Breaking News

ಕೆಮ್ಮಾಯಿ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಪನ್ನ

Puttur_Advt_NewsUnder_1
Puttur_Advt_NewsUnder_1

ಚಿತ್ರ: ಭೂಮಿ ಸ್ಟುಡಿಯೋ

ಪುತ್ತೂರು: ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವು ಮಾ.6ರಿಂದ ಪ್ರಾರಂಭಗೊಂಡು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದು ಮಾ.11ರಂದು ಶ್ರೀದೇವರಿಗೆ ಬ್ರಹ್ಮಕಲಶೋತ್ಸವ ನೆರವೇರಿಸುವ ಮೂಲಕ ಸಮಾಪನಗೊಂಡಿತು.

ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಬ್ರಹ್ಮಕಲಶೋತ್ಸವದಲ್ಲಿ ಪ್ರಾಥಃಕಾಲ ಮಹಾಗಣಪತಿ ಹೋಮ, ಮಹಾವಿಷ್ಣುಯಾಗ, ಅಲ್ಪಪ್ರಾಸಾದ ಶುದ್ಧಿ, ಪ್ರಾಸಾದ ಪ್ರತಿಷ್ಠೆ, ನಾಂದಿ ಪುಣ್ಯಾಹ, ನಪುಂಸಕಶಿಲಾ ಪ್ರತಿಷ್ಠೆ, ರತ್ನನ್ಯಾಸಾದಿ ಪೀಠಪ್ರತಿಷ್ಠೆ, ಶಯ್ಯಾಮಂಟಪದಿಂದಜೀವ ಕಲಶ ಬಿಂದ, ನಿದ್ರಾಕಲಶಾದಿಗಳು ನಡೆದ ಬಳಿಕ ಮೀನ ಲಗ್ನ ಮುಹೂರ್ತದಲ್ಲಿ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮಿಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀಮಹಾವಿಷ್ಣು ದೇವರ ಪ್ರತಿಷ್ಠೆ, ಅಷ್ಟಬಂಧಕ್ರಿಯೆ, ಕುಂಭೇಶಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಜೀವಕಲಶಾಭಿಷೇಕ, ಪ್ರತಿಷ್ಠಾಪೂಜೆ, ಶಿಖರ ಪ್ರತಿಷ್ಠೆ ಹಾಗೂ ಶ್ರೀದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಿತು.

ಮಧ್ಯಾಹ್ನ ಪ್ರತಿಷ್ಠಾಬಲಿ, ದೇವಾಲದಲ್ಲಿ ಮುಂದೆ ನಡೆಯುವ ನಿತ್ಯ, ನೈಮಿತ್ತಿಕಗಳ ಬಗ್ಗೆ ನಿಶ್ಚಯಿಸಿ ದೇವರಲ್ಲಿ ಪ್ರಾರ್ಥಿಸಲಾಯಿತು. ನಂತರ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆದ ಅನ್ನಸಂತರ್ಪಣೆ ನಡೆಯಿತು.

ಶಿಸ್ತು ಬದ್ದ ವ್ಯವಸ್ಥೆ:
ದೇವಾಲಯದ ಬ್ರಹ್ಮಕಲಶೋತ್ಸವದ ಯಶಸ್ಸಿಗಾಗಿ ವಿವಿಧ ಸಂಘ-ಸಂಸ್ಥೆಗಳು, ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಭಕ್ತಾದಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಸಿದ್ದಾರೆ. ಭದ್ರತೆ, ಅನ್ನ ಸಂತರ್ಪಣೆ, ಪಾರ್ಕಿಂಗ್, ಅಲಂಕಾರ ಸಹಿತ ಮೊದಲಾದ ಸಮಿತಿಗಳನ್ನು ರಚಿಸಿ, ಸ್ವಯಂಸೇವಕರನ್ನೊಳಗೊಂಡು ಸುವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿ ಬ್ರಹ್ಮಕಲಶವನ್ನು ಯಶಸ್ವಿಗೊಳಿಸಲಾಗಿದೆ. ಜೊತೆಗೆ ದೇವಸ್ಥಾನದ ಪರಿಸರದಲ್ಲಿ ಸ್ವಚ್ಚತೆಗೆ ಬಹಳಷ್ಟು ಆದ್ಯತೆ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಾವಿರಾರು ಮಂದಿ ಭಕ್ತಾದಿಗಳು ಆಗಮಿಸಿ ಬ್ರಹ್ಮಕಲಶೋತ್ಸವವದ ವೈಭವವನ್ನು ಕಣ್ತುಂಬಿಕೊಂಡರು.

ಮಾ.12ರಂದು ದರ್ಶನ ಬಲಿ:
ದೇವಳದ ಜಾತ್ರೋತ್ಸವದ ಅಂಗವಾಗಿ ಮಾ.12ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಶ್ರೀದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ ಹುಲಿಭೂತ ದೈವದ ನೇಮೋತ್ಸವ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

ಚಿತ್ರಗಳು: ಭೂಮಿ ಸ್ಟುಡಿಯೋ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.