Breaking News

ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶದ ಹಿನ್ನೆಲೆ: ಕೋಡಿಂಬಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ‘ಸ್ವಚ್ಛ ಮನ-ಸ್ವಚ್ಛ ಊರು’ ಬೃಹತ್ ಸ್ವಚ್ಛತಾ ಆಂದೋಲನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಪ್ರಿಲ್ ತಿಂಗಳಿನಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿರುವ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ವತಿಯಿಂದ ಸ್ವಚ್ಛ ಭಾರತ್ ಪರಿಕಲ್ಪನೆಯಡಿಯಲ್ಲಿ ‘ಸ್ವಚ್ಛ ಮನ ಸ್ವಚ್ಛ ಊರು’ ಎಂಬ ಬೃಹತ್ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಮಾ.8ರಂದು ನಡೆಯಿತು.

ಕೋಡಿಂಬಾಡಿ ಗ್ರಾಮ ವ್ಯಾಪ್ತಿಯಲ್ಲಿ ಮೂರು ತಂಡವಾಗಿ ಸ್ವಚ್ಛತಾ ಆಂದೋಲನ ನಡೆಸಲಾಗಿದ್ದು ಮೂರು ಸ್ಥಳಗಳಲ್ಲಿಯೂ ಒಂದೇ ಸಮಯದಲ್ಲಿ ಉದ್ಘಾಟನೆ ಜರಗಿತು. ಶಾಂತಿನಗರದಿಂದ ವಿನಾಯಕನಗರದವರೆಗೆ, ಪೆರ್ನೆಯಿಂದ ವಿನಾಯಕ ನಗರದ ತನಕ ಮತ್ತು ಸೇಡಿಯಪುನಿಂದ ವಿನಾಯಕ ನಗರದವರೆಗೆ ಸ್ವಚ್ಛತಾ ಜಾಥಾ ನಡೆದು ವಿನಾಯಕ ನಗರದಲ್ಲಿ ಸಮರೋಪ ನಡೆಸಲಾಯಿತು. ನಂತರ ದೇವಸ್ಥಾನದ ಪರಿಸರದಲ್ಲಿ ಶ್ರಮದಾನ ಮತ್ತು ಸ್ವಚ್ಛತೆ ಕಾರ್ಯಕ್ರಮ ನಡೆಯಿತು.

ಶಾಂತಿನಗರದಲ್ಲಿ ವಿನಾಯಕನಗರ ಯುವಶಕ್ತಿ ಗೆಳೆಯರ ಬಳಗದ ಗೌರವಾಧ್ಯಕ್ಷ ರಮೇಶ್ ನಾಯಕ್ ನಿಡ್ಯರವರು ತೆಂಗಿನ ಕಾಯಿ ಹೊಡೆದು ಚಾಲನೆ ನೀಡಿದರು.‌ಪೆರ್ನೆಯಲ್ಲಿ ಗ್ರಾ.ಪಂ. ಸದಸ್ಯ ನವೀನ್ ಪದಬರಿರವರು ದೀಪ ಬೆಳಗಿಸಿ, ಎ.ಮುರಳೀಧರ ರೈ ಮಠಂತಬೆಟ್ಟು ಮತ್ತು ಡಾ. ಶಿವಪ್ರಕಾಶ್ ರವರು ತೆಂಗಿನ ಕಾಯಿ ಹೊಡೆದು ಚಾಲನೆ ನೀಡಿದರು.

ಸೇಡಿಯಾಪುನಲ್ಲಿ ಮಹಾತ್ಮ ಗಾಂಧೀಜಿಯವರ ಸ್ತಬ್ಧಚಿತ್ರಕ್ಕೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೋಡಿಂಬಾಡಿ ಒಕ್ಕೂಟದ ಅಧ್ಯಕ್ಷ ಸುರೇಶ್ ಬೋಳಾಜೆರವರು ಹೂ ಹಾರ ಹಾಕುವ ಮೂಲಕ ಚಾಲನೆ ನೀಡಿದರು. ಬ್ರಹ್ಮಕಲಶೋತ್ಸವದ ಮಾಧ್ಯಮ ಮತ್ತು ಪ್ರಚಾರ ಸಮಿತಿಯ ಸಂಚಾಲಕ ಜಯಪ್ರಕಾಶ್ ಬದಿನಾರುರವರು ಸ್ವಾಗತಿಸಿ, ತಾಲ್ಲೂಕು ಆಶಾ ಕಾರ್ಯಕರ್ತೆಯರ ಮೇಲ್ವಿಚಾರಕಿ ಸುಜಾತ ಗಣೇಶರವರು ಮಾಹಿತಿ ನೀಡಿದರು. ಪವಿತ್ರ ಆಚಾರ್ಯ ಸೇಡಿಯಾಪು ವಂದಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ, ಪ್ರಧಾನ ಕಾರ್ಯದರ್ಶಿ ಕೆ.ಜಯಾನಂದ, ಆಡಳಿತ ಮೊಕ್ತೇಸರ ನಿರಂಜನ ರೈ ಮಠಂತಬೆಟ್ಟು, ಜಿ.ಪಂ. ಸದಸ್ಯೆ ಶಯನಾ ಜಯಾನಂದ, ಗ್ರಾ.ಪಂ. ಅಧ್ಯಕ್ಷೆ ಸಂಧ್ಯಾ ರಾಮಚಂದ್ರ ಗೌಡ ಕೈಲಾಜೆ, ಉಪಾಧ್ಯಕ್ಷ ಬಾಬು ಗೌಡ, ದೇವಸ್ಥಾನದ ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ಸುಮಾ ಅಶೋಕ್ ರೈ ಸಹಿತ ಇನ್ನೂರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.