ಶಾಂತಿನಗರ-ಕರುವೇಲು ರಸ್ತೆಯಲ್ಲಿ ಕಸದ ರಾಶಿ

Puttur_Advt_NewsUnder_1
Puttur_Advt_NewsUnder_1

ಚಿತ್ರ/ವರದಿ: ಅಚಲ್ ಉಬರಡ್ಕ

ಪುತ್ತೂರು: ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಶಾಂತಿನಗರ-ಕರುವೇಲು ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್, ಪೇಪರ್‌ಗಳನ್ನು ಲಾರಿಗಳಲ್ಲಿ ತಂದು ಬಿಸಾಡಲಾಗುತ್ತಿದೆ. ಈ ಕಸಗಳನ್ನು ದನ-ಕರುಗಳು ತಿನ್ನುತ್ತಿದೆ. ಅದಲ್ಲದೆ ಮಾಂಸ ತ್ಯಾಜ್ಯವನ್ನು ತಂದು ಹಾಕಿರುವುದು ಪರಿಸರವನ್ನು ಗಬ್ಬೆದ್ದು ನಾರುವಂತೆ ಮಾಡಿದೆ. ಇಲ್ಲಿ ಸಾರ್ವಜನಿಕರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ಎದುರಾಗಿದೆ. ಅಲ್ಲಿದ್ದ ಸಾರ್ವಜನಿಕರು ಕಸವನ್ನು ಬಿಸಾಡಲು ಬಂದವನಲ್ಲಿ ಪ್ರಶ್ನಿಸಿದ್ದಾರೆ. ಆದರೂ ಕೂಡ ಕಸವನ್ನು ತೆಗೆಯದೇ ಹಾಗೆಯೇ ಬಿಟ್ಟಿದ್ದಾರೆ. ಈ ಕಸವನ್ನು ಸಂಬಂಧ ಪಟ್ಟವರು ಸೂಕ್ತ ವಿಲೇವಾರಿ ಮಾಡಿ ಸಾಂಕ್ರಾಮಿಕ ರೋಗಗಳಿಂದ ಈ ಪರಿಸರ ವಾಸಿಗಳನ್ನು ರಕ್ಷಿಸ ಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.