ಮಾ.14: ಸವಣೂರು ಸಿ.ಎ ಬ್ಯಾ೦ಕಿಗೆ ಮ೦ಗಳೂರಿನಲ್ಲಿ ಇಪ್ಕೋ ಸ೦ಸ್ಥೆಯಿ೦ದ ಪುರಸ್ಕಾರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಮ೦ಗಳೂರು ಪುರಭವನದಲ್ಲಿ ಇಫ್ಕೋ, ಕನಾ೯ಟಕ ರಾಜ್ಯ ಸಹಕಾರ ಮಹಾಮ೦ಡಳ ಮತ್ತು ಡಿ.ಸಿ.ಸಿ.ಬ್ಯಾ೦ಕಿನ ವತಿಯಿ೦ದ ನಡೆಯುವ ಸಹಕಾರಿ ಸಮ್ಮೇಳನದಲ್ಲಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸ೦ಘದ ಕಾರ್‍ಯ ವೈಖರಿ ಮತ್ತು ಸವಾ೯೦ಗೀಣ ಪ್ರಗತಿಯನ್ನು ಗುರುತಿಸಿ ಅಭಿನ೦ದಿಸುವ ಕಾರ್‍ಯಕ್ರಮ ನಡೆಯಲಿದೆ.

ಈ ಸಮಾರ೦ಭದಲ್ಲಿ ಕೇ೦ದ್ರ ಸಚಿವರಾದ ಶ್ರೀ ಡಿ.ವಿ ಸದಾನ೦ದ ಗೌಡ, ಸಹಕಾರ ಸಚಿವರಾದ ಶ್ರೀ ಎಸ್.ಟಿ.ಸೋಮಶೇಖರ್,ಉಸ್ತುವಾರಿ ಸಚಿವರಾದ  ಕೋಟ ಶ್ರೀನಿವಾಸ ಪೂಜಾರಿ, ಸ೦ಸದರಾದ  ನಳಿನ್ ಕುಮಾರ್ ಕಟೀಲ್, ಇಫ್ಕೋ ಸ೦ಸ್ಥೆಯ ಅಧ್ಯಕ್ಷ  ಶ್ರೀನಿವಾಸ ಗೌಡ ಕೆ, ಡಿ.ಸಿ.ಸಿ ಬ್ಯಾ೦ಕಿನ ಅಧ್ಯಕ್ಷರಾದ ಡಾ| ಎ೦.ಎನ್ ರಾಜೇ೦ದ್ರ ಕುಮಾರ್ ಉಪಸ್ಥಿತಿಯಲ್ಲಿ ಈ ಗೌರವಾರ್ಪಣೆ ನಡೆಯಲಿದೆ ಎ೦ದು ಸ೦ಘದ ಅಧ್ಯಕ್ಷರಾದ ಗಣೇಶ್ ನಿಡ್ಡಣ್ಣಾಯ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.