ಬಿಳಿಯೂರು: ದೈವಸ್ಥಾನದ ನವೀಕರಣ ಪುನರ್‌ಪ್ರತಿಷ್ಠೆ-ಹೊರೆಕಾಣಿಕೆ ಸಮರ್ಪಣೆ

Puttur_Advt_NewsUnder_1
Puttur_Advt_NewsUnder_1


ಉಪ್ಪಿನಂಗಡಿ: ಬಿಳಿಯೂರು ಗ್ರಾಮದ ಪೂಜಾರಿಪಾಲು ರಾಜನ್ ದೈವ ಕಲ್ಕುಡ, ಕಲ್ಲುರ್ಟಿ ದೈವಸ್ಥಾನದಲ್ಲಿ ಗ್ರಾಮ ದೈವ ಶ್ರೀ ರಾಜನ್ ದೈವ ಕಲ್ಕುಡ, ಕಲ್ಲುರ್ಟಿ ದೈವಸ್ಥಾನದ ನವೀಕರಣ ಪುನರ್ ಪ್ರತಿಷ್ಠೆ ಕಲಶಾಭಿಷೇಕ ಹಾಗೂ ದೈವಗಳಿಗೆ ನೇಮೋತ್ಸವದ ಅಂಗವಾಗಿ ಮಾ.೧೧ರಂದು ಬೆಳಿಗ್ಗೆ ಗ್ರಾಮಸ್ಥರಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ ಮಾಡಲಾಯಿತು.

ಶ್ರೀ ರಾಮ ಭಜನಾ ಮಂದಿರ ಕರುವೇಲು, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕಳೆಂಜ ದೇಂತಡ್ಕ ಹಾಗೂ ಶ್ರೀ ಕೊಡಮಣಿತ್ತಾಯ ದೈವಸ್ಥಾನ ಬಿಳಿಯೂರು ಇಲ್ಲಿಂದ ಹೊರೆಕಾಣಿಕೆ ತರಲಾಯಿತು. ಕರುವೇಲು ಶ್ರೀ ರಾಮ ಭಜನಾ ಮಂದಿರದಿಂದ ಬಿಳಿಯೂರು ದೈವಸ್ಥಾನದ ತನಕ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ತನಿಯಪ್ಪ ಪೂಜಾರಿ ಹೊಸಮನೆ, ಗೌರವಾಧ್ಯಕ್ಷರುಗಳಾದ ಎಸ್.ಜಿ.ತಾರಾನಾಥ ಪಲ್ಕೆ, ಈಶ್ವರ ಗೌಡ ಕುಂಡಾಜೆ, ರೋಹಿತಾಕ್ಷ ಬಾಣಬೆಟ್ಟು, ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಬರಮೇಲು, ಕೋಶಾಧಿಕಾರಿ ರಮೇಶ್ ಅಮೀನ್ ಪೂಜಾರಿಪಾಲು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪಿ.ಸುದೀಪ್ ಕುಮಾರ್ ಪದಬರಿ, ಕಾರ್ಯದರ್ಶಿ ಕುಶಾಲಪ್ಪ ಹತ್ತುಕಳಸೆ, ಕೋಶಾಧಿಕಾರಿ ಕೇಶವ ಪೂಜಾರಿ ಸುಣ್ಣಾನ ಸೇರಿದಂತೆ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು, ಬೈಲುವಾರು ಸಮಿತಿಯ ಸಂಚಾಲಕರು, ಸದಸ್ಯರುಗಳು, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಸದಸ್ಯರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.