Breaking News

ಮಾ.15: ತುಳುನಾಡ ಚಿತ್ರತಂಡದ ಆಶ್ರಯದಲ್ಲಿ `ಶಿವದೂತೆ ಗುಳಿಗೆ’ ತುಳು ನಾಟಕ-ಟಿಕೆಟ್ ಬುಕ್ಕಿಂಗ್ ಪ್ರಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತುಳುನಾಡ ಚಿತ್ರ ತಂಡ ಅರ್ಪಿಸುವ ವಿಜಯಕುಮಾರ್ ಕೊಡಿಯಾಲ್‌ಬೈಲ್ ನಿರ್ದೇಶಿಸಿರುವ ಸ್ವರಾಜ್ ಶೆಟ್ಟಿ ಅಭಿನಯಿಸುವ `ಶಿವದೂತೆ ಗುಳಿಗೆ’ ವಿಭಿನ್ನ ಶೈಲಿಯ ತುಳು ನಾಟಕ ಮಾ.೧೫ರಂದು ಸಂಜೆ ಗಂಟೆ ೬-೩೦ರಿಂದ ಸುದಾನ ಶಾಲಾ ವಠಾರದಲ್ಲಿ ನಡೆಯಲಿದೆ.

ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರು ತಮ್ಮ “ಶಿವದೂತ ಗುಳಿಗ’ ನಾಟಕದ ಮೂಲಕ ಮುಂದಿನ ದಿನಗಳಲ್ಲಿ ದೈವಗಳ ಬಗ್ಗೆಯೂ ನಾಟಕಗಳನ್ನು ರಚಿಸಬಹುದು ಎಂಬ ಮಾರ್ಗದರ್ಶನ ಮಾಡಿದ್ದಾರೆ. ದೈವದ ಬಗ್ಗೆ ತಿಳುವಳಿಕೆಯೇ ಇಲ್ಲದ ಆಧುನಿಕ ಮನೋಭಾವನೆಯ ಯುವಕನೋರ್ವನಿಗೆ ಗುಳಿಗ ದೈವದ ಕತೆಯನ್ನು ಹೇಳುವ ದೃಶ್ಯದೊಂದಿಗೆ ಆರಂಭವಾಗುವ ಈ ನಾಟಕವು ಮೈ ನವಿರೇಳಿಸುವ ದೃಶ್ಯಗಳಿಂದ ಕೂಡಿದೆ. ಕೈಲಾಸ, ವೈಕುಂಠ, ಪುರಾತನ ಕಾಲದ ಮನೆ, ದೈವಸ್ಥಾನ ಇತ್ಯಾದಿ ದೃಶ್ಯಾವಳಿಗಳನ್ನು ಕಾಯುವ ಅವಕಾಶವನ್ನೇ ಕೊಡದೆ ಒಂದೆರಡು ನಿಮಿಷಗಳಲ್ಲಿಯೇ ಬದಲಿಸಿ ಬಿಡುವ ಕೈ ಚಳಕ ಅದ್ಭುತವಾಗಿದೆ. ನವ್ಯ ಮತ್ತು ಪೌರಾಣಿಕ ನಾಟಕದ ದೃಶ್ಯ ಸಂಯೋಜನೆಯ ಸಮ್ಮಿಳನ ಮನಮೋಹಕವಾಗಿದೆ. ಗುಳಿಗ ದೈವದ ಹಿನ್ನೆಲೆಯಲ್ಲಿ ಈ ನಾಟಕವು ಸಾಗುತ್ತದೆ. ಈ ಮೂಲಕ ನಾಟಕಕ್ಕೊಂದು ದೈವಿಕ ನೈಜತೆಯನ್ನು ಕಟ್ಟಿಕೊಡಲು ಯತ್ನಿಸಲಾಗಿರುವುದು ಪ್ರಶಂಸನೀಯ. ಗುಳಿಗನ ಹುಟ್ಟಿನ ಪೌರಾಣಿಕ ಹಿನ್ನೆಲೆ, ವಿಷ್ಣುವಿನ ಭೇಟಿ, ತಾಯಿಯ ಎದೆಯನ್ನು ಸೀಳಿಕೊಂಡು ಹೊರಬಂದು ಹಸಿವನ್ನು ನೀಗಿಸುವ ಅಲೆದಾಟ, ವಿವಿಧೆಡೆಗಳಲ್ಲಿ ಕಾರಣಿಕಗಳ ಪ್ರದರ್ಶನ, ಕಾರಣಿಕ ದೈವ ಕೋಡಿಕಂಡಾಲ ಕೋರದಬ್ಬುವಿನ ಭೇಟಿ, ಬ್ರಹ್ಮ ರಕ್ಕಸ ಇತ್ಯಾದಿ ದೃಶ್ಯಗಳು ಪ್ರೇಕ್ಷಕರನ್ನು ಕುತೂಹಲದಿಂದ ತುದಿಗಾಲಲ್ಲಿ ನಿಲ್ಲಿಸುವಂತೆ ಮಾಡುವಲ್ಲಿ ವಿಜಯಕುಮಾರ್ ಯಶಸ್ವಿಯಾಗಿದ್ದಾರೆ.

ಟಿಕೆಟ್ ಬುಕ್ಕಿಂಗ್ ಪ್ರಾರಂಭ:
ಮಾ.೧೫ರಂದು ನಡೆಯಲಿರುವ ಶಿವದೂತ ಗುಳಿಗೆ ತುಳು ನಾಟಕದ ಟಿಕೆಟ್ ಬುಕ್ಕಿಂಗ್ ಪ್ರಾರಂಭಗೊಂಡಿದ್ದು ಟಿಕೆಟ್‌ಗಳಿಗಾಗಿ ೬೩೬೦೪೧೮೧೨೩ ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ತುಳುನಾಡ ಚಿತ್ರ ತಂಡದವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.