ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದ 27ನೇ ವಾರ್ಷಿಕೋತ್ಸವ, ದೈವಗಳ ನೇಮೋತ್ಸವ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂದಿರದ 27ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ದೈವಗಳ ನೇಮೋತ್ಸವವು ಮಾ.8ರಂದು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ರಾತ್ರಿ ಭಜನಾ ಮಂದಿರದ ಗೌರವಾಧ್ಯಕ್ಷ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿ, ಬೆಳ್ಳಿಹಬ್ಬವನ್ನು ಆಚರಿಸಿ ಇದೀಗ ೨೭ನೇ ವರ್ಷದ ಆಚರಣೆಯನ್ನು ಆಚರಿಸುತ್ತಿರುವ ಶ್ರೀ ನಂದಿಕೇಶ್ವರ ಭಜನಾ ಮಂದಿರದಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀ ದೇವರ ಹಾಗೂ ದೈವ ದೇವರ ಕೃಪೆಗೆ ಪಾತ್ರರಾಗಬೇಕು ಎಂದರು.

ಬೆಳಿಗ್ಗೆ ಗಣಹೋಮ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ನಾಗ ಮತ್ತು ದೈವಗಳಿಗೆ ತಂಬಿಲ ಸೇವೆ, ಪ್ರಸಾದ ವಿತರಣೆ, ತಿರುಮಲ ತಿರುಪತಿ ಟ್ರಸ್ಟ್‌ನಲ್ಲಿ ನೋಂದಾಯಿಸಿಕೊಂಡ ವೈದೇಹಿ ಮತ್ತು ವೈಷ್ಣವಿ ಮಹಿಳಾ ಭಜನಾ ತಂಡ ಬೊಳ್ವಾರು ಪುತ್ತೂರು ಇವರಿಂದ ಭಜನಾ ಕಾರ್ಯಕ್ರಮ ಜರಗಿತು. ಮಾ.7ರಂದು ರಾತ್ರಿ ಗಂಟೆ ಭಜನಾ ಕಾರ್ಯಕ್ರಮ ನೆರವೇರಿತ್ತು. ಶ್ರೀ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮದ ಬಳಿಕ ಶ್ರೀ ರಕ್ತೇಶ್ವರಿ, ಶ್ರೀ ಕಲ್ಲುರ್ಟಿ ಮತ್ತು ಶ್ರೀ ಗುಳಿಗ ದೈವಗಳ ನಡಾವಳಿ ಜರಗಿತು. ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.

ಈರ್ವರಿಗೆ ಸನ್ಮಾನ/ಮನರಂಜಿಸಿದ ನಾಟಕ ‘ನಾಲಯಿ ಮಗುರುಜಿ’:
ಮೆಸ್ಕಾಂನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸುಧಾಕರ್ ಶೆಟ್ಟಿ ಹಾಗೂ ಕಳೆದ 27 ವರ್ಷಗಳಿಂದ ಭಜನಾ ಮಂದಿರದಲ್ಲಿ ನಿರಂತರ ಸೇವೆ ನೀಡುತ್ತಾ ಬಂದಿರುವ ಚಂದ್ರ ಪೂಜಾರಿ ಕೂಡಮರರವರಿಗೆ ಬ್ರಹ್ಮಶ್ರೀ ವೇದಮೂರ್ತಿ ಲಕ್ಷ್ಮೀಶ ತಂತ್ರಿಯವರು ಈ ಸಂದರ್ಭದಲ್ಲಿ ಶಾಲು ಹಾಗೂ ಪೇಟ ತೊಡಿಸಿ ಸನ್ಮಾನಿಸಿದರು. ರಾತ್ರಿ ಕಲಾಶ್ರೀ ಬೆದ್ರ ತಂಡದ ಕುಸಲ್ದ ಕಲಾವಿದರಿಂದ ಬಲೆ ತೆಲಿಪಾಲೆ ಖ್ಯಾತಿಯ ಪ್ರವೀಣ್ ಮರ್ಕಮೆ ತಂಡದ ಅಭಿನಯದ ‘ನಾಲಯಿ ಮಗುರುಜಿ’ ತುಳು ಹಾಸ್ಯಮಯ ನಾಟಕವು ಪ್ರೇಕ್ಷಕರನ್ನು ಮನರಂಜಿಸಿತು. ರಘುನಾಥ್ ರೈ ಕಾರ್ಯಕ್ರಮ ನಿರ್ವಹಿಸಿದರು.

 

ಮೌನಪ್ರಾರ್ಥನೆ:
ಶ್ರೀ ನಂದಿಕೇಶ್ವರ ಭಜನಾ ಮಂದಿರದಲ್ಲಿ ಜರಗುವ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡು ಬಂದಿದ್ದೂ, ಇತ್ತೀಚೆಗೆ ಅಗಲಿದ ನಂದಿಕೇಶ್ವರ ಭಜನಾ ಮಂದಿರದ ಗೌರವಾಧ್ಯಕ್ಷರಾದ ಬ್ರಹ್ಮಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ಕೆಮ್ಮಿಂಜೆರವರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಭಜನಾ ಮಂದಿರದ ಗೌರವ ಸಲಹೆಗಾರರಾದ ಉದಯ ಕುಮಾರ್ ತಂತ್ರಿ, ಸುಜಯಕೃಷ್ಣ ತಂತ್ರಿ, ಮೋಹನ್ ನಾಕ್ ಬೆದ್ರಾಳ, ರಾಜ್‌ಕುಮಾರ್ ರೈ ಬೆದ್ರಾಳ, ಮನೋಜ್ ಕುಮಾರ್ ಬೆದ್ರಾಳ, ಪದ್ಮನಾಭ ಪೂಜಾರಿ ಬೆದ್ರಾಳ, ಕೇಶವ ಪೂಜಾರಿ ಬೆದ್ರಾಳ, ನವೀನ್ ಚಂದ್ರ ನಾಕ್ ನೆಲ್ಲಿಕೇರಿ, ಅಧ್ಯಕ್ಷರಾದ ಸಂಜೀವ ನಾಕ್ ನೆಲ್ಲಿಕೇರಿ ಹಾಗೂ ಶ್ರೀಪಾಲ್ ಜೈನ್ ಬೆದ್ರಾಳ, ಉಪಾಧ್ಯಕ್ಷರಾದ ಅನೂಪ್ ಟಿ.ವಿ ಬೆದ್ರಾಳ, ಕಾರ್ಯದರ್ಶಿಗಳಾದ ಡಿ.ಶರತ್‌ಚಂದ್ರ ನಾಕ್ ನೆಲ್ಲಿಕೇರಿ ಹಾಗೂ ಹರೀಶ್ ಕುಲಾಲ್ ಬೆದ್ರಾಳ, ಜೊತೆ ಕಾರ್ಯದರ್ಶಿಗಳಾದ ಉಮೇಶ್ ಆಚಾರ್ಯ ಬೆದ್ರಾಳ ಹಾಗೂ ಹೊನ್ನಪ್ಪ ಗೌಡ ಬೆದ್ರಾಳ, ಕೋಶಾಧಿಕಾರಿಗಳಾದ ಪ್ರವೀಣ್ ಶೆಟ್ಟಿ ಬೆದ್ರಾಳ ಹಾಗೂ ಪ್ರಶಾಂತ್ ಕುಲಾಲ್ ಬೆದ್ರಾಳ, ಸಂಘಟನಾ ಕಾರ್ಯದರ್ಶಿಗಳಾದ ಕಿರಣ್ ಗೌಡ ಬೆದ್ರಾಳ ಹಾಗೂ ಗಣೇಶ್ ಆಚಾರ್ಯ ಬೆದ್ರಾಳ ಮತ್ತು ಸದಸ್ಯರಾದ ಕೊರಗಪ್ಪ ಕುಲಾಲ್ ಬೆದ್ರಾಳ, ನಾರಾಯಣ ಕುಲಾಲ್ ಬೆದ್ರಾಳ, ರಾಕೇಶ್ ಗೌಡ ಬೆದ್ರಾಳ, ಗಂಗಾಧರ್ ರೈ ಬೆದ್ರಾಳ, ಜಯಕರ ಶೆಟ್ಟಿ ಬೆದ್ರಾಳ, ಹರ್ಷಿತ್ ಕುಲಾಲ್ ಬೆದ್ರಾಳ, ಮೋಹನ್‌ದಾಸ್ ಕುಲಾಲ್ ಬೆದ್ರಾಳ, ಸುರೇಶ್ ಆಚಾರ್ಯ ಬೆದ್ರಾಳ, ಜಯಂತ ಕೊರೆಜಿಮಜಲು, ಕಮಲಾಕ್ಷ ಆಚಾರ್ಯ ಬೆದ್ರಾಳ, ಮೋನಪ್ಪ ನಾಯ್ಕ ಆರ್ಯಮುಗೇರು, ಈಶ್ವರ ನಾಯ್ಕ ಆರ್ಯಮುಗೇರು, ವಸಂತ ನಾಯ್ಕ ನೆಕ್ಕರೆ, ಕೃಷ್ಣಪ್ಪ ಗೌಡ ಕಂಚಲಗುರಿ, ಜನಾರ್ದನ ನಾಯ್ಕ ಕೊರಜಿಮಜಲು, ಗುರುಪ್ರಸಾದ್ ಕೊರಜಿಮಜಲು, ಬಾಬು ನಾಯ್ಕ ಕೊರಜಿಮಜಲು, ನಾಗೇಶ್ ಪೂಜಾರಿ ಎಲಿಕ, ಹರೀಶ್ ಪೂಜಾರಿ ಬೆದ್ರಾಳ, ದಯಾನಂದ ಕುಲಾಲ್ ಬೆದ್ರಾಳ, ಶ್ರೀಕಾಂತ್ ಬೆದ್ರಾಳ, ಗಣೇಶ್ ಗೌಡ ಪುಳಿತ್ತಡಿ, ರಾಜೇಶ್ ಗೌಡ ಸೊರ್ಕ, ವಿಶ್ವನಾಥ ಗೌಡ ಬೆದ್ರಾಳ, ಶಿವಪ್ರಸಾದ್ ನೆಕ್ಕರೆ, ವಿಜಯ ಕುಲಾಲ್ ಬೆದ್ರಾಳ, ಕೃಷ್ಣಪ್ಪ ಪೂಜಾರಿ ಕೂಡಮರ, ವೇಣುಗೋಪಾಲ ಕೊರಜಿಮಜಲು, ಲಕ್ಷ್ಮಣ ಪೂಜಾರಿ ಕೂಡಮರ, ನಾರಾಯಣ ಗೌಡ ಬೆದ್ರಾಳ, ಅಣ್ಣಿ ಪೂಜಾರಿ ನೆಕ್ಕರೆ-ಕೂಡಮರ, ರಮೇಶ ಪೂಜಾರಿ ಕೂಡಮರ ಸಹಿತ ಹಲವರು ಭಕ್ತಾಧಿಗಳು ಉಪಸ್ಥಿತರಿದ್ದರು

ರೂ.3೦ಲಕ್ಷ ವೆಚ್ಚದ ತಡೆಗೋಡೆ ಉದ್ಘಾಟನೆ…
ನಂದಿಕೇಶ್ವರ ಭಜನಾ ಮಂದಿರದ ಸಮೀಪದಲ್ಲಿಯೇ ಹಾದು ಹೋಗುವ ತೋಡು ಮಳೆಗಾಲದಲ್ಲಿ ನೀರಿನ ರಭಸಕ್ಕೆ ನಿರಂತರ ಕುಸಿಯುತ್ತಾ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ತೋಡಿಗೆ ತಡೆಗೋಡೆ ನಿರ್ಮಿಸಬೇಕೆನ್ನುವ ಮನವಿಗೆ ಪುರಸ್ಕರಿಸಿದ ಶಾಸಕ ಸಂಜೀವ ಮಠಂದೂರುರವರು ರೂ.3೦ ಲಕ್ಷ ಅನುದಾನವನ್ನು ತಡೆಗೋಡೆ ನಿರ್ಮಿಸಲು ನೀಡಿದ್ದರು. ನೂತನವಾಗಿ ನಿರ್ಮಿಸಿದ ತಡೆಗೋಡೆಯನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ, ದೇವಸ್ಥಾನ, ದೈವಸ್ಥಾನಗಳ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಗೆ ರಾಜ್ಯ ಸರಕಾರ ಅನುದಾನವನ್ನು ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಈ ಭಾಗದ ತೋಡಿಗೆ ತಡೆಗೋಡೆ ನಿರ್ಮಿಸಲು ಅನುದಾನವನ್ನು ನೀಡಿದ್ದೇನೆ. ದೇವರ ಅನುಗ್ರಹವಿದ್ದರೆ ಭಕ್ತರು ಪುನೀತರಾಗಬಲ್ಲರು ಎಂಬಂತೆ ಬೆದ್ರಾಳದ ನಂದಿಕೇಶ್ವರ ಭಜನಾ ಮಂದಿರವು ಸರ್ವರ ಸಹಕಾರದಿಂದ ಅಭಿವೃದ್ಧಿಗೊಳ್ಳುತ್ತಿದೆ ಎಂದರು. ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಳೀಯ ನಗರಸಭಾ ಸದಸ್ಯೆ ರೋಹಿಣಿ ಕೇಶವ ಪೂಜಾರಿಯವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.