’ಸೃಷ್ಠಿ’ ಬರಹ, ಸಾಹಿತ್ಯ ಕಮ್ಮಟದ ಸಮಾರೋಪ: ಸ್ವ ಅಧ್ಯಯನವೆಂಬ ತಪಸ್ಸಿನಿಂದ ಬರವಣಿಗೆ ಸಾಧ್ಯ: ಗಣಪತಿ ಹೆಗಡೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಕವಿಗಳು, ಸಾಹಿತಿಗಳು, ಉದಯೋನ್ಮುಖ ಬರಹಗಾರರನ್ನು ನಾವು ಆದರ್ಶವಾಗಿ ಕಾಣುತ್ತೇವೆ. ಸ್ವ ಅಧ್ಯಯನವೆಂಬ ತಪಸ್ಸಿನ ಮೂಲಕ ಒಂದು ವಿಷಯಕ್ಕೆ ಗಮನಕೊಡಬೇಕು. ನಮ್ಮಲ್ಲಿರುವ ಸುಪ್ತ ಪ್ರತಿಭೆಗಳಿಗೆ ಚೈತನ್ಯವನ್ನು ನೀಡಿದರೆ ಗತಿ ಹೆಚ್ಚುತ್ತದೆ. ಓದದೇ ಗಮನಕೊಡದೆ ಬರೆಯಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತ ಕಾರ್ಯಕಾರಣಿ ಸದಸ್ಯ ಗಣಪತಿ ಹೆಗಡೆ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ, ವಿವೇಕಾನಂದ ಕಾಲೇಜು ಮತ್ತು ಪದವಿ, ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಭಾಷಾ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ’ಸೃಷ್ಠಿ’ ಎಂಬ ಸಹೃದಯ ಬರಹ ಮತ್ತು ಸಾಹಿತ್ಯಗಳನ್ನು ರೂಪಿಸುವ ಹಾಗೂ ಪ್ರೇರೇಪಿಸುವ ಒಂದು ದಿನದ ಕಮ್ಮಟದ ಸಮಾರೋಪ ಭಾಷಣವನ್ನು ಮಾಡಿದರು.

ಓದದೇ ಹೋದರೆ ಬರೆಯಲು ಸಾಧ್ಯವಿಲ್ಲ. ಓದಿನಿಂದ ಶಬ್ದಭಂಡಾರದೊಂದಿಗೆ ದೃಷ್ಟಿ, ಜ್ಞಾನವನ್ನು ವೃದ್ಧಿಸಬಹುದು. ಕುತೂಹಲದಿಂದ ಲೇಖನ, ಬರವಣಿಗೆ ಮೂಲಕ ಸಾಹಿತ್ಯವನ್ನು ಸೃಷ್ಟಿಸಲು ಸಾಧ್ಯ. ಪೂರ್ವಗ್ರಹವಿಲ್ಲದೆ ಬರೆಯಬೇಕು, ಲೇಖನವೂ ಪೂರ್ತಿ ಮಾಹಿತಿಯನ್ನು ತಿಳಿಸುವಂತಿರಬೇಕು ಎಂದು ಹೇಳಿದರು.
ಅಧ್ಯಯನ ಎಂಬುದು ಅಭ್ಯಾಸವಾಗಿ ಸದಾಕಾಲ ಬರವಣಿಗೆಯಲ್ಲಿ ತೊಡಗಿ ಚಿಂತಿಸಬೇಕು. ಸಾಹಿತ್ಯವು ಸಮಾಜಮುಖಿಯಾಗಿ ಸಮಾಜ ನಿರ್ಮಾಣದ ಕಾರ್ಯವಾಗಬೇಕು. ಉತ್ತಮ ಸಮಾಜಕ್ಕೆ ನಮ್ಮ ಅಕ್ಷರದ ಮೂಲಕ ಕಾಣಿಕೆಯನ್ನು ನೀಡಬೇಕು ಎಂದು ನುಡಿದರು.

ಪತ್ರಕರ್ತ, ಅಂಕಣಕಾರ ನಾ. ಕಾರಂತ ಪೆರಾಜೆ ಮಾತನಾಡಿ, ಬೌದ್ಧಿಕ ಜ್ಞಾನವನ್ನು ಗಟ್ಟಿಗೊಳಿಸಲು ಇಂತಹ ಕಾರ್ಯಾಗಾರ ಮುಖ್ಯ. ಸ್ಮಾರ್ಟ್ ಫೋನ್‌ನ ಹೊರತಾಗಿ ಓದಿನ ಮೂಲಕ ಜ್ಞಾನವನ್ನು ವೃದ್ಧಿಸಬೇಕು. ಇಂಟೆರ್ನೆಟ್‌ನಲ್ಲಿ ದೊರೆಯುವ ಮಾಹಿತಿ ನಮ್ಮ ಜ್ಞಾನವಾಗಬೇಕು ಎಂದು ಹೇಳಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಉಪನ್ಯಾಸಕಿ ಭವ್ಯಾ ಪಿ.ಆರ್. ನಿಡ್ಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.