Breaking News

ಶ್ರೀರಾಮ ಅಶ್ವಥ ಕಟ್ಟೆ ಸಂಪ್ಯಾಡಿ ರಾಮಕುಂಜದಲ್ಲಿ 34ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ

Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಶ್ರೀ ರಾಮ ಅಶ್ವಥ ಕಟ್ಟೆ ಪೂಜಾ ಸಮಿತಿ ಸಂಪ್ಯಾಡಿ ರಾಮಕುಂಜ ಇದರ ಆಶ್ರಯದಲ್ಲಿ 34ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ಇನ್ನಿತರ ಧಾರ್ಮಿಕ ಕಾರ‍್ಯಕ್ರಮಗಳು ಶ್ರೀ ರಾಮ ಅಶ್ವಥ ಕಟ್ಟೆ ಸಂಪ್ಯಾಡಿ ರಾಮಕುಂಜದಲ್ಲಿ ಮಾ.7ರಂದು ನಡೆಯಿತು

ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಅನಂತ ಉಡುಪ ರವರ ನೇತೃತ್ವದಲ್ಲಿ ಬೆಳಿಗ್ಗೆ ಅಶ್ವಥ ಪೂಜೆ, ಗಣಪತಿ ಹೋಮ ನಡೆದು ಪ್ರಸಾದ ವಿತರಣೆ ನಡೆದ ಬಳಿಕ ಸಂಜೆ ಸಾರ್ವಜನಿಕ ಸತ್ಯನಾರಾಯಣ ಪೂಜೆ ಮತ್ತು ಸಜಿಪದ ಪ್ರದೀಪ್ ಭಟ್ ರವರಿಂದ ಕಥಾ ಪ್ರವಚನ ನಡೆದು, ಮಹಾಮಂಗಳಾರತಿಯಾಗಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ನಂತರ ರಾಮಕೃಷ್ಣ ಕಾಟುಕುಕ್ಕೆ ಬಳಗದವರಿಂದ ದಾಸ ಭಕ್ತಿ ಗಾನ ಕಾರ‍್ಯಕ್ರಮ ನಡೆಯಿತು. ವೃತಧಾರಿ ಭಕ್ತಾಧಿಗಳು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಸತ್ಯನಾರಾಯಣ ದೇವರ ಪೂಜೆಯಲ್ಲಿ ಕುಳಿತು ತಮ್ಮ ಸೇವೆಯನ್ನು ಸಲ್ಲಿಸಿದರು. ಪೂಜೆಯು ಚೆಂಡೆ ಹಾಗೂ ಇನ್ನಿತರ ವಾಲಗದೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಆಗಮಿಸಿದ ಭಕ್ತಾಧಿಗಳು ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ, ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ನಾರಾಯಣ ಭಟ್.ಟಿ, ಅಧ್ಯಕ್ಷರಾದ ಸದಾಶಿವ ಶೆಟ್ಟಿ ಮಾರಂಗ, ಸಂಚಾಲಕರಾದ ಪೂವಪ್ಪ ಗೌಡ ಸಂಪ್ಯಾಡಿ, ಗೌರವ ಸಲಹೆಗಾರರಾದ ರಮೇಶ ಉಪಾಧ್ಯಯ ಕಲ್ಲೇರಿ, ರಾಧಾಕೃಷ್ಣ ಕುವೆಚ್ಚಾರ್, ರಮೇಶ ಎನ್.ಸಿ ತಾವೂರು, ಧರ್ಮಪಾಲ ರಾವ್ ಕಜೆ, ನಾಗರಾಜ್ ಭಟ್ ಸಂಪ್ಯಾಡಿ, ಸಂಜೀವ ಶೆಟ್ಟಿ ಕೆದುಂಬಾಡಿ, ಪದ್ಮಪ್ಪ ಗೌಡ ಕೆದುಂಬಾಡಿ, ರಾಜೇಶ್ ಶೆಟ್ಟಿ ಸಂಪ್ಯಾಡಿ, ಲಕ್ಷ್ಮೀನಾರಾಯಣ ರಾವ್ ಆತೂರು, ಬಾಲಾಜಿ ಶೆಟ್ಟಿ ಕುಂಡಾಜೆ, ಬಾಲಕೃಷ್ಣ ಗೌಡ ಕತ್ಲಡ್ಕ, ಹರೀಶ್ ಭಟ್ ತೋಟ, ಯತೀಶ್ ಸಂಪ್ಯಾಡಿ, ಉಪಾಧ್ಯಕ್ಷರಾದ ಕೇಶವ ಗೌಡ ಗಾಣಂತಿ, ಜಿನ್ನಪ್ಪ ಗೌಡ ಮಾರಂಗ, ಅಂಗಾರ ಗೌಡ ಪಟ್ಟೆ, ಲೋಕಯ್ಯ ಗೌಡ ಸಂಪ್ಯಾಡಿ, ಅಮ್ಮಿ ಗೌಡ ರಾಮಂಡ, ಹರೀಶ ಗೌಡ ಕಾಜರುಕ್ಕು, ಕಾರ‍್ಯದರ್ಶಿ ರಮೇಶ ಸಂಪ್ಯಾಡಿ, ಕೋಶಾಧಿಕಾರಿ ದುರ್ಗಾಪ್ರಸಾದ್ ಪಟ್ಟೆ, ಜೊತೆಕಾರ‍್ಯದರ್ಶಿಗಳಾದ ಮೋನಪ್ಪ ಗೌಡ ಸಂಪ್ಯಾಡಿ, ಅಶೋಕ ಪೂಜಾರಿ ಕೊಂಡ್ಯಾಡಿ, ಚಂದ್ರಶೇಖರ ಗೌಡ ಗಾಣಂತಿ, ಪ್ರಮೋದ್ ಬಾರಿಂಜ, ಸಂತೋಷ್ ಗೌಡ, ಲೋಕೇಶ್ ಸಂಪ್ಯಾಡಿ, ದಾಮೋದರ ಸಂಪ್ಯಾಡಿ, ಆನಂದ ಸಂಪ್ಯಾಡಿ, ಕುಶತ್ ಸಂಪ್ಯಾಡಿ, ಪೂವಪ್ಪ ಕೊಂಡ್ಯಾಡಿ, ಶ್ರೀಧರ ಅಡ್ಕರೆ ಗುಂಡಿ ಹಾಗೂ ಪ್ರಮುಖ ಕಾರ‍್ಯಕರ್ತರು ಮತ್ತು ಊರ ಪರಪೂರ ಭಕ್ತಾಧಿಗಳು ಕಾರ‍್ಯಕ್ರಮದಲ್ಲಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.