Breaking News

ಜಿಲ್ಲಾ ದಲಿತ್ ಸೇವಾ ಸಮಿತಿಯ ಕೆದಂಬಾಡಿ, ಒಳಮೊಗ್ರು, ಅರಿಯಡ್ಕ ಗ್ರಾಮ ಸಮಿತಿ ರಚನೆ

Puttur_Advt_NewsUnder_1
Puttur_Advt_NewsUnder_1
  • ಗೌರವಾಧ್ಯಕ್ಷ: ಚಂದ್ರ ಇದ್ಪಾಡಿ, ಅಧ್ಯಕ್ಷ: ಜಯಂತ ಕುಂಬ್ರ, ಕಾರ್ಯದರ್ಶಿ: ಲೋಕೇಶ್ ಕುರಿಕ್ಕಾರ, ಉಪಾಧ್ಯಕ್ಷ: ಸುಂದರ ಕೆ

ಪುತ್ತೂರು: ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಪುತ್ತೂರು ಇದರ ಆಶ್ರಯದಲ್ಲಿ ಕೆದಂಬಾಡಿ, ಒಳಮೊಗ್ರು ಮತ್ತು ಅರಿಯಡ್ಕ ಗ್ರಾಮಗಳ ಸಮಿತಿ ರಚನೆ ಮತ್ತು ಪದಾಧಿಕಾರಿಗಳ ಆಯ್ಕೆ ಸಭೆಯು ಮಾ.೦೮ ರಂದು ಕುಂಬ್ರ ಕೆ.ಪಿ.ಎಸ್ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಲಕ್ಷ್ಮೀಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಬಿ.ಕೆ ಅಣ್ಣಪ್ಪ ಕಾರೆಕಾಡು ವಹಿಸಿದ್ದರು. ಸಮಿತಿ ರಚನೆಯ ಕುರಿತು ಮಾತನಾಡಿದ ಅವರು ಡಾ.ಬಾಬು ಸಾಹೇಬ್ ಅಂಬೇಡ್ಕರ್‌ರವರ ಜೀವನ ಶೈಲಿ ಹಾಗೂ ಕಾನೂನಿನ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದರು. ತಾಲೂಕು ಉಪಾಧ್ಯಕ್ಷ ಮನೋಹನ್ ಕೋಡಿಜಾಲ್, ಶಾಂತಪ್ಪ ಪಂಜಳ ಶುಭ ಹಾರೈಸಿದರು. ಸಮಿತಿಯ ಸಲಹೆಗಾರ ಮಾಧವ ಎಂ ಕುರಿಯ ಸ್ವಾಗತಿಸಿದರು. ಅಶ್ವಿತಾ ಪ್ರಾರ್ಥಿಸಿದರು. ಜಯಂತ ವಂದಿಸಿದರು.ದಿನೇಶ್ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಚಂದ್ರ ಬಿ. ಇದ್ಪಾಡಿ, ಅಧ್ಯಕ್ಷರಾಗಿ ಜಯಂತ ಕುಂಬ್ರ, ಉಪಾಧ್ಯಕ್ಷರಾಗಿ ಸುಂದರ ಕೆ, ಕಾರ್ಯದರ್ಶಿಯಾಗಿ ಲೋಕೇಶ್ ಕುರಿಕ್ಕಾರ, ಕೋಶಾಧಿಕಾರಿಯಾಗಿ ಕೊರಗಪ್ಪ ಕುರಿಕ್ಕಾರ, ಸದಸ್ಯರುಗಳಾಗಿ ಬಾಲಕೃಷ್ಣ ಉರ್ವ, ವಿನೋಧ್ ಬಿಜಳ, ಸುನಿಲ್ ಉರ್ವ, ಹರೀಶ್ ಕೆ.ಕುಂಬ್ರ, ನಾರಾಯಣ ಕೆ.ಕುಂಬ್ರ, ಭಾಗ್ಯ ಕುಂಬ್ರ, ಬೇಬಿ ಕುಂಬ್ರ, ಶಶಿಕಲಾ ಕುಂಬ್ರ, ದಿನೇಶ್ ಕೆ.ರವರುಗಳನ್ನು ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.