ಪುತ್ತೂರಿನ ಹೊಟೇಲ್ ಉದ್ಯಮಕ್ಕೆ ಮತ್ತೊಂದು ಗರಿ… ಪಡಿವಾಲ್ಸ್ ಪಲಾರ ವೆಜ್ ರೆಸ್ಟೋರೆಂಟ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದಕ್ಷಿಣ ಕನ್ನಡದ ಜೈನ ಸಮುದಾಯದ ವಿಶೇಷ, ವಿಭಿನ್ನ ಶೈಲಿಯ ಖಾದ್ಯಗಳು, ಊಟ, ಉಪಾಹಾರಗಳು ಒಳಗೊಂಡಂತೆ ದಕ್ಷಿಣ ಹಾಗೂ ಉತ್ತರ ಭಾರತದ ಪ್ರಖ್ಯಾತಿಯ ಸವಿರುಚಿ ಖಾದ್ಯಗಳ ಶುದ್ದ ಸಸ್ಯಹಾರಿ ಫ್ಯಾಮಿಲಿ ರೆಸ್ಟೋರೆಂಟ್ ಮಾ.13ರಂದು ಬೊಳುವಾರು ಮಹಾವೀರ ಮಾಲ್‌ನಲ್ಲಿ ಶುಭಾರಂಭಗೊಂಡಿತು. ಮ್ಹಾಲಕ ಅಶೋಕ್ ಪಡಿವಾಲ್‌ರವರ ಅತ್ತೆ ಕಮಲಾ ಪಡಿವಾಳ್ ನೂತನ ರೆಸ್ಟೋರೆಂಟ್‌ನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು.

ಹೈ ಫೈ ರೆಸ್ಟೋರೆಂಟ್:
ವಿಶಿಷ್ಟ ಶೈಲಿ, ಹೊಸ ವಿನ್ಯಾಸ, ಆಕರ್ಷಣೀಯ ಪೀಠೋಪಕರಣಗಳನ್ನು ಒಳಗೊಂಡಿರುವ ರೆಸ್ಟೋರೆಂಟ್ ಎಸಿ ಹಾಗೂ ನಾನ್ ಎಸಿ ಪ್ರತ್ಯೇಕ ವಿಭಾಗಗಳನ್ನು ಹೊಂದಿದೆ. 11 ಟೇಬಲ್‌ಗಳನ್ನು ಒಳಗೊಂಡಿರುವ ಬೃಹತ್ ಹವಾನಿಯಂತ್ರಿತ ವಿಭಾಗ ಹಾಗೂ 17 ಟೇಬಲ್‌ಗಳನ್ನು ಹೊಂದಿರುವ ಹವಾನಿಯಂತ್ರಿತವಲ್ಲದ ವಿಭಾಗವನ್ನು ಹೊಂದಿದೆ. ಉತ್ತಮ ಅನುಭವೀ ಅಡುಗೆ ಸಿಬಂದಿ, ಸಪ್ಲಾಯರ್‌ಗಳಿಂದ ಉತ್ತಮ ಸೇವೆ ದೊರೆಯಲಿದೆ. ಬರ್ತ್‌ಡೇ ಪಾರ್ಟಿ ಸೇರಿದಂತೆ ವಿಶೇಷ ಕಾರ್ಯಕ್ರಮಗಳಿಗೆ ಹವಾನಿಯಂತ್ರಿತ ವಿಭಾಗವನ್ನು ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಶುಭ ಸಮಾರಂಭಗಳಿಗೆ ಕ್ಯಾಟರಿಂಗ್ ಸೌಲಭ್ಯವನ್ನು ನೀಡುವ ಯೋಜನೆಯಿದೆ.

ಸೌತ್‌ಕೆನರಾ ಜೈನ್ಸ್ ಸ್ಪೆಷಲ್:
ದಕ್ಷಿಣ ಕನ್ನಡದ ಜೈನ ಸಮುದಾಯದ ವಿಶೇಷ, ವಿಭಿನ್ನ ಶೈಲಿಯ ಖಾದ್ಯಗಳು, ಊಟ, ಉಪಾಹಾರಗಳು ಒಳಗೊಂಡಂತೆ ದಕ್ಷಿಣ ಹಾಗೂ ಉತ್ತರ ಭಾರತದ ಪ್ರಖ್ಯಾತಿಯ ಸವಿರುಚಿ ಖಾದ್ಯಗಳ ದೊರೆಯಲಿದೆ. ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಮೋಕ್ ಟೈಲ್ ಜ್ಯೂಸ್, ಕಟ್‌ಮಂಡಿಗೆ ಎಂಬ ವಿಶೇಷ ಖಾದ್ಯಗಳು, ಐಡಿಯಲ್ ಐಸ್‌ಕ್ರೀಂಗಳು ಲಭ್ಯವಿದೆ. ಬೆಳಿಗ್ಗೆ 7ಗಂಟೆಯಿಂದ ರಾತ್ರಿ 10.30ರ ತನಕ ಕಾರ್ಯನಿರ್ವಹಿಸಲಿದ್ದು ಮಧ್ಯಾಹ್ನ 12 ಗಂಟೆಯಿಂದ ಸಂಜೆ 3.30 ಹಾಗೂ ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆ ತನಕ ಊಟ ದೊರೆಯಲಿದೆ ಎಂದು ಮ್ಹಾಲಕರು ತಿಳಿಸಿದ್ದಾರೆ.

ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಸವಣೂರು, ಸ್ವರ್ಣೋದ್ಯಮಿ ಬಲರಾಮ ಆಚಾರ್ಯ, ಸುಧನ್ವ ಆಚಾರ್ಯ, ನಗರ ಸಭಾ ಸದಸ್ಯ ಸುಂದರ ಪೂಜಾರಿ, ಮಾಜಿ ಸದಸ್ಯ ರಾಮಣ್ಣ ಗೌಡ ಹಲಂಗ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ರಾಜಶೇಖರ್ ರೈ ನೀರ್ಪಾಜೆ, ಧನ್ಯ ಕುಮಾರ್ ಬಿಳಿಯೂರುಗುತ್ತು, ಜೆಡಿಎಸ್ ಮುಖಂಡ ಶ್ರೇಯಾಂಶ್ ಕುಮಾರ್, ರೋಟರಿ ಕ್ಲಬ್‌ನ ಎ.ಜೆ ರೈ, ಧರ್ಣಪ್ಪ ಗೌಡ, ಶ್ರೀಕಾಂತ್ ಕೊಳತ್ತಾಯ, ಡಾ.ಎ.ಕೆ ರೈ, ಡಾ ಸುರೇಶ್ ಪುತ್ತೂರಾಯ, ಡಾ. ಅಜಿತ್ ರೈ, ಶಿಲ್ಪಾ ಗ್ಯಾಸ್‌ನ ಮ್ಹಾಲಕ ಉಮಾನಾಥ, ಆದರ್ಶ ವಿವಿಧೋದ್ಧೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ ಜಾಲಾಡಿ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.