Breaking News

ದೇರ್ಲ ಶ್ರೀ ಅಮ್ಮನವರ ದೇವಸ್ಥಾನದ ಬ್ರಹ್ಮಕಲಶೋತ್ಸವ, ಹಸಿರು ಹೊರೆ ಕಾಣಿಕೆ ಮೆರವಣಿಗೆ

Puttur_Advt_NewsUnder_1
Puttur_Advt_NewsUnder_1
  • ಮಾ.13: ಪ್ರತಿಷ್ಠಾ ಬಹ್ಮಕಲಶೋತ್ಸವ, ಧಾರ್ಮಿಕ ಸಭಾ ಕಾರ್ಯಕ್ರಮ, ಶ್ರೀ ದೇವಿ ಮಹಾತ್ಮ ಯಕ್ಷಗಾನ ಬಯಲಾಟ

ಪುತ್ತೂರು: ಕೆಯ್ಯೂರು ಗ್ರಾಮದ ದೇರ್ಲ ಶ್ರೀ ಅಮ್ಮನವರ ದೇವಸ್ಥಾನ ದಲ್ಲಿ ಮಾ.೧೧ರಿಂದ೧೩ರ ತನಕ ವೇದಮೂರ್ತಿ ಕಿಳಿಂಗಾರು ಶಿವರಾಮ ಭಟ್ ನೇತೃತ್ವದಲ್ಲಿ ಬಹ್ಮಕಲಶೋತ್ಸವ ನಡೆಯಲಿದೆ. ಇದರ ಪ್ರಯುಕ್ತ ಮಾ.೧೧ ರಂದು ಹಸಿರು ಹೊರೆ ಕಾಣಿಕೆ ಮೆರವಣಿಗೆ ನಡೆಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚೆನ್ನಪ್ಪ ರೈ ದೇರ್ಲ ತೆಂಗಿನ ಕಾಯಿ ಒಡೆಯುದರ ಮೂಲಕ ಹಸಿರು ಹೊರ ಕಾಣಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಸಿರು ಕಾಣಿಕೆಯ ಮೆರವಣಿಗೆಯು ದೇರ್ಲ ಅಂಗನವಾಡಿ ವಠಾರದಿಂದ ಹೊರಟು ಚೆಂಡೆ ವಾದ್ಯ ಘೋಷದೊಂದಿಗೆ ಭಕ್ತಾಧಿಗಳು ನೀಡಿದ ಹೊರೆಕಾಣಿಕೆಯನ್ನು ಮೆರವಣಿಗೆಯಲ್ಲಿ ತರಲಾಯಿತು. ಬಳಿಕ ದೇವಸ್ಥಾನದಲ್ಲಿ ಅರ್ಚಕ ತಿಮ್ಮಪ್ಪ ದೇರ್ಲರವರು ದೇವರಿಗೆ ಆರತಿ ಬೆಳಗಿಸುವ ಮೂಲಕ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಬಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಶಶಿಧರ್ ರಾವ್ ಬೊಳಿಕಲ, ಅಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ, ಕಾರ್ಯದರ್ಶಿ ಶೀನಪ್ಪ ಡಿ .ದೇರ್ಲ, ಕೋಶಾದಿಕಾರಿ ಸಂತೋಷ್ ಕುಮಾರ್ ರೈ ಇಳಂತಾಜೆ, ಸದ್ಯರಾದ ಶಿವರಾಮ ರೈ ದೇರ್ಲ, ಬಾಬು ಪಾಟಾಳಿ ದೇರ್ಲ, ಶಂಕರ, ಅಣ್ಣು ಡಿ.ದೇರ್ಲ, ಗಣೇಶ ಡಿ.ಸಿ, ಗುರು ದೇರ್ಲ, ಡಿ.ಯಂ.ಹುಕ್ರಪ್ಪ, ರಘನಾಥ ಡಿ, ಸತೀಶ್.ಡಿ, ಸಂತೋಷ್,ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾದ, ಅಮರನಾಥ ರೈ ದೇರ್ಲ, ವೆಂಕಟರಮಣ ಗೌಡ ದೆರ್ಲ, ಸದಸ್ಯ ಬೇಬಿ ಪೂಜಾರಿ ದೇರ್ಲ, ಶಿವರಾಮ ರೈ ಇಳಂತಾಜೆ, ವಿನೀತ್ ರೈ ಇಳಂತಾಜೆ, ಶ್ರೀಧರ ಪಾಟಾಳಿ ದೆರ್ಲ, ಶೀನಪ್ಪ ಡಿ, ಹರೀಶ, ಪ್ರವೀಣ, ಲಕ್ಷ್ಮಣ ಬಾಕುಡ, ಶಕ್ತಿ ಭಜನಾ ಮಂಡಳಿ ದೇರ್ಲ ಇದರ ಸದಸ್ಯರು, ದೇರ್ಲ ಶ್ರೀ ಶಕ್ತಿ ಸ್ವಸಹಾಯ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮಗಳು
ಮಾ ೧೨ ರಂದು ಸಂಜೆ ಆಚಾರ್ಯರ ಆಗಮನ, ಭಜನಾ ಕಾರ್ಯಕ್ರಮ, ಪ್ರಾಸಾದ ಶುದ್ಧಿ, ವಾಸ್ತುಹೋಮ, ವಾಸ್ತುಬಲಿ, ರಕ್ಷೋಘ್ನಹೋಮ, ಪಂಚಗವ್ಯಶುದ್ಧಿ, ಬಿಂಬಶುದ್ಧಿ, ಆಧಿವಾಸ ಪ್ರಕ್ರಿಯೆಗಳು, ಮಾ ೧೩ ಬೆಳಿಗ್ಗೆ ೭-೪೭ ಮಿನ ಲಗ್ನದ ಸುಮುಹೂರ್ತದಲ್ಲಿ ಬಿಂಬಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಕಾರ್ಯಕ್ರಮ ಜರಗಲಿರುವುದು.

ಧಾರ್ಮಿಕ ಸಭಾ ಕಾರ್ಯಕ್ರಮ
ಮದ್ಯಾಹ್ನ ೧೧.೩೦ಕ್ಕೆ ದಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀವರ್ಚನ ನೀಡಲಿದ್ದಾರೆ. ಶಾಸಕ ಸಂಜೀವ ಮಠಂದೂರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ದಾರ್ಮಿಕ ಪ್ರವಚನವನ್ನು ಕೆಯ್ಯೂರು ಕೆ.ಪಿ.ಎಸ್‌ನ ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ , ಜೀರ್ಣೋದ್ಧಾರ ಸಮಿತಿ ಸದಸ್ಯ ಡಾ.ವಿಷ್ಣುವರ್ಧನ ಬೆಂಗಳೂರು, ಪುತ್ತೂರು ತಾ.ಪಂ.ಸದಸ್ಯೆ ಭವಾನಿ ಚಿದಾನಂದ, ಬಹ್ಮಕಲಶ ಸಮಿತಿ ಗೌರವಾಧ್ಯಕ್ಷ ಶಶಿಧರ ರಾವ್ ಬೊಳಿಕಲ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ದೇರ್ಲ ನಾರಾಯಣ ರೈ ಸೋಣಂಗೇರಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸಂಜೆ ಮಧುರಾಗೀತೆಗಳ “ಸಂಗೀತಾ ರಸಮಂಜರಿ”, ಕೆಪಿಎಸ್ ಕೆಯ್ಯೂರು ಹಾಗೂ ದೇರ್ಲ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ರಾತ್ರಿ ಅತಿಥಿ ಕಲಾವಿಧರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ” ಶ್ರೀ ದೇವಿ ಮಹಾತ್ಮೆ” ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ ಹಾಗೂ ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.