ಕೊರೊನಾ ಮಾರಿ ನಿಗ್ರಹಕ್ಕಾಗಿ ದೇಯಿ ಬೈದ್ಯೆತಿಗೆ ಮೊರೆ: ಮಾ.16ಕ್ಕೆ ಗೆಜ್ಜೆಗಿರಿಯಲ್ಲಿ ಶತೌಷಧಿ ದ್ರವ್ಯ ಕಲಶಾಭಿಷೇಕ

ಪುತ್ತೂರು: ಜಗತ್ತನ್ನೇ ಕಾಡುತ್ತಿರುವ ಮಾರಕ ಕೊರೋನಾ ವೈರಸ್ ಸೋಂಕನ್ನು ಹೊಡೆದೋಡಿಸಲು ಮನುಷ್ಯ ಪ್ರಯತ್ನಗಳು ಸಾಗುತ್ತಿರುವ ನಡುವೆಯೇ ಅಂತಿಮವಾಗಿ ದೇವರ ಮೊರೆ ಹೋಗುವ ಹಿನ್ನೆಲೆಯಲ್ಲಿ ಮಾ.16ರಂದು ಗೆಜ್ಜೆಗಿರಿಯಲ್ಲಿ ತಾಯಿ ದೇಯಿ ಬೈದ್ಯೆತಿಗೆ ಶತೌಷಧಿ ದ್ರವ್ಯ ಕಲಶಾಭಿಷೇಕ ನಡೆಯಿಲಿದೆ.

ಲಕ್ಷಾಂತರ ಜನರ ಕಾಯಿಲೆ, ಕೋಟಲೆಗಳನ್ನು ದೂರ ಮಾಡಿರುವ ಮಹಾ ಮಾತೆ ದೇಯಿ ಬೈದ್ಯೆತಿ ಈ ಕೊರೊನಾ ಮಾರಿಯನ್ನು ದೂರ ಮಾಡಲೆಂದು ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ಅಪೂರ್ವ ಶತೌಷಧಿ ದ್ರವ್ಯ ಕಲಶಾಭಿಷೇಕ ಮಹಾಮಾತೆಗೆ ಕ್ಷೇತ್ರದ ತಂತ್ರಿ ಲೋಕೇಶ್ ಶಾಂತಿ ಅವರ ನೇತೃತ್ವದಲ್ಲಿ ನಡೆಯಲಿದೆ. ಮುಂಜಾನೆಯಿಂದಲೇ ಈ ಅಪೂರ್ವ ಕಲಶಾಭಿಷೇಕ ಆರಂಭಗೊಳ್ಳಲಿದೆ. ನೂರು ಬಗೆಯ ಔಷಧೀಯ ಗಿಡಮೂಲಿಕೆಗಳ ದ್ರವ್ಯಗಳನ್ನು ಔಷಧಿ ಸೂಕ್ತದಿಂದ ಅಭಿಮಂತ್ರಿಸಿ, ಪವಮಾನ ಹೋಮ, ಧನ್ವಂತರಿ ಹೋಮ ಸಹಿತವಾಗಿ ಕಲಶಾಭಿಷೇಕ ನಡೆಯಲಿದೆ. ಪ್ರಸನ್ನ ಕಾಲದಲ್ಲಿ ಮಾತೆಯ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಲೋಕ ಕಲ್ಯಾಣಾರ್ಥವಾಗಿ ನಡೆಯುವ ಈ ಅಪೂರ್ವ ಶತೌಷಧಿ ದ್ರವ್ಯ ಕಲಶಾಭಿಷೇಕದ ಫಲವಾಗಿ ಮಾತೆಯ ಪೂರ್ಣ ಅನುಗ್ರಹ ಲೋಕಕ್ಜೆ ಸಿಗಲಿ, ಜಗತ್ತು ಕೊರೋನಾ ಮುಕ್ತವಾಗಲಿ ಎಂದು ಪ್ರಾರ್ಥಿಸೋಣ ಎಂದು ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ ಮತ್ತು ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲ್ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪೀತಾಂಬರ ಹೇರಾಜೆ ಅವರು ವಿನಂತಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.