ಬುದ್ಧಿವಂತರ ಜಿಲ್ಲೆಯಲ್ಲಿ ನಡೆದಿದೆ ವಾಮಾಚಾರ!! ಸಹಕಾರಿ ಬ್ಯಾಂಕಿನಲ್ಲೊಂದು ಅಪರೂಪದ ಕೃತ್ಯ!

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಬುದ್ಧಿವಂತರ ಜಿಲ್ಲೆಯಲ್ಲಿ ಇಂತಹಾ ಘಟನೆಗಳು ನಡೆಯುತ್ತದೆ ಎಂದರೆ ನಂಬಲಾಗದು, ಆದರೆ ನಂಬಲೇಬೇಕು.  ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಉದ್ದೇಶದಿಂದ ಗ್ರಾ.ಪಂ.ಸದಸ್ಯನೋರ್ವ , ಮಂತ್ರವಾದಿಯ ನೆರವಿನೊಂದಿಗೆ ಬ್ಯಾಂಕ್ ಆವರಣದಲ್ಲಿ ವಾಮಾಚಾರ ಮಾಡಿಸಿದ ಘಟನೆ ಬುದ್ಧಿವಂತರ ಜಿಲ್ಲೆಯ  ಬಂಟ್ವಾಳ ತಾಲೂಕಿನ ಸರಪಾಡಿಯಲ್ಲಿ ನಡೆದಿದೆ.  ಗ್ರಾ.ಪಂ.ಸದಸ್ಯ ಆದಂ ಕುಂಞಿ ಮತ್ತು ಮಂತ್ರವಾದಿ ಉಮೇಶ್ ಶೆಟ್ಟಿ ಎಂಬವರು ಈ ಕೃತ್ಯವೆಸಗಿದ್ದು, ಕೃತ್ಯ ಬಹಿರಂಗಗೊಳ್ಳುತ್ತಿದ್ದಂತೆಯೇ ಕ್ಷಮೆಯಾಚಿಸಿದ್ದಾರೆ.

ಮಾ.7 ರಂದು ಸಹಕಾರಿ ಸಂಘದ ಕಛೇರಿ ಆವರಣದಲ್ಲಿ ಗಾಜಿನ ಬಾಟಲಿಯೊಂದು ಪತ್ತೆಯಾಗಿತ್ತು. ಮೇಲ್ನೋಟಕ್ಕೆ ವಾಮಾಚಾರ ಮಾಡಿಸಿದಂತೆ ಕಂಡು ಬಂದಿದ್ದ ಹಿನ್ನೆಲೆಯಲ್ಲಿ , ಅಲ್ಲಿನ ಆಡಳಿತ ಮಂಡಳಿ ಸಿ.ಸಿ.ಕ್ಯಾಮೆರಾವನ್ನು ಪರಿಶೀಲಿಸಿದಾಗ ಅದರಲ್ಲಿ  ಫೆ.19 ರಂದು ರಾತ್ರಿ 9.47 ನಿಮಿಷಕ್ಕೆ ಸಹಕಾರಿ ಸಂಘದ ಅವರಣ ಗೋಡೆಯ ಬಳಿ ಆದಂ ಕುಂಞಿ ಹಾಗೂ ಉಮೇಶ್ ಶೆಟ್ಟಿಯವರು ಗಾಜಿನ ಬಾಟಲಿಯನ್ನು ತಂದು ಇರಿಸಿರುವುದು ಸ್ಪಷ್ಟವಾಗಿತ್ತು. ಮಾ.7ರಂದು ನಡೆದ ಸಂಘದ ವಿಶೇಷ ಸಭೆಯಲ್ಲಿ ಕೃತ್ಯವೆಸಗಿದ್ದ ಇಬ್ಬರೂ ತಪ್ಪೊಪ್ಪಿಕೊಂಡು ಸಭೆಯಲ್ಲಿ ಕ್ಷಮೆಯಾಚಿಸಿದ್ದಾರೆ. 

ಈ ಬಗ್ಗೆ ಲಿಖಿತವಾಗಿ ಕ್ಷಮಾಪಣಾ ಪತ್ರ ನೀಡಿರುವ ಆದಂ ಕುಂಞಿ ಹಾಗೂ ಉಮೇಶ್ ಶೆಟ್ಟಿಯವರು, ಸಹಕಾರಿ ಬ್ಯಾಂಕ್ ನಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಸಹಕಾರಿ ಸಂಘದ ಕಚೇರಿಯ ಆವರಣದಲ್ಲಿ ವಾಮಚಾರ ಮಾಡಿದ್ದೇವೆ. ತಪ್ಪಾಯಿತು, ಮುಂದೆ ಇಂತಹ ಯಾವುದೇ ರೀತಿಯ ತಪ್ಪು ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.