Breaking News

ಅಡೆಂಜ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ :ಹಸಿರುವಾಣಿ ಸಮರ್ಪಣೆ

Puttur_Advt_NewsUnder_1
Puttur_Advt_NewsUnder_1

ಕಡಬ : ಅಡೆಂಜ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಾ. ೧೨ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ಪ್ರಯುಕ್ತ ಭಕ್ತಾದಿಗಳಿಂದ ಹಸಿರುವಾಣಿ ಸಮರ್ಪಣೆ ನಡೆಯಿತು.

ಬೆಳಿಗ್ಗೆ ಬಳಕ್ಕ, ಈಚಿಲಡ್ಕ, ಬಾಳೆಮಾರು, ನಿಡ್ಡೊ, ಜಾಲು, ಕಲ್ನಾರು, ಮಾರಪ್ಪೆ, ಕಲ್ಲುಗುಡ್ಡೆ, ಅರಿಮಜಲು, ಸಾಂತ್ಯಡ್ಕ, ಕೆರ್ನಡ್ಕ, ಭಾಗದಿಂದ ಅದೇ ರೀತಿ ನೂಜಿ ಉಳ್ಳಾಲ್ತಿ ದೈವಸ್ಥಾನ, ಹಳೆನೂಜಿ, ಪಾಲೆತ್ತಡಿ, ನೀರಾರಿ, ಮಾವಿನಕಟ್ಟೆ, ರೆಂಜಿಲಾಡಿ ಗ್ರಾಮದ ಪಾಡ್ಲ, ಗೋಳಿಯಡ್ಕ, ನೂಜಿಬಾಳ್ತಿಲ ಗ್ರಾಮದ ಕನ್ವರೆ, ಕುರಿಯಾಳಕೊಪ್ಪ ದೇವಸ್ಥಾನ, ಬಸ್ತಿ ಬದಿಬಾಗಿಲು, ಕಂಪ, ಒರುಂಬಾಳು ದೇವಸ್ಥಾನ, ಸೇರಿದಂತೆ ನೂಜಿಬಾಳ್ತಿಲ, ರೆಂಜಿಲಾಡಿ ಗ್ರಾಮಗಳ ವಿವಿಧ ಭಾಗಗಳಿಂದ ಭಕ್ತಾಧಿಗಳು ಹೊರೆಕಾಣಿಕೆ ತಂದು ಸಮರ್ಪಿಸಿದರು.

ಕ್ಷೇತ್ರದ ಅರ್ಚಕ ಶಿವಪ್ರಸಾದ್ ಭಟ್, ಉಗ್ರಾಣ ಪೂಜೆ ನಡೆಸಿದರು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕರುಣಾಕರ ಈಚಿಲಡ್ಕ, ಕಾರ್ಯದರ್ಶಿ ರಾಧಕೃಷ್ಣ ಅಡೆಂಜ, ಕೋಶಾಧಿಕಾರಿ ಸಿವಿಲ್ ಇಂಜಿನಿಯರ್ ದುರ್ಗಾಪ್ರಸಾದ್ ಕೆ.ಪಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಕೆರ್ನಡ್ಕ, ಭಜನಾ ಮಂಡಳಿ ಅಧ್ಯಕ್ಷ ಪದ್ಮನಾಭ ಗೌಡ ಕೆರ್ನಡ್ಕ, ಗೌರವ ಸಲಹೆಗಾರರಾದ ಕೆಂಚಪ್ಪ ಗೌಡ ಕೆರ್ನಡ್ಕ, ಎಚ್.ಎಸ್ ವೆಂಕಟರಮಣ ಸಾಂತ್ಯಡ್ಕ ಜಾಲು , ಹೊರೆಕಾಣಿಕೆ ತಂಡದ ರಘುರಾಜ್ ಕೆರ್ನಡ್ಕ, ಹರೀಶ್ ಅಡೆಂಜ, ಪ್ರಮೋದ್ ಬಳ್ಳೇರಿ, ಗಣೇಶ್ ಬಾಳೆಮಾರು, ಮನುರಾಜ್ ಕೆರ್ನಡ್ಕ, ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ, ಭಜನಾ ಮಂಡಳಿ, ಮಹಿಳಾ ಸಂಘಟನೆಗಳು ಸೇರಿದಂತೆ ಊರ-ಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.