Breaking News

ಕೇಂದ್ರ ಜುಮ್ಮಾ ಮಸೀದಿಯ ಉರೂಸ್ ಸಮಾರಂಭ ಮುಂದೂಡಿಕೆ

Puttur_Advt_NewsUnder_1
Puttur_Advt_NewsUnder_1

ಕಡಬ : ಕಡಬ ಕೇಂದ್ರ ಜುಮ್ಮಾ ಮಸೀದಿಯಲ್ಲಿ ೩ ವರ್ಷಕ್ಕೊಮ್ಮೆ ನಡೆಸುತ್ತಾ ಬರುತ್ತಿದ್ದ ಉರೂಸ್ ಸಮಾರಂಭವು ಮಾ ೧೬ರಿಂದ ೧೯ರವೆರೆಗೆ ನಡೆಸಲು ತೀರ್ಮಾನಿಸಲಾಗಿದ್ದು ಕೊರೊನಾ ಮಹಾಮಾರಿಯ ಸಂಚಲನದಿಂದ ಸರಕಾರದ ಆದೇಶ ಮತ್ತು ಜಿಲ್ಲಾಡಳಿತದ ನಿರ್ದೇಶನದಂತೆ ಒಂದು ವಾರ ಯಾವುದೇ ಸಾರ್ವಜನಿಕ ಕಾರ್ಯಕ್ರಮವನ್ನು ನಿಷೇದಿಸಲಾಗಿದ್ದು ಜಿಲ್ಲಾಡಳಿತದ ಮುಂದಿನ ಅನುಮತಿಯವರೆಗೆ ಮುಂದೂಡಲಾಗುವುದು ಎಂದು ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕಡಬ ತಾಲೂಕು ಅಧ್ಯಕ್ಷರು ಕೇಂದ್ರ ಜುಮ್ಮಾ ಮಸೀದಿಯ ಗೌರವ ಸಲಹೆಗಾರರಾಗಿರುವ ಹಾಜಿ ಸಯ್ಯದ್ ಮೀರಾ ಸಾಹೇಬ್ ತಿಳಿಸಿದ್ದಾರೆ.

ಅವರು ಮಾ. ೧೪ರಂದು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಿಲ್ಲರ್ ಕೊರೊನಾ ವೈರಸ್‌ನ ಮಹಾಮಾರಿಯಿಂದ ವಿಶ್ವದಾದ್ಯಂತ ಜನರು ಭಯಬೀತರಾಗಿದ್ದು ಮನೆಯಿಂದ ಹೊರಗೆ ತೆರಳಲು ಭಯಪಡುತ್ತಿದ್ದು ರಾಜ್ಯ ಸರಕಾರ ಮಾ. ೧೪ರಿಂದ ಒಂದುವಾರದ ವರೆಗೆ ಯಾವುದೇ ಸಾರ್ವಜನಿಕ ಕಾರ್ಯಕ್ರಮ ನಡೆಸದಂತೆ ಆದೇಶ ಹೊರಡಿಸಲಾಗಿದ್ದು ಈ ಬಗ್ಗೆ ಜಿಲ್ಲಾಡಳಿತದಿಂದ ಸುತ್ತೋಲೆ ಕಳುಹಿಸಲಾಗಿದ್ದು ನಮ್ಮ ಕಡಬ ಬರ್ಕತುಲ್ ಇಸ್ಲಾಂ ಮೊಹಿಯುದ್ದೀನ್ ಫಂಡ್ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಅಂತ್ಯ ವಿಶ್ರಮಿಸುತ್ತಿರುವ ಶೈಖುನಾ ಅಬ್ದುಲ್ ಖಾದಿರ್ ಷಾ (ಖ.ಸಿ) ಮತ್ತು ಶುಹದಾಗಳ ಹೆಸರಿನಲ್ಲಿ ೩ ವರುಷಕ್ಕೊಮ್ಮೆ ನಡೆಸುತ್ತಾ ಬರುತ್ತಿರುವ ಉರೂಸ್ ಕಾರ್ಯಕ್ರಮವು ಮಾ.೧೬,೧೭,೧೮,೧೯ರಂದು ನಡೆಸಲು ತೀರ್ಮಾನಿಸಲಾಗಿದ್ದು ಈ ಬಗ್ಗೆ ಎಲ್ಲಾ ಬಗೆಯ ವ್ಯವಸ್ಥೆಗಳನ್ನು ಮಾಡಲಾಗಿದ್ದು ಕಾರ್ಯಕ್ರಮ ನಿಷೇದಿಸಲ್ಪಟ್ಟಿರುವುದರಿಂದ ಉರೂಸ್ ಕಾರ್ಯಕ್ರಮ ಮುಂದೂಡುವುದು ಅನಿರ್ವಾಯವಾಗಿದೆ. ಈ ಬಗ್ಗೆ ಜಮಾಅತ್ ಕಮಿಟಿಯ ತೀರ್ಮಾನದಂತೆ ಉರೂಸ್ ಕಾರ್ಯಕ್ರಮವನ್ನು ಮುಂದೂಡುವುದಾಗಿ ತೀರ್ಮಾನಿಸಲಾಗಿದ್ದು ಜಿಲ್ಲಾಡಳಿತ ಅನುಮತಿ ನೀಡಿದ ಬಳಿಕ ಮುಂದಿನ ದಿನಾಂಕ ತೀರ್ಮಾನಿಸಿ ವಿಜೃಂಭಣೆಯಿಂದ ಉರೂಸ್ ಸಮಾರಂಭವನ್ನು ನಡೆಸಲಾಗುವುದು ಎಂದು ಸಯ್ಯದ್ ಮೀರಾ ಸಾಹೇಬ್ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಜುಮ್ಮಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಮಹಮ್ಮದ್ ಶೆರೀಫ್ ಅಡ್ಡಗದ್ದೆ, ಪ್ರ.ಕಾರ್ಯದರ್ಶಿ ಮಹಮ್ಮದ್ ಫೈಝಲ್ ಎಸ್‌ಇಎಸ್, ಉಪಾಧ್ಯಕ್ಷ ಆದಂ ಕುಂಡೋಳಿ, ಕಡಬ ರೀಜನಲ್ ಎಸ್‌ಎಮ್‌ಎ ಅಧ್ಯಕ್ಷ ಖಾದರ್ ಸಾಹೇಬ್ ಕಲ್ಲುಗುಡ್ಡೆ, ಜಮಾಅತ್ ಕಾರ್ಯದರ್ಶಿ ಇಬ್ರಾಹಿಂ ಕೋಡಿಬೈಲ್, ಸದಸ್ಯ ಶುಕೂರ್ ಅಡ್ಡಗದ್ದೆ, ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.