ಕುಂತೂರು ಪದವು: ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ರಸ್ತೆಯಲ್ಲಿ ವಾಹನ ಡಿಕ್ಕಿಯಾಗಿ ಕಡವೆಗೆ ಗಾಯ ಕಡಬದಲ್ಲಿ ಚಿಕಿತ್ಸೆ ನೀಡಿ ಪಿಲಿಕುಳಕ್ಕೆ ರವಾನೆ

Puttur_Advt_NewsUnder_1
Puttur_Advt_NewsUnder_1

ಕಡಬ: ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಂತೂರು ಪದವು ಎಂಬಲ್ಲಿ ವಾಹನ ಡಿಕ್ಕಿಯಾಗಿ ಕಡವೆಯೊಂದು ಗಾಯಗೊಂಡು ಪತ್ತೆಯಾದ ಘಟನೆ ಮಾ.13ರಂದು ಮುಂಜಾನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಕಡವೆಯ ಒಂದು ಕಾಲು ಮುರಿತಕ್ಕೊಳಗಾಗಿದ್ದು ರಸ್ತೆ ಸಮೀಪ ಬಿದ್ದಿದ್ದ ಕಡವೆಯನ್ನು ಗುರುತಿಸಿ ಸ್ಥಳೀಯರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದರು, ಬಳಿಕ ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ ಗಿರೀಶ್ ಆರ್. ಉಪ ವಲಯ ಅರಣ್ಯಾಧಿಕಾರಿ ರವಿಪ್ರಕಾಶ್, ಅರಣ್ಯ ರಕ್ಷಕರಾದ ರವಿಕುಮಾರ್, ರವಿಚಂದ್ರ, ಸುಬ್ರಹ್ಮಣ್ಯ ಅವರುಗಳು ಕಡವೆಯನ್ನು ಕಡಬ ಪಶುವೈದ್ಯ ಆಸ್ಪತ್ರೆಗೆ ತಂದು ಪಶುವೈದ್ಯಾಧಿಕಾರಿ ಅಜಿತ್ ಎಸ್.ರವರ ಮೂಲಕ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಪಿಲಿಕುಳ ನಿಸರ್ಗದಾಮಕ್ಕೆ ರವಾನಿಸಿದ್ದಾರೆ.

“ಕಾಡು ಪ್ರಾಣಿಗಳ ಸಂಚಾರವಿದೆ ನಿಧಾನವಾಗಿ ಸಂಚರಿಸಿ”
ಎಚ್ಚರಿಕೆ ಫಲಕವಿದ್ದರೂ ಪ್ರಯೋಜನವಿಲ್ಲ!
ಬಲ್ಯದಿಂದ ಪದವು ರಾಜ್ಯ ರಸ್ತೆಯ ಪರಿಸರದಲ್ಲಿ ಅನೇಕ ಕಾಡು ಪ್ರಾಣಿಗಳ ಸಂಚಾರವಿದ್ದು ಈ ಬಗ್ಗೆ ಈಗಾಗಲೇ ಅರಣ್ಯ ಇಲಾಖೆಯವರು ಎಚ್ಚರಿಕೆ ಫಲಕ ಅಳವಡಿಸಿದ್ದಾರೆ, ಆದರೆ ವಾಹನ ಸವಾರರು ಇದನ್ನು ಗಣನೆಗೆ ತೆಗೆದುಕೊಳ್ಳದೆ ಸಂಚರಿಸುತ್ತಿರುವುದು ಕಂಡು ಬರುತ್ತಿದೆ, ದ್ವಿಚಕ್ರ ವಾಹನದದವರು ಕಾಡು ಪ್ರಾಣಿಗಳಿಗೆ ಡಿಕ್ಕಿಯಾಗಿರುವ ಹಲವು ಘಟನೆಗಳು ನಡೆದಿದೆ, ದೊಡ್ಡ ವಾಹನಗಳು ಡಿಕ್ಕಿಯಾಗಿ ಕಾಡು ಪ್ರಾಣಿಗಳು ಗಾಯಗೊಂಡಿರುವುದು ಕೂಡ ನಡೆದಿದೆ, ಇನ್ನಾದರೂ ಈ ಪರಿಸರದಲ್ಲಿ ವಾಹನ ಸವಾರರು ನಿಧಾನಗತಿಯಲ್ಲಿ ಸಂಚರಿಸಲು ಸಂಬಂಧಪಟ್ಟ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ ಕೇಳಿ ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.