ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಪ್ರತಿಷ್ಠಾ ಮಹೋತ್ಸವ, ಜಾತ್ರೋತ್ಸವ ಸಂಪನ್ನ

ನಿಡ್ಪಳ್ಳಿ: ಇಲ್ಲಿಯ ಶ್ರೀ ಶಾಂತದುರ್ಗಾ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆದು ಇದೀಗ ಪ್ರಥಮ ವರ್ಷದ ಪ್ರತಿಷ್ಠಾ ಮಹೋತ್ಸವ ಮತ್ತು ಜಾತ್ರೋತ್ಸವ ಕಾರ್ಯಕ್ರಮ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಮಾ.13 ರಂದು ನಡೆಯಿತು.
ಬೆಳಿಗ್ಗೆ ಪ್ರಾರ್ಥನೆ ,ಗಣಪತಿ ಹೋಮ, ನವಕ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಪೂಜೆ, ಪ್ರಸಾದ ವಿತರಣೆ ನಂತರ ಮಹಾ ಅನ್ನಸಂತರ್ಪಣೆ ನಡೆಯಿತು. ಬಳಿಕ  ಶ್ರೀ ಭೂತ ಬಲಿ  ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ರಾಜಾಂಗಣ ಪ್ರಸಾದ ನಡೆದು ಶ್ರೀ ದೇವರ ಗರ್ಭ ಗೃಹ ಪ್ರವೇಶ ಮಂತ್ರಾಕ್ಷತೆ ನಡೆಯಿತು. ಶ್ರೀ ಕಿನ್ನಿಮಾಣಿ ಪೂಮಾಣಿ ಪರಿವಾರ ದೈವಗಳ ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ನಿಡ್ಪಳ್ಳಿ ಗುತ್ತು ಪ್ರವೀಣ ಎನ್.ಆರಿಗ, ವಸಂತಿ ಜೆ.ಆರಿಗ ಮತ್ತು ಮನೆಯವರು ನಿಡ್ಪಳ್ಳಿ ಗುತ್ತು, ದೇವಸ್ಥಾನದ ಆಡಳಿತ  ಮಂಡಳಿ ಗೌರವಾಧ್ಯಕ್ಷ ಪ್ರಮೋದ್ ಕುಮಾರ್ ಆರಿಗ, ಅಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ, ಕಾರ್ಯದರ್ಶಿ ನಾರಾಯಣ ರೈ ಕೊಪ್ಪಳ,ಜತೆ ಕಾರ್ಯದರ್ಶಿ ಕುಮಾರ ನರಸಿಂಹ ಬುಳೆನಡ್ಕ,  ಕೋಶಾಧಿಕಾರಿ ವಾಸುದೇವ ಭಟ್ ಮತ್ತು ಸಮಿತಿ ಸದಸ್ಯರಾದ ದಿವ್ಯಾ ಕೆ.ಶೆಟ್ಟಿ , ಶಿವಪ್ಪ ಪೂಜಾರಿ ನುಳಿಯಾಲು, ಶ್ರೀನೀವಾಸ ಭಟ್ ವಾಲ್ತಾಜೆ, ತಿಮ್ಮಣ್ಣ ರೈ ಆನಾಜೆ, ಗೋಪಾಲಕೃಷ್ಣ ಭಟ್ ಕುಕ್ಕುಪುಣಿ ದೇವಸ್ಥಾನದ ಪ್ರಧಾನ ಅರ್ಚಕ ರಾಜೇಂದ್ರ ಭಟ್ ಹಾಗೂ ಬಳಗ ಊರ ಪರವೂರ ಸಾವಿರಾರು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.