ಪುತ್ತೂರು: ಇಲ್ಲೊಬ್ಬರು ಅಮೆಜಾನ್ ಮನಿ ಟ್ರಾನ್ಸಫರ್( ಅಮೇಜಾನ್ ಪೇ) ಆಪ್ ಮೂಲಕ ಹಣ ಕಳುಹಿಸಲು ಹೋಗಿ 14,966 ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ. ಸಂಪ್ಯ ಕುಕ್ಕಾಡಿ ನಿವಾಸಿ ಉಮೇಶ್ ಕೆ.ಎಂಬವರಿಗೆ ಅವರ ಗೆಳೆಯ ಜೈಸನ್ ಎಂಬವರು ಅಮೆಜಾನ್ ಮನಿ ಟ್ರಾನ್ಸಫರ್ ಆಪ್ ಮೂಲಕ 3438 ರೂಪಾಯಿಗಳನ್ನು ಕಳುಹಿಸಿದ್ದರು. ಜೈಸನ್ರವರ ಅಕೌಂಟ್ನಿಂದ ಹಣ ಕಟ್ ಆಗಿದೆಯೇ ವಿನಹ ಉಮೇಶ್ರವರ ಅಕೌಂಟ್ಗೆ ಹಣ ಪಾವತಿಯಾಗಿರಲಿಲ್ಲ. ಅಲ್ಲದೆ ಅಮೇಜಾನ್ ಯು.ಪಿ.ಐನಲ್ಲಿ ಪೆಂಡಿಗ್ ಎಂದು ತೋರಿಸುತ್ತಿತ್ತು. ಈ ಬಗ್ಗೆ ಜೈಸನ್ರವರಲ್ಲಿ ವಿಚಾರಿಸಿದ ಉಮೇಶ್ರವರು ಹಣ ಸಂದಾಯವಾಗದಿರುವ ಬಗ್ಗೆ ಅಮೇಜಾನ್ ಕಸ್ಟಮರ್ ಸರ್ವೀಸ್ ಸೆಂಟರ್ ನಂಬರ್ಗೆ ಕರೆ ಮಾಡಿ ವಿಷಯ ತಿಳಿಸಿದ್ದರು.
ಈ ವೇಳೆ ಕರೆ ಸ್ವೀಕರಿಸಿದ ವ್ಯಕ್ತಿಯೊಬ್ಬರು ಉಮೇಶ್ರವರ ಹತ್ತಿರ ಅಮೇಜಾನ್ ಯು.ಪಿ.ಐ ಲಿಂಕ್ ಆಗಿರುವ ಮೊಬೈಲ್ ನಂಬರ್ ಮತ್ತು ಎಟಿಎಂ ಕಾರ್ಡ್ನ 14 ಡಿಜಿಟ್ ನಂಬರ್ ಅನ್ನು ಕೇಳಿ ಪಡೆದುಕೊಂಡಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಉಮೇಶ್ರವರ ಅಕೌಂಟ್ನಿಂದ14966 ರೂಪಾಯಿಗಳು ಮೂರು ಕಂತುಗಳಲ್ಲಿ ಡ್ರಾ ಆಗಿದೆ. ಈ ಬಗ್ಗೆ ಉಮೇಶ್ರವರು ಸಂಪ್ಯ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಇದು digital ಇಂಡಿಯಾದ ತಪ್ಪಲ್ಲ.. ನಿಮ್ಮ ತಪ್ಪು. ಯಾರಿಗೋ ಫೋನ್ ಮಾಡಿ ಕಾರ್ಡ್ ನಂಬರ್ ಯಾಕೆ ಹೇಳ್ಬೇಕು. ಸರ್ಕಾರ ಬ್ಯಾಂಕ್ ಮೂಲಕ ಪದೇಪದೇ ಹೇಳಿಕೊಡ್ತಿದ್ದಾರೆ.. ಯಾರಿಗೂ otp, atm ನಂಬರ್ ಯಾವುದೇ ಕಾರಣಕ್ಕೂ ಕೊಡಬಾರದು ಅಂತ. Transactin ಪೆಂಡಿಂಗ್ ಆದ್ರೆ ಕಂಪ್ಲೈಂಟ್ ರೆಜಿಸ್ಟರ್ ಮಾಡ್ಬೇಕು. ಕರೆ ಮಾಡಿ ಕಾರ್ಡ್, ಮೊಬೈಲ್ ನಂಬರ್ ಹೇಲೋದಲ್ಲ. ತಪ್ಪು ಮಾಡಿ ಉಳಿದವರ ದಾರಿ ತಪ್ಪಿಸುವ ಕೆಲಸ ಮಾಡಬೇಡಿ.
ಮೊದಲೆಲ್ಲಾ ಕ್ಯಾಶ್ ಅಥವಾ ಚೆಕ್ ಮುಖಾಂತರ ವ್ಯವಹಾರ ನಡೆಯುತ್ತಿತ್ತು. ಇದೀಗ ಡಿಜಿಟಲ್ ಇಂಡಿಯಾ ಎಂಬ ಮಾನ್ಯ ಪ್ರಧಾನ ಮಂತ್ರಿ ಯ ಕನಸಿಗೆ ಬೆಂಬಲಿಸಲು ಎಲ್ಲವೂ ಆನ್ಲೈನ್ ಮಯವಾಗಿದೆ. ಇದರಿಂದಾಗಿಯೇ ಹೆಚ್ಚಿನವರು ಮೋಸ ಹೋಗುತ್ತಿದ್ದಾರೆ.