ಉಪ್ಪಿನಂಗಡಿ ಪೊಲೀಸರಿಂದ ಖತರ್ನಾಕ್ ಕಳ್ಳ ಶೌಕತ್ ಅಲಿ ಬಂಧನ: 13 ಪ್ರಕರಣ, 18 ಲಕ್ಷದ ಚಿನ್ನ ಸ್ವಾಧೀನ!

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ ಉಪ್ಪಿನಂಗಡಿ ಪೊಲೀಸರು ಪುತ್ತೂರು, ಉಪ್ಪಿನಂಗಡಿ ಹಾಗೂ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ೧೩ ಕಳ್ಳತನ ಪ್ರಕರಣಗಳನ್ನು ಭೇಧಿಸಿದ್ದು, ಈತನಿಂದ ೧೮ ಲಕ್ಷ ರೂ. ಮೊತ್ತದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ೨೦೧೭ರ ಬಳಿಕ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಹೆಚ್ಚಿನ ಕಳ್ಳತನ ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದಾನೆ.

ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯುತ್ತಿದ್ದ ಕಳ್ಳತನ ಪ್ರಕರಣಗಳನ್ನು ಸವಾಲಾಗಿ ಸ್ವೀಕರಿಸಿದ ಉಪ್ಪಿನಂಗಡಿ ಪೊಲೀಸರು ಕುಖ್ಯಾತ ಕಳ್ಳ ಮೂಲತಃ ಚಿಕಮಗಳೂರು ಜಿಲ್ಲೆಯ ಶಂಕರಪುರ ೩ನೇ ಕ್ರಾಸ್ ನಿವಾಸಿ ದಿ. ಅಸ್ಗರ್ ಅಲಿ ಎಂಬವರ ಪುತ್ರ ಶೌಕತ್ ಯಾನೆ ಶೌಕತ್ ಅಲಿ (೫೬) ಬಂಧಿತ ಆರೋಪಿ. ಪ್ರಸಕ್ತ ಈತ ಮಾಣಿ ಗ್ರಾಮದ ಅಳಿರಾ ಎಂಬಲ್ಲಿ ವಾಸ್ತವ್ಯವಿದ್ದ. ಮಾ.೫ರಂದು ರಾತ್ರಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಈತನನ್ನು ಉಪ್ಪಿನಂಗಡಿ ಪೊಲೀಸರು ವಿಚಾರಣೆ ನಡೆಸಿದಾಗ ಈತ ಹಲವು ಮನೆಗಳಲ್ಲಿ ಕಳವು ನಡೆಸಿದಾತ ಎಂದು ಬೆಳಕಿಗೆ ಬಂದಿತ್ತು. ಮಾ.೬ರಂದು ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ವಾಪಸ್ ಈತನನ್ನು ಕಸ್ಟಡಿಗೆ ತೆಗೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಿದ್ದು, ಆ ಸಂದರ್ಭ ಒಂದೊಂದೇ ಪ್ರಕರಣಗಳು ಬಯಲಾಯಿತು. ೨೦೧೭ರ ಬಳಿಕ ಉಪ್ಪಿನಂಗಡಿ ವ್ಯಾಪ್ತಿಯಲ್ಲಿ ನಡೆದ ಹೆಚ್ಚಿನ ಮನೆಕಳವು ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದ. ಈತ ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಆದರ್ಶನಗರ, ೩೪ ನೆಕ್ಕಿಲಾಡಿ, ಕಲ್ಲೇರಿ, ಕೆಂಪಿಮಜಲು, ಪುತ್ತೂರು ನಗರ ಠಾಣಾ ವ್ಯಾಪ್ತಿಯ ಅಜೇಯನಗರ, ಮುರ, ಬನ್ನೂರು, ಹಾರಾಡಿ, ಕೋಡಿಂಬಾಡಿ, ಜೈನರಗುರಿ, ಸಾಲ್ಮರ, ದಾರಂದಕುಕ್ಕು, ಬಂಟ್ವಾಳ ಠಾಣಾ ವ್ಯಾಪ್ತಿಯ ಕಲ್ಲಡ್ಕಗಳಲ್ಲಿ ನಡೆದ ಮನೆ ಕಳವು ಪ್ರಕರಣಗಳಲ್ಲಿ ಈತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಈತನಿಂದ 13 ಪ್ರಕರಣಗಳನ್ನು ಪತ್ತೆ ಹಚ್ಚಿ ರೂ ಸುಮಾರು 18 ಲಕ್ಷ ಮೌಲ್ಯ ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಸ್ವಾಧೀನಪಡಿಸಲಾಗಿದೆ.ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಈತ ಮಾರಿದ ಚಿನ್ನವನ್ನು ಉಪ್ಪಿನಂಗಡಿಯ ೨ ಹಾಗೂ ಬಂಟ್ವಾಳದ ಒಂದು ಜ್ಯುವೆಲ್ಲರಿಯಿಂದ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಂತಹ ಖತರ್ನಾಕ್ ಕಳ್ಳನನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸರ ಕಾರ್ಯ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಮಾರ್ಗದರ್ಶನದಂತೆ ನಡೆದ ಈ ಪತ್ತೆಕಾರ್ಯದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಸಬ್ ಇನ್ಸ್ ಪೆಕ್ಟರ್ ಈರಯ್ಯ ಡಿ.ಎನ್., ಕ್ರೈಂ ಎಸ್‌ಐ ಭರತ್, ಎಎಸೈ ಚೋಮ, ಹೆಡ್ ಕಾನ್‌ಸ್ಟೇಬಲ್‌ಗಳಾದ ದೇವದಾಸ್, ಶೇಖರ್, ಕಾನ್‌ಸ್ಟೇಬಲ್‌ಗಳಾದ ಇರ್ಷಾದ್, ಪುತ್ತೂರು ಗ್ರಾಮಾಂತರ ಠಾಣಾ ಹೆಡ್‌ಕಾನ್‌ಸ್ಟೇಬಲ್ ಅದ್ರಾಮ ಪುಣಚ, ಧರ್ನಪ್ಪ, ವಿನಯಕುಮಾರ್ ಏನೇಕಲ್, ಪುತ್ತೂರು ಗ್ರಾಮಾಂತರ ವೃತ್ತ ಕಚೇರಿಯ ಹೆಚ್.ಸಿ. ಅಬ್ದುಲ್ ಸಲೀಂ, ಶಿವರಾಮ, ಜಗದೀಶ್, ವಾಹನ ಚಾಲಕ ನವಾಝ್ ಬುಡ್ಕಿ ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.