ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂಪನ್ನದ ಬಳಿಕವೂ ಗೆಜ್ಜೆಗಿರಿಗೆ ಹರಿದು ಬರುತ್ತಿರುವ ಭಕ್ತ ಜನಸಾಗರ

Puttur_Advt_NewsUnder_1
Puttur_Advt_NewsUnder_1
  • ದೇಯಿ ಬೈದ್ಯೆತಿ, ಕೋಟಿ ಚೆನ್ನಯರ ಮೂಲಸ್ಥಾನದಲ್ಲಿ ನಿತ್ಯವೂ ಅನ್ನದಾನ

ಪುತ್ತೂರು: ಬ್ರಹ್ಮಕಲಶೋತ್ಸವದ ಇತಿಹಾಸದಲ್ಲೇ ಹೊಸ ದಾಖಲೆ ಬರೆಯುವುದರ ಜೊತೆಗೆ ಕಾರಣಿಕ ಮೆರೆದ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಮಹಾಮಾತೆ ದೇಯಿ ಬೈದ್ಯೆತಿ, ಸಾಯನ ಬೈದ್ಯರ,ಕೋಟಿ ಚೆನ್ನಯರ ಹಾಗೂ ಆದಿದೈವ ಧೂಮಾವತಿ ಸಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಬಳಿಕವು ಶ್ರೀ ಕ್ಷೇತ್ರಕ್ಕೆ ಭಕ್ತಜನ ಸಾಗರ ಹರಿದುಬರುತ್ತಿದೆ. ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ನೇಮೋತ್ಸವದ ಬಳಿಕವೂ ನಿರಂತರವಾಗಿ ಭಕ್ತರ ಭೇಟಿ ಮುಂದುವರಿದಿದೆ. ವಾರದ ರಜಾ ದಿನಗಳಾದ ಶನಿವಾರ ಮತ್ತು ಆದಿತ್ಯವಾರ ದೂರದೂರುಗಳಿಂದ ಭಕ್ತರು ಗುಂಪು ಗುಂಪಾಗಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಭಕ್ತರ ಭೇಟಿಯನ್ನು ತಿಳಿದ ಕ್ಷೇತ್ರದ ಆಡಳಿತ ಸಮಿತಿ ಕೂಡ ಪೂರಕವಾದ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು ಪ್ರತಿ ನಿತ್ಯ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ. ವಯಸ್ಕರು, ಮಹಿಳೆಯರು ಮತ್ತು ಮಕ್ಕಳಿಗೆ ದರ್ಶನ ಪಡೆಯಲು ಸರತಿ ಸಾಲು ಹೊರತುಪಡಿಸಿದ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

 

ಕ್ಷೇತ್ರದಲ್ಲಿ ನಿತ್ಯಪೂಜೆ
ಕ್ಷೇತ್ರದಲ್ಲಿ ಬೆಳಿಗ್ಗೆ 6 ಗಂಟೆಗೆ ಬಾಗಿಲು ತೆರೆದು 8 ಗಂಟೆಗೆ ಬೆಳಿಗ್ಗಿನ ಪೂಜೆ, ಮಧ್ಯಾಹ್ನ ಪೂಜೆ ಹಾಗೂ ರಾತ್ರಿ ಪೂಜೆ ನಡೆಯುತ್ತದೆ. ಭೇಟಿ ನೀಡುವ ಭಕ್ತರಿಗೆ ಇಡೀ ದಿನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಕಾರ್ಯಾಲಯ, ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಸರ್ವ ಸೇವೆ, ತಂಬಿಲ ಸೇವೆ ಸೇರಿದಂತೆ ವಿವಿಧ ಸೇವೆಗಳನ್ನು ಮಾಡುತ್ತಿದ್ದಾರೆ.

ಸಾವಿರಕ್ಕೂ ಅಧಿಕ ಮಂದಿಗೆ ಅನ್ನದಾನ
ಶ್ರೀ ಕ್ಷೇತ್ರದಲ್ಲಿ ಪ್ರತಿನಿತ್ಯ ನೂರಾರು ಮಂದಿ ಭಕ್ತರು ಬಂದು ಹೋಗುತ್ತಿದ್ದಾರೆ. ಶನಿವಾರ ರವಿವಾರ ಸಾವಿರಾರು ಮಂದಿ ಆಗಮಿಸುತ್ತಿದ್ದಾರೆ. ಕಳೆದ ರವಿವಾರ ಮಾ.೦8 ರಂದು ಸುಮಾರು 20 ಸಾವಿರಕ್ಕೂ ಅಧಿಕ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಕ್ಷೇತ್ರದಲ್ಲಿ ಅನ್ನದಾನ ವ್ಯವಸ್ಥೆ ಮುಂದುವರಿಸಲಾಗಿದ್ದು ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಅನ್ನದಾನ ನಡೆಯುತ್ತಿದೆ. ರವಿವಾರ 2೦ ಸಾವಿರಕ್ಕೂ ಅಧಿಕ ಮಂದಿ ಅನ್ನದಾನ ಸ್ವೀಕರಿಸಿದರು. ಸುಮಾರು 2೦೦ ಕ್ಕೂ ಮಿಕ್ಕಿ ಸ್ವಯಂ ಸೇವಕರು ವ್ಯವಸ್ಥೆಯಲ್ಲಿ ಸಹಕರಿಸಿದ್ದರು.

ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ, ಮಾತೃಶ್ರೀ ಲೀಲಾವತಿ ಅಮ್ಮ, ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪಿತಾಂಬರ ಹೇರಾಜೆ, ಪ್ರಮುಖರಾದ ದೀಪಕ್ ಕೋಟ್ಯಾನ್, ಉಲ್ಲಾಸ್ ಕೋಟ್ಯಾನ್, ಸುಧಾಕರ ಸುವರ್ಣ ತಿಂಗಳಾಡಿ, ಪ್ರವೀಣ್ ಕುಮಾರ್ ಕಡೆಂಜಿಗುತ್ತು ಮತ್ತಿತರರು ಉಪಸ್ಥಿತರಿದ್ದರು.

ರವಿವಾರ 20 ಸಾವಿರಕ್ಕೂ ಅಧಿಕ ಭಕ್ತಾಧಿಗಳು
ಬ್ರಹ್ಮಕಲಶೋತ್ಸವದ ಸಂಪನ್ನದ ಮೊದಲ ರವಿವಾರ ಅಂದರೆ ಮಾ.೦೮ ರಂದು ಶ್ರೀ ಕ್ಷೇತ್ರದಲ್ಲಿ ಭಕ್ತ ಜನಸಾಗರ ತುಂಬಿ ತುಳುಕಿದೆ. ಬೆಳಗ್ಗೆಯಿಂದಲೇ ದೂರದೂರುಗಳಿಂದ ಶ್ರೀ ಕ್ಷೇತ್ರಕ್ಕೆ ಭಕ್ತರು ಗುಂಪು ಗುಂಪಾಗ ಬರತೊಡಗಿದ್ದಾರೆ. ಮಧ್ಯಾಹ್ನಕ್ಕೆ ಸುಮಾರು ೨೦ ಸಾವಿರಕ್ಕೂ ಅಧಿಕ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿದ್ದು ದೇವರ ದರ್ಶನ ಪಡೆದು ಅನ್ನಪ್ರಸಾದ ಸ್ವೀಕರಿಸಿದ್ದಾರೆ.ಬ್ರಹ್ಮಕಲಶೋತ್ಸವದ ಬಳಿಕವೂ ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದು ಇದೇ ಪ್ರಥಮ ಎನ್ನಲಾಗಿದೆ. ಇದು ಕೋಟಿ ಚೆನ್ನಯರ ಕಾರಣಿಕವಲ್ಲದೆ ಮತ್ತೇನು ಅಲ್ಲ, ಕ್ಷೇತ್ರದ ಮಹಾಮಾತೆ ದೇಯಿ ಬೈದ್ಯೆತಿಯ ಕಾರಣಿಕ ಶಕ್ತಿಯಾಗಿದೆ ಎನ್ನುತ್ತಾರೆ ಭಕ್ತರು.

ಎ.13 ದೃಢಕಲಶ
ಕ್ಷೇತ್ರದಲ್ಲಿ ನಿತ್ಯ ಸೇವೆ, ಪೂಜೆಗಳು ಪ್ರತಿ ತಿಂಗಳ ಸಂಕ್ರಾಂತಿಯಂದು ವಿಶೇಷ ಉತ್ಸವ ನಡೆಯಲಿದೆ. ಎ. 13 ರಂದು ಕ್ಷೇತ್ರದ ತಂತ್ರಿ ಎಂ.ಕೆ ಲೋಕೇಶ್ ಶಾಂತಿ ನೇತೃತ್ವದಲ್ಲಿ ದೃಢಕಲಶ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.