಗೆ ಈ ಬಾರಿ ಕಾಂಕ್ರಿಟೀಕರಣ ಭಾಗ್ಯ ದೊರೆತಿದೆ. ಮುಖ್ಯ ರಸ್ತೆಯಿಂದ ಕೆಲವೇ ಮೀಟರ್‌ಗಳ ದೂರ ಇದ್ದರೂ ಈ ರಸ್ತೆಯು ಕುಗ್ರಾಮದ ರಸ್ತೆಗಿಂತ ಹದಗೆಟ್ಟಿತ್ತು. ಮಳೆಗಾಲದಲ್ಲಿ ಕೆಸರಿನಿಂದ ಜಾರುವ ಸಮಸ್ಯೆಯಾದರೆ ಬೇಸಿಗೆಯಲ್ಲೂ ವಾಹನಗಳು ತೆರಳದ ಸ್ಥಿತಿ ಉಂಟಾಗಿತ್ತು. ಈ ರಸ್ತೆಯನ್ನು ಅಭಿವೃದ್ದಿ ಮಾಡಬೇಕೆಂದು ಕಳೆದ ೫೦ ವರ್ಷಗಳಿಂದ ಇಲ್ಲಿನ ಸ್ಥಳೀಯರು ವಿವಿಧ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರು ಆದರೆ ಅವರು ನೀಡಿದ್ದ ಭರವಸೆ ಇದುವರೆಗೂ ಈಡೇರಿರಲಿಲ್ಲ.

ಭರವಸೆ ಕೊಟ್ಟಿದ್ದ ಶಾಸಕರು
ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಭೇಟಿ ನೀಡಿದ್ದ ಸಂಜೀವ ಮಠಂದೂರು ತಾನು ಗೆದ್ದುಬಂದಲ್ಲಿ ರಸ್ತೆಯ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದರು , ಜಿಪಂ ಅಭ್ಯರ್ಥಿಯಾಗಿದ್ದ ಮೀನಾಕ್ಷಿ ಶಾಂತಿಗೋಡುರವರು ಭರವಸೆ ನೀಡಿದ್ದರು. ಜಿಪಂ ಅಧ್ಯಕ್ಷೆಯವರು ತನ್ನ ನಿಧಿಯಿಂದ ಈ ರಸ್ತೆಗೆ ೩.೨೫ ಲಕ್ಷ ಅನುದಾನ ಇರಿಸಿದ್ದು ಒಟ್ಟು ೮೧ ಮೀಟರ್ ರಸ್ತೆ ಕಾಂಕ್ರಿಟೀಕರಣ ಮಾಡಲಾಗಿದೆ. ಉಳಿದ ೫೦ ಮೀಟರ್ ರಸ್ತೆಗೆ ಶಾಸಕರ ನಿಧಿಯಿಂದ ಕಾಂಕ್ರಿಟೀಕರಣವಾಗಲಿದೆ. ಕೊಟ್ಟ ಭರವಸೆಯಂತೆ ಜಿಪಂ ಅಧ್ಯಕ್ಷರು ಹಾಗೂ ಶಾಸಕರು ಜನರ ಬೇಡಿಕೆಯನ್ನು ಈಡೇರಿಸಿದ್ದಾರೆ. ಇದೇ ರಸ್ತೆಗೆ ತಾಪಂ ಅಧ್ಯಕ್ಷರಾದ ರಾಧಾಕೃಷ್ಣ ಬೋರ್ಕರ್ ರವರು ತನ್ನ ನಿಧಿಯಿಂದ ದಾರಿದೀಪದ ವ್ಯವಸ್ಥೆಯನ್ನು ಮಾಡುವುದಾಗಿ ಭರವಸೆ ನೀಡಿದ್ದು ಜಿಪಂ, ತಾಪಂ ಹಾಗೂ ಶಾಸಕರ ಮುತುವರ್ಜಿಯಿಂದ ಗ್ರಾಮಸ್ಥರ ಬೇಡಿಕೆ ಬಹುಕಾಲದ ಬಳಿಕ ಈಡೇರಿದೆ.

ಕೊಟ್ಟ ಭರವಸೆಯನ್ನು ಈಡೇರಿಸಿದ್ದೇನೆ, ಗ್ರಾಮದ ಒಂದನೇ ವಾರ್ಡಿಗೆ ಲಕ್ಷಾಂತರ ರೂ ಅನುದಾನವನ್ನು ನೀಡಿದ್ದೇನೆ. ಅಗತ್ಯ ಬೇಡಿಕೆ ಅಥವಾ ಬಹುಕಾಲದಿಂದ ಜನರು ಸಂಕಷ್ಟ ಎದುರಿಸುತ್ತಿದ್ದ ರಸ್ತೆಗೆ ಅನುದಾನವನ್ನು ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನವನ್ನು ನೀಡುತ್ತೇನೆ – ಮೀನಾಕ್ಷಿ ಶಾಂತಿಗೋಡು, ಜಿಪಂ ಅಧ್ಯಕ್ಷರು

ಒಳಮೊಗ್ರು ಗ್ರಾಮದ ಅಭಿವೃದ್ದಿಗೆ ಜಿಪಂ, ತಾಪಂ ಮತ್ತು ಶಾಸಕರ ನಿಧಿಯಿಂದ ವಿವಿಧ ವಾರ್ಡುಗಳಿಗೆ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಒಂದನೇ ಹಂತದ ಗುದ್ದಲಿಪೂಜೆ ಕಾಮಗಾರಿ ನಡೆದು ಕಾಮಗಾರಿಯೂ ಪೂರ್ಣಗೊಂಡಿದೆ. ಮುಂದೆ ಎರಡನೇ ಹಂತದ ಗುದ್ದಲಿ ಪೂಜೆ ನಡೆದು ಕಾಮಗಾರಿ ನಡೆಸಲಾಗುತ್ತದೆ. ಶಾಸಕರು ಗ್ರಾಮಸ್ಥರ ಬೇಡಿಕೆಯನ್ನು ಹಂತಹಂತವಾಗಿ ಈಡೇರಿಸುತ್ತಾರೆ ಎಂಬ ಭರವಸೆ ನಮಗಿದೆ – ನಿತೀಶ್‌ಕುಮಾರ್ ಶಾಂತಿವನ ಬಿಜೆಪಿ ಮಂಡಲ ಕಾರ್ಯದರ್ಶಿ

ಗ್ರಾಮದಲ್ಲಿ ಬಹುಬೇಡಿಕೆಯ ಕಾಮಗಾರಿಗೆ ಅನುದಾನವನ್ನು ನೀಡುವಂತೆ ನಾವು ಮನವಿ ಮಾಡಿದ್ದೆವು. ಅದರಂತೆ ಜಿಪಂ ಮತ್ತು ಶಾಸಕರ ನಿಧಿಯಿಂದ ಅನುದಾನ ಬಿಡುಗಡೆಯಾಗಿದೆ. ಇನ್ನೂ ಅನೇಕ ಬೇಡಿಕೆಗಳು ನಮ್ಮ ಮುಂದಿದೆ. ಅವೆಲ್ಲವನ್ನೂ ಶಾಸಕರ ಗಮನಕ್ಕೆ ತರುತ್ತೇವೆ. ಅಭಿವೃದ್ದಿಯಲ್ಲಿ ಯಾವುದೇ ರಾಜಕೀಯ ನಾವು ಮಾಡಬಾರದು – ರಾಜೇಶ್ ರೈ ಪರ್ಪುಂಜ, ಅಧ್ಯಕ್ಷರು ಬಿಜೆಪಿ ಗ್ರಾಮಸಮಿತಿ ಒಳಮೊಗ್ರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.