ಮಜ್ಜಾರಡ್ಕದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ, ಸಾರ್ವಜನಿಕ ಅನ್ನಸಂತರ್ಪಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅರಿಯಡ್ಕ ಗ್ರಾಮದ ಮಜ್ಜಾರಡ್ಕ ಎಂಬಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ವಿವಿಧ ಕಾರ್ಯಕ್ರಮಗಳೊಂದಿಗೆ ಮಾ.09 ರಂದು ವಿಜೃಂಭಣೆಯಿಂದ ಜರಗಿತು. ಸಂಜೆ ಮಾಲಕೊಚ್ಚಿ ಸ್ಥಾನದಿಂದ ಭಂಡಾರ ತೆಗೆದು ಕುಂಬ್ರ ಅಶ್ವತ್ಥಕಟ್ಟೆಯಲ್ಲಿಟ್ಟು ಅಲ್ಲಿಂದ ಮಜ್ಜಾರಡ್ಕಕ್ಕೆ ತೆಗೆದುಕೊಂಡು ಬರುವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ನೂರಾರು ಭಕ್ತಾಧಿಗಳು ಜತೆಗಿದ್ದರು. ಬಳಿಕ ಮಜ್ಜಾರಡ್ಕ ಶ್ರೀ ವಿಷ್ಣುಮೂರ್ತಿ ದೈವದ ಸ್ಥಾನದಲ್ಲಿ ಮೇಲೇರಿಗೆ ಅಗ್ನಿ ಸ್ಪರ್ಶ ಕಾರ್ಯಕ್ರಮ ನಡೆದು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಅರಿಯಡ್ಕ ಶ್ರೀ ಕೃಷ್ಣ ಭಜನಾ ಸಂಘ ಕೌಡಿಚ್ಚಾರು ಇವರು ಭಜನಾ ಸೇವೆ ನಡೆಸಿಕೊಟ್ಟರು. ರಾತ್ರಿ ಕುಳಿಚ್ಚಾಟ ದೈವದ ನರ್ತನ, ಸುಡುಮದ್ದು ಪ್ರದರ್ಶನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಶ್ರೀ ವಿಷ್ಣು ಸಾಂಸ್ಕೃತಿಕ ಸೇವಾ ಸಮಿತಿ ಅರ್ಪಣೆಯಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಸುದರ್ಶನ ವಿಜಯ ಮನರಂಜಿಸಿತು. ಮರುದಿನ ಬೆಳಿಗ್ಗೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ ಬಳಿಕ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಂತರ ಮಂತ್ರವಾದಿ ಗುಳಿಗನ ನೇಮ ನಡೆಯಿತು. ಊರಪರವೂರ ಸಾವಿರಾರು ಭಕ್ತಾಧಿಗಳು ಒತ್ತೆಕೋಲದಲ್ಲಿ ಭಾಗವಹಿಸಿ ಶ್ರೀ ದೈವದ ಗಂಧ ಪ್ರಸಾದ ಸ್ವೀಕರಿಸಿದರು. ಸಾವಿರಕ್ಕೂ ಅಧಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಅನ್ನದಾನ ಉಸ್ತುವಾರಿಯನ್ನು ಹಿಂದೂ ಜಾಗರಣ ವೇದಿಕೆ ತ್ಯಾಗರಾಜನಗರ ಅನ್ನದಾನ ಸಮಿತಿಯವರು ವಹಿಸಿಕೊಂಡಿದ್ದರು. ಅರಿಯಡ್ಕ, ಕೆದಂಬಾಡಿ ಮತ್ತು ಕೆಯ್ಯೂರು ಗ್ರಾಮ ಸಮಿತಿಯ ಗೌರವಾಧ್ಯಕ್ಷ ಅರಿಯಡ್ಕ ಚಿಕ್ಕಪ್ಪ ನಾಕ್, ಅಧ್ಯಕ್ಷ ಅರಿಯಡ್ಕ ಸತೀಶ್ಚಂದ್ರ ರೈ ಎಂ, ಶ್ರೀ ವಿಷ್ಣು ಸಾಂಸ್ಕೃತಿಕ ಸೇವಾ ಸಮಿತಿಯ ಅಧ್ಯಕ್ಷ ರಾಜೇಶ್ ಕೆ.ಮಯೂರ ಸ್ವಾಮಿನಗರ ಹಾಗೂ ಸಮಿತಿ ಪದಾಧಿಕಾರಿಗಳು, ಸರ್ವ ಸದಸ್ಯರುಗಳು ಭಕ್ತಾಧಿಗಳನ್ನು ಸ್ವಾಗತಿಸಿ, ದೈವದ ಪ್ರಸಾದ ನೀಡಿ ಸತ್ಕರಿಸಿದರು.

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.