Home_Page_Advt
Home_Page_Advt
Home_Page_Advt

ದೇಶದಲ್ಲಿ ಗಲಭೆ ನಡೆಯಲು ಕಾಂಗ್ರೆಸ್, ಪರಿವಾರ ಕಾರಣ: ಸಂಸತ್ ಅಧಿವೇಶನದಲ್ಲಿ ಗುಡುಗಿದ ಸಂಸದ ನಳಿನ್ ಕುಮಾರ್ ಕಟೀಲ್

  • ಗಾಂಧಿಯವರು ಹೇಳಿದ್ದಂತೆ ಕಾಂಗ್ರೆಸ್ ವಿಸರ್ಜನೆಯಾಗುತ್ತಿದ್ದರೆ ಈ ದೇಶದಲ್ಲಿ ಗಲಭೆ ನಡೆಯುತ್ತಿರಲಿಲ್ಲ

ಪುತ್ತೂರು: ದೇಶದಲ್ಲಿ ಗಲಭೆ ನಡೆಯಲು ಸಂಪೂರ್ಣ ಕಾರಣ ಕಾಂಗ್ರೆಸ್ ಮತ್ತು ಅದರ ಪರಿವಾರ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಸಂಸತ್ ಅಧಿವೇಶನದಲ್ಲಿ ಕನ್ನಡದಲ್ಲಿ ಗುಡುಗಿದ್ದಾರೆ.

ಸಿ.ಎ.ಎ ಕಾಯ್ದೆ ವಿರುದ್ಧ ದೆಹಲಿಯಲ್ಲಿ ಗಲಭೆ ನಡೆದಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವ ಬೆನ್ನಲ್ಲೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು, ದೇಶದಲ್ಲಿ ಗಲಭೆ ನಡೆಯಲು ಕಾರಣ ಕಾಂಗ್ರೆಸ್ ಮತ್ತು ಅದರ ಪರಿವಾರ. ದೇಶ ವಿರೋಧಿ ಘೋಷಣೆಗಳನ್ನು ಕೂಗಿದವರು ಓವೈಸಿ ಭಾಷಣದಿಂದ ಪ್ರೇರಿತರಾದವರು ಇವತ್ತು ನರೇಂದ್ರ ಮೋದಿ ಅವರ ಹೆಸರು ಹಾಳು ಮಾಡಲು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ. ಮಹಾತ್ಮಾ ಗಾಂಧೀಜಿಯವರು ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಕ್ಕೆ ಮಾತ್ರ ಸೀಮಿತ. ಬಳಿಕ ಕಾಂಗ್ರೆಸ್ ವಿಸರ್ಜನೆ ಆಗಬೇಕೆಂದಿದ್ದರು. ಅವರ ಮಾತಿನಂತೆ ಆವತ್ತು ಕಾಂಗ್ರೆಸ್ ವಿಸರ್ಜನೆ ಆಗುತ್ತಿದ್ದರೆ ಈ ದೇಶದಲ್ಲಿ ಗಲಭೆ ನಡೆಯುತ್ತಿರಲಿಲ್ಲ. ಇವತ್ತು ಎಲ್ಲಾ ಗಲಭೆಗಳಿಗೆ ಮೂಲ ಕಾರಣ ಕಾಂಗ್ರೆಸ್ ಎಂದರು. ಅಂದು ಮಹಾತ್ಮ ಗಾಂಧೀಜಿಯವರು ಬೇರೆ ದೇಶದಿಂದ ಬಂದಿರುವ ಅಲ್ಪಸಂಖ್ಯಾತರಿಗೆ ರಕ್ಷಣೆ ಕೊಡಬೇಕೆಂಬ ಕನಸನ್ನು ಹೊತ್ತಿದ್ದರು. ಆದರೆ ಕಾಂಗ್ರೆಸ್ ಅದನ್ನು ಈಡೇರಿಸದೇ ಗಾಂಧಿ ಹೆಸರಿನಲ್ಲಿ ಓಟು ಪಡೆದದ್ದು ಮಾತ್ರ. ಗಾಂಧಿಯ ಕನಸನ್ನು ನನಸು ಮಾಡಿದ್ದು ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಎಂದ ನಳಿನ್ ಕುಮಾರ್, ೨೦೧೪ರಲ್ಲಿ ನರೇಂದ್ರ ಮೋದಿ ಅಧಿಕಾರ ಹಿಡಿದು ಆರು ವರ್ಷದಲ್ಲಿ ಒಂದೇ ಒಂದು ಗಲಭೆ ಆಗಿಲ್ಲ. ಭಯೋತ್ಪಾದನೆ ಆಗಿಲ್ಲ ಎಂದರು. ದೇಶದಲ್ಲಿ ಅತೀ ಹೆಚ್ಚು ದಂಗೆಗಳಾಗಿದ್ದು ಕಾಂಗ್ರೆಸ್ ಅಧಿಕಾರ ಇದ್ದ ಸಂದರ್ಭದಲ್ಲಿ. ದೆಹಲಿಯ ಗಲಭೆಯೂ ಒಂದು ವ್ಯವಸ್ಥಿತ ಷಡ್ಯಂತ್ರವಾಗಿದೆ. ಬಹಳಷ್ಟು ಶಾಂತಿ ಮಾತುಕತೆಗಳ ಮೂಲಕ ಪ್ರತಿಭಟನೆಗಳು ನಡೆಯಬೇಕು. ಆದರೆ ದೆಹಲಿಯ ಪ್ರತಿಭಟನೆಯ ಶಾಂತಿಕೋರರ ಕೈಯಲ್ಲಿ ಬಂದೂಕು, ಶಸ್ತ್ರಾಸ್ತ್ರಗಳು ಎಲ್ಲಿಂದ ಬಂತು. ಇದನ್ನು ನಾವು ಪ್ರಶ್ನೆ ಮಾಡಬೇಕು ಎಂದು ಅವರು ಸದನದಲ್ಲಿ ಪ್ರಸ್ತಾಪಿಸಿದರು. ಈ ವೇಳೆ ವಿರೋಧ ಪಕ್ಷದಿಂದ ಆಕ್ಷೇಪ ಕೇಳಿ ಬರುತ್ತಿದ್ದಂತೆ ಮಾತನ್ನು ಮುಂದುವರಿಸಿದ ನಳಿನ್ ಕುಮಾರ್ ಕಟೀಲ್ ಅವರು ನನ್ನ ಜಿಲ್ಲೆಯಲ್ಲೂ ದೊಡ್ಡ ಪ್ರಕರಣ ಆಗಿದೆ. ೨೦೧೯ನೇ ಡಿ. ೧೯ರಂದು ನನ್ನ ಜಿಲ್ಲೆಯಲ್ಲಿ ದೊಡ್ಡ ಗಲಭೆ ಉಂಟಾಯಿತು. ಈ ಗಲಭೆಯ ಹಿಂದಿನ ದಿವಸ ಕಾಂಗ್ರೆಸ್ ಸಭೆ ನಡೆಯಿತು. ಮಾಜಿ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಮ್ಮ ಭಾಷಣದಲ್ಲಿ ಸಿ.ಎ.ಎ ಕಾಯ್ದೆ ಜಾರಿಗೆ ಬಂದರೆ ಇಡೀ ಕರ್ನಾಟಕ ಹೊತ್ತಿ ಉರಿಯುತ್ತದೆ ಎಂದು ಹೇಳಿದರು. ಈ ಕುರಿತು ಅವರ ಮೇಲೆ ಕೇಸು ಆಗಿದೆ. ಇದಾದ ಎರಡು ದಿನಗಳ ನಂತರ ಮಂಗಳೂರಿನಲ್ಲಿ ಪ್ರತಿಭಟನೆ ನಡೆದು, ಬೆಂಕಿ ಹಚ್ಚುವ ಕೆಲಸ ಆಗಿದೆ. ಒಂದು ಪೊಲೀಸ್ ಠಾಣೆಗೂ ಬೆಂಕಿ ಹಾಕುವ ಯತ್ನ ನಡೆಯಿತು. ಮದ್ದು ಗುಂಡುಗಳ ಅಂಗಡಿಗೆ ನುಗ್ಗಿ ವಶ ಪಡಿಸುವ ಕೆಲಸ ಆಯಿತು. ಪೊಲೀಸರ ಮೇಲೆ ಲಾಠಿ, ಕಲ್ಲು ತೂರಾಟ ನಡೆಯಿತು. ಈ ಎಲ್ಲಾ ಘಟನೆಗಳಿಗೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.