ಮಾ.14-18: ಬಳಕ್ಕ ಬಂಗೇರ ತರವಾಡು ಮನೆ ಮತ್ತು ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಲ್ನಾಡು ಗ್ರಾಮದ ಅಗರ್ತಬೈಲಿನಲ್ಲಿ ಬಂಗೇರ ಕುಟುಂದವರು ಪ್ರಶ್ನೆಯಲ್ಲಿ ಕಂಡು ಬಂದಂತೆ ನೂತನವಾಗಿ ನಿರ್ಮಿಸಿದ ತರವಾಡು ಮನೆ ಯ ಗೃಹಪ್ರವೇಶ ಮತ್ತು ದೈವಸ್ಥಾನದಲ್ಲಿ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾ.೧೪ರಿಂದ ೧೮ರ ತನಕ ಜರಗಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಮಾಧವ ಬಂಗೇರ ಒಳಗುಡ್ಡೆ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಧಾಕರ ಎಸ್. ಕಾಟುಕುಕ್ಕೆ ತಿಳಿಸಿದ್ದಾರೆ. ಮಾ.೧೪ರಂದು ಸಂಜೆ ಹೊರೆಕಾಣಿಕೆ ಸಮರ್ಪಣೆ, ರಾತ್ರಿ ವೈದಿಕ ಕಾರ್ಯಕ್ರಮ, ಧಾರ್ಮಿಕ ಸಭೆ, ಅನ್ನಸಂತರ್ಪಣೆ ಹಾಗೂ ತುಳು ನಾಟಕ ನಡೆಯಲಿದೆ.

ಮಾ.೧೫ರಂದು ಬೆಳಿಗ್ಗೆ ತರವಾಡು ಮನೆ ಗೃಹ ಪ್ರವೇಶ, ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ, ಯಕ್ಷಗಾನ ಶಾಂಭವಿ ವಿಜಯ ಬಯಲಾಟ, ರಾತ್ರಿ ದೈವದ ಭಂಡಾರ ತೆಗೆದು ಕಲ್ಲುರ್ಟಿ, ಕೊರಗಜ್ಜ ದೈವದ ನೇಮ, ಮಾ.೧೬ರಂದು ಸಂಜೆ ಭಂಡಾರ ತೆಗೆದು ಬಳಿಕ ಭಕ್ತಿಗಾನ ವೈಭವ, ಅನ್ನಸಂತರ್ಪಣೆ, ರಾತ್ರಿ ಕುಪ್ಪೆ ಪಂಜುರ್ಲಿ, ರಾಹು ಗುಳಿಗ ದೈವದ ನೇಮ ನಡೆಯಲಿದೆ. ಮಾ೧೭ರಂದು ಸಂಜೆ ಭಂಡಾರ ತೆಗೆದು ಬಳಿಕ ಅನ್ನಸಂತರ್ಪಣೆ, ರಾತ್ರಿ ಸತ್ಯದೇವತೆ, ವರ್ಣರ ಪಂಜುರ್ಲಿ ಮತ್ತು ಕಲಾಲ್ತ ಗುಳಿಗ ದೈವದ ನೇಮ ಹಾಗೂ ಮಾ.೧೮ ರಂದು ಬೆಳಿಗ್ಗೆ ಧರ್ಮದೈವ ಧೂಮಾವತಿ ದೈವದ ನೇಮ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.