ಕೊರೋನಾ ವೈರಸ್ ಹಿನ್ನಲೆ: ಶಾಲಾ, ಕಾಲೇಜುಗಳಿಗೆ 15 ದಿನಗಳ ರಜೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ವೈರಸ್ ವ್ಯಾಪಕವಾಗಿ ಹರುಡುತ್ತಿದ್ದು ಶಾಲೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸರಕಾರಿ, ಖಾಸಗಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳಿಗೆ 15 ದಿನಗಳ ಕಾಲ ರಜೆ ಘೋಷಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.
೧ರಿಂದ ೬ನೇಯ ತರಗತಿಯ ಎಲ್ಲಾ ಶಾಲೆಗಳಿಗೆ ಮಾ.೧೪ರಿಂದ ತರಗತಿಗಳನ್ನು ಸ್ಥಗಿತಗೊಳಿಸುವುದು ಹಾಗೂ ಪರೀಕ್ಷೆಗಳು ನಡೆಯುತ್ತಿದ್ದರೆ ಅವುಗಳನ್ನು ಸ್ಥಗಿತಗೊಳಿಸಿ ಬೇಸಿಗೆ ರಜೆಯನ್ನು ಘೋಷಿಸಿ 2019-20ನೇ ಸಾಲಿನಲ್ಲಿ ಎಫ್‌ಎ1, ಎಫ್‌ಎ2, ಎಫ್‌ಎ3, ಎಫ್‌ಎ4, ಎಸ್‌ಎ1 ಹಾಗೂ ಎಸ್‌ಎ2 ರಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಶ್ರೇಣಿಕೃತ ಫಲಿತಾಂಶವನ್ನು ನೀಡಿ ಮುಂದಿನ ತಗರತಿಗಳಿಗೆ ಮುಂಬಡ್ತಿ ನೀಡುವುದು. ಬೇಸಿಗೆಯ ರಜೆಯ ನಂತರ 2020-21ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯಂತೆ ಶಾಲೆಗಳನ್ನು ಪುನರಾರಂಭ ಮಾಡುವಂತೆ ಸೂಚಿಸಲಾಗಿದೆ.
7ರಿಂದ 10ನೇ ತರಗತಿಗಳನ್ನು ಪರೀಕ್ಷಾ ಪೂರ್ವ ಸಿದ್ದತಾ ರಜೆಯ ಮಾದರಿಯಲ್ಲಿ ಸೂಚಿಸುವುದು. 7 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾ.23ರ ಒಳಗಾಗಿ ಪರೀಕ್ಷೆಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಿ ರಜೆ ಘೋಷಿಸುವುದು. 10ನೇ ತರಗತಿಯ ವಿದ್ಯಾರ್ಥಿಗಳಿಗೆ ಈಗಾಗಲೇ ನಿಗಧಿಯಾಗಿರುವ ವೇಳಾಪಟ್ಟಿಯಂತೆ ಪರೀಕ್ಷೆಗಳನ್ನು ನಡೆಸುವಂತೆ ಆದೇಶಿಸಲಾಗಿದೆ.
ವಿದ್ಯಾರ್ಥಿಗಳು ಸುರಕ್ಷತಾ ಕ್ರಮವಾಗಿ ಮಾಸ್ಕ್ ಧರಿಸಿ ಪರೀಕ್ಷೆ ಬರೆಯಲು ಇಚ್ಚಿಸಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಅವಕಾಶವನ್ನು ನೀಡುವುದು. ಪರೀಕ್ಷೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆಬ ಶಾಲಾ ಮುಖ್ಯಸ್ಥರಿಗೆ ತಿಳಿಸಲಾಗಿದೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ರಾಜ್ಯ ಪಠ್ಯಕ್ರಮ/ಸಿ.ಬಿಎಸ್.ಸಿ, ಐಸಿಎಸ್‌ಸಿ, ಐಜಿಎಸ್‌ಸಿ, ಐಬಿ ಮುಂತಾದ ಪಠ್ಯಕ್ರಮದ ಎಲ್ಲಾ ಶಾಲೆಗಳಿಗೂ ಅನ್ವಯವಾಗುವಂತೆ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶದಲ್ಲಿ ಸೂಚಿಸಿದ್ದಾರೆ.
ಪರೀಕ್ಷೆ ದಿನಗಳಲ್ಲಿ ಬದಲಾವಣೆಯಿಲ್ಲ:
ಪ್ರಾಥಮಿಕ ಶಾಲೆಗಳ ಪೈಕಿ 1ರಿಂದ 6ನೇ ತರಗತಿಯ ವರೆಗಿನ ಪರೀಕ್ಷೆಗಳು ಈಗಾಗಲೇ ಪೂರ್ಣಗೊಂಡಿದೆ. 7ರಿಂದ10ನೇ ತರಗತಿಯ ಪರೀಕ್ಷೆಗಳು ಈಗಾಗಲೇ ನಿಗದಿಗೊಳಿಸಿದ ದಿನಾಂಕಗಳಂದೆ ನಡೆಯಲಿದೆ. ಪರೀಕ್ಷಾ ದಿನಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.