ಹಳೆನೇರೆಂಕಿ ಪರಿಸರದಲ್ಲಿ ಚಿರತೆ ಹಾವಳಿ ಶಂಕೆ ಅರಣ್ಯ ಇಲಾಖೆಯಿಂದ ಬೋನು ಇರಿಸಿ ಪತ್ತೆ ಕಾರ್ಯ

Puttur_Advt_NewsUnder_1
Puttur_Advt_NewsUnder_1

ರಾಮಕುಂಜ: ಹಳೆನೇರೆಂಕಿ ಗ್ರಾಮದ ಕೆಲವೆಡೆ ಚಿರತೆ ಹಾವಳಿ ಕಂಡು ಬಂದಿದ್ದು ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಅರಣ್ಯ ಇಲಾಖಾಧಿಕಾರಿಗಳು ಬೋನು ಇರಿಸಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ಹಳೆನೇರೆಂಕಿ ಪರಿಸರದಲ್ಲಿ ಸಾಕು ನಾಯಿಗಳು ಕಾಣೆಯಾಗುತ್ತಿದ್ದು, ಇದು ಚಿರತೆಯz ಕೃತ್ಯ ಎಂದು ಗ್ರಾಮಸ್ಥರು ಶಂಕಿಸಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕೆಲ ಮನೆಗಳ ಗೂಡುಗಳಿಂದ ನಾಯಿಗಳನ್ನು ಚಿರತೆ ಎಳೆದೊಯ್ದಿರುವುದಾಗಿಯೂ ವರದಿಯಾಗಿದೆ. ಹತ್ತು ದಿನಗಳ ಹಿಂದೆ ಬಜತ್ತೂರು ಗ್ರಾಮ ಪಂಚಾಯಿತಿ ಸದಸ್ಯ ಮೇಲೂರು ನಿವಾಸಿ ಆನಂದ ಎಂಬವರ ಮನೆಯ ನಾಯಿಯೊಂದು ಕಾಣೆಯಾಗಿತ್ತು. ಬಳಿಕ ಹಳೆನೇರೆಂಕಿಯ ಗಣೇಶಕುಂಜ ಎಂಬಲ್ಲಿಂದ ನಾಯಿಯೊಂದು ಕಾಣೆಯಾಗಿತ್ತು. ಇದಾದ ನಾಲ್ಕು ದಿನಗಳ ಬಳಿಕ ಇದೇ ಪರಿಸರದ ವ್ಯಕ್ತಿಯೊಬ್ಬರ ಮನೆಯಂಗಳದ ಗೂಡಿನಿಂದ ಎರಡು ನಾಯಿಗಳು ಕಾಣೆಯಾಗಿವೆ. ಅದರಲ್ಲಿ ಒಂದು ನಾಯಿಯನ್ನು ಎಳೆದೊಯ್ಯಲು ಸಾಧ್ಯವಾಗದೆ ಅದರ ಅರ್ಧ ಭಾಗ ಗೂಡಿನಲ್ಲೇ ಉಳಿದಿರುವುದು ಕಂಡು ಬಂದಿದೆ. ಮಾ.೧೨ರಂದು ರಾತ್ರಿ ಹಳೆನೇರೆಂಕಿ ಗೇರುಬೀಜದ ತೋಪಿನಲ್ಲಿ ಚಿರತೆಯೊಂದು ಗ್ರಾಮಸ್ಥರಿಗೆ ಕಾಣಿಸಿಕೊಂಡಿದ್ದು, ನಾಯಿಗಳನ್ನು ತಿಂದು ಹಾಕುತ್ತಿರುವುದು ಇದೇ ಚಿರತೆಯಾಗಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಈ ಪ್ರದೇಶದಲ್ಲಿ ಬೋನು ಇರಿಸಿ ಚಿರತೆ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ. ಹಳೆನೇರೆಂಕಿಯಲ್ಲಿರುವ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಮರಗಳ ಮಧ್ಯೆ ಸಾಕಷ್ಟು ಪೊದೆ, ಗಿಡಗಂಟಿಗಳು ಬೆಳೆದಿದ್ದು ಅದರಲ್ಲಿ ಚಿರತೆ ವಾಸ್ತವ್ಯ ಹೂಡಿದೆ ಎಂದು ಶಂಕಿಸಲಾಗಿದೆ. ಹಳೆನೇರೆಂಕಿ ಸಮೀಪ ಶಿವಾರು ರಕ್ಷಿತಾರಣ್ಯ ಪ್ರದೇಶದಿಂದಲೂ ಚಿರತೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.