ಆರ್ಲಪದವು: ಗೈರು ಹಾಜರಾದ ಮಕ್ಕಳು ಮರಳಿ ಶಾಲೆಗೆ ಸೇರ್ಪಡೆ

Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ: ಕಳೆದ  ಕೆಲವು ದಿನಗಳಿಂದ ಶಾಲೆಗೆ ಗೈರು ಹಾಜರಾಗಿದ್ದ ದ.ಕ.ಜಿ.ಪ.ಉ.ಹಿ.ಪ್ರಾ ಶಾಲೆ ಆರ್ಲಪದವು ಇಲ್ಲಿಯ ಮೂವರು ವಿದ್ಯಾರ್ಥಿಗಳನ್ನು ಮನವೊಲಿಸಿ ಮರಳಿ ಶಾಲೆಗೆ ಸೇರಿಸಲಾಯಿತು.
ವಿದ್ಯಾರ್ಥಿಗಳಾದ ಪಾರ್ಪಳ ನಿವಾಸಿಗಳಾದ  ರಾಕೇಶ್(7ನೇ ತರಗತಿ), ರಂಜಿತ್(5ನೇ ತರಗತಿ), ಪ್ರಶಾಂತ್ (2 ನೇ ತರಗತಿ)ಇವರನ್ನು ಭೇಟಿ ಮಾಡಿ ಹೆತ್ತವರಲ್ಲಿ ಹಾಗೂ ಸದ್ರಿ ವಿಧ್ಯಾರ್ಥಿಗಳ ಜೊತೆ ಶಿಕ್ಷಣದ ಮಹತ್ವ  ಮತ್ತು ಶಿಕ್ಷಣದ ಬಗ್ಗೆ ಅರಿವು ಮೂಡಿಸಿ ಮಾ.12 ರಂದು ಶಾಲೆಗೆ ಹಾಜರುಪಡಿಸಲಾಯಿತು.ಪಾಣಾಜೆ ಗ್ರಾಮದ ಬೀಟ್ ಪೋಲೀಸ್ ಗಿರೀಶ್ ರೈ ಇವರಲ್ಲಿ ಶಾಲಾ ಮುಖ್ಯ ಗುರುಗಳು ಈ ಮೂವರು ಮಕ್ಕಳು ಶಾಲೆಗೆ ಬಾರದಿರುವುದನ್ನು ತಿಳಿಸಿದರು. ಅ ಬಗ್ಗೆ ತಕ್ಷಣ ಕಾರ್ಯ ಪ್ರವೃತ್ತರಾದ ಜನಸ್ನೇಹಿ ಉತ್ತಮ ಪೊಲೀಸ್ ಗಿರೀಶ್ ರೈಯವರು ಮಕ್ಕಳು ಇರುವಲ್ಲಿಗೆ ತೆರಳಿ ಮಕ್ಕಳ ಮತ್ತು ಅವರ ಹೆತ್ತವರ ಮನವೊಲಿಸಿ ಶಾಲೆಗೆ ಪುನಃ ಬರುವಂತೆ ಮಾಡುವಲ್ಲಿ ಯಶಸ್ವಿಯಾದರು. ಇವರ ಕಾರ್ಯವೈಖರಿ ಬಗ್ಗೆ ಶಿಕ್ಷಕರು ಮತ್ತು ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಯಿತು. ಮಕ್ಕಳೊಂದಿಗೆ  ಬೀಟ್ ಪೊಲೀಸ್ ಗಿರೀಶ್ ರೈ ಮತ್ತು ಶಾಲಾ ಮುಖ್ಯ ಶಿಕ್ಷಕಿ ಶೀಲಾವತಿ ಇವರನ್ನು ಕಾಣಬಹುದು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.