ಟೈಲರ್ ಶಂಭು ಬಲ್ಯಾಯ, ರಾಜ್ಯ ಪಾನೀಯ ನಿಗಮದ ಕಾರ್ಮಿಕರಾದ ವಿನೋದ್ ಪೂಜಾರಿ, ರಾಧಾಕೃಷ್ಣ ಶೆಟ್ಟಿಯವರಿಗೆ ಶ್ರಮ ಸಮ್ಮಾನ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಟೈಲರ್ ವೃತ್ತಿಯಲ್ಲಿ ಸಲ್ಲಿಸಿರುವ ವಿಶೇಷ ಸೇವೆಗಾಗಿ ಶಾಂತಿಗೋಡು ಗ್ರಾಮದ ಕಲ್ಕಾರು ಮುಂಡೋಡಿ ನಿವಾಸಿಯಾದ ಶಂಭು ಬಲ್ಯಾಯ ಹಾಗೂ ಮರೀಲ್‌ನಲ್ಲಿರುವ ಕರ್ನಾಟಕ ರಾಜ್ಯ ಪಾನೀಯ ನಿಗಮದ ಕಾರ್ಮಿಕರಾದ ವಿನೋದ್ ಪೂಜಾರಿ ಮತ್ತು ರಾಧಾಕೃಷ್ಣ ಶೆಟ್ಟಿಯವರಿಗೆ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಶ್ರಮ ಸಮ್ಮಾನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನಲ್ಲಿ ನಡೆದ ಕಾರ್ಮಿಕ ಸಮ್ಮಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಾಂತಿಗೋಡು ಗ್ರಾಮದ ಆನಡ್ಕ ಮಲೆಪಡ್ಪು ನಿವಾಸಿಯಾದ ವಿನೋದ್‌ರವರು ಸುಮಾರು 14 ವರ್ಷಗಳಿಂದ ಪಾನೀಯ ನಿಗಮದ ಪುತ್ತೂರು ಮರೀಲ್‌ನಲ್ಲಿರುವ ಕಚೇರಿಯಲ್ಲಿ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇವರ ಸೇವೆಯನ್ನು ಗುರುತಿಸಿ ವಿಶೇಷ ಪ್ರಶಸ್ತಿ ನೀಡಲಾಗಿದೆ. ಅರಿಯಡ್ಕ ಗ್ರಾಮದ ಗೋವಿಂದ ಮೂಲೆ ನಿವಾಸಿ ರಾಧಾಕೃಷ್ಣ ಶೆಟ್ಟಿರವರು ಸುಮಾರು 14 ವರ್ಷಗಳಿಂದ ಪಾನೀಯ ನಿಗಮದ ಪುತ್ತೂರು ಮರೀಲ್‌ನಲ್ಲಿರುವ ಕಚೇರಿಯಲ್ಲಿ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ಮತ್ತು ಚಿನ್ನದ ಪದಕ ನೀಡಲಾಗಿದೆ. ಶಾಂತಿಗೋಡು ಗ್ರಾಮದ ಕಲ್ಕಾರು ಮುಂಡೋಡಿ ನಿವಾಸಿಯಾದ ಶಂಭು ಬಲ್ಯಾಯ ರವರು ೩೯ ವರ್ಷದಿಂದ ಟೈಲರ್ ವೃತ್ತಿ ಮಾಡುತ್ತಿದ್ದು ಇದರೊಂದಿಗೆ ಯಕ್ಷಗಾನ, ಭರತನಾಟ್ಯ, ದೇವಸ್ಥಾನಗಳಿಗೆ ಬೇಕಾದ ಗರುಡ/ಬೇತಾಳ ಬಟ್ಟೆ ಹೊಲಿಗೆ ಹಾಗೂ ಮಕರ ತೋರಣ ನಿರ್ಮಾಣ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೆ ಆಟೋಟಗಳ ವೀಕ್ಷಕ ವಿವರಣೆ, ಕಾರ್ಯಕ್ರಮ ನಿರೂಪಣೆಯಲ್ಲೂ ಪರಿಣತರಾಗಿದ್ದರು. ನೇತಾಜಿ ಯುವಕ ಮಂಡಲದ ಕೋಶಾಧಿಕಾರಿ, ನವಶಕ್ತಿ ಕ್ಲಬ್‌ನ ಗೌರವ ಸಲಹೆಗಾರರಾಗಿ ಕರ್ನಾಟಕ ಸ್ಟೇಟ್ ಟೈಲರ‍್ಸ್ ಅಸೋಸಿಯೇಶನ್‌ನ ವಲಯ ಕಾರ್ಯದರ್ಶಿ, ಪುತ್ತೂರು ಕ್ಷೇತ್ರದ ಪ್ರಧಾನ ಕಾರ್ಯದರ್ಶಿ, ನಿಕಟ ಪೂರ್ವ ಅಧ್ಯಕ್ಷರಾಗಿ ಪ್ರಸ್ತುತ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಲವು ಬಾರಿ ನೇತ್ರದಾನ ಮಾಡಿ ಮರಣೋತ್ತರ ನೇತ್ರದಾನ ನೋಂದಾವಣೆ ಕೂಡ ಮಾಡಿಕೊಂಡಿರುವ ಇವರ ಸೇವೆಯನ್ನು ಗುರುತಿಸಿ ವಿಶೇಷ ಪ್ರಶಸ್ತಿ ನೀಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.