ಮಹಮ್ಮದರ ಊರಿಗೆ ಅಹ್ಮದರ ಪಯಣ..! ದ್ವಿಚಕ್ರ ವಾಹನದಲ್ಲಿ ಮೆಕ್ಕಾಗೆ ಹೊರಟ ತಮಿಳುನಾಡಿನ ವೃದ್ಧ

Puttur_Advt_NewsUnder_1
Puttur_Advt_NewsUnder_1

✍  ಕುಂಸಿ 

ಕ್ಕಾ ಯಾತ್ರೆ ಕೈಗೊಳ್ಳಲು ಹಾತೊರೆಯದ ಮುಸ್ಲಿಮರಿಲ್ಲ. ದಿನದ ಐದು ಹೊತ್ತು ನಮಾಜಿನ ಬಳಿಕ ಪ್ರತೀಯೊಬ್ಬರೂ ದೇವರಲ್ಲಿ ಬೇಡಿಕೊಳ್ಳುವುದು ದೇವರೇ ಜೀವನದಲ್ಲಿ ಒಮ್ಮೆಯಾದರೂ ಪವಿತ್ರ ಮಕ್ಕಾ ಮತ್ತು ಮದೀನಾ ಕಾಣುವ ಸೌಭಾಗ್ಯ ಕರುಣಿಸು ಎಂಬುದಾಗಿದೆ. ಇದಕ್ಕೆ ಕಾರಣ ಪ್ರವಾದಿ ಮೇಲಿನ ಪ್ರೀತಿ, ಸ್ನೇಹ ಜೊತೆಗೆ ಭಕ್ತಿ. ಮಕ್ಕಾಗೆ ತೆರಳುವ ಭಾಗ್ಯ ಲಭಿಸಿದವನೇ ಭಾಗ್ಯವಂತ ಎಂಬ ನಂಬಿಕೆ ಮುಸ್ಲಿಮರಲ್ಲಿ ಆಳವಾಗಿ ಬೇರೂರಿದೆ ಯಾಕೆಂದರೆ ಹಣ ಇದ್ದ ಮಾತ್ರಕ್ಕೆ ಆತನಿಗೆ ಆ ಭಾಗ್ಯ ಕೂಡಿಬರುವುದಿಲ್ಲ. ಆದರೆ ತಮಿಳುನಾಡಿನ ವೃದ್ದರೋರ್ವರು ತನ್ನ ದ್ವಿಚಕ್ರ ವಾಹನದಲ್ಲಿ ಮೆಕ್ಕಾ ಯಾತ್ರೆ ಹೊರಟಿದ್ದಾರೆ. ಯಾತ್ರೆಯ ದಾರಿ ಮಧ್ಯೆ ಸಂಪ್ಯದಲ್ಲಿ ಅವರು ತನ್ನ ಪ್ರವಾದಿ ಪ್ರೇಮವನ್ನು ಬಿಚ್ಚಿಟ್ಟರು..

ಅಹ್ಮದರ ಪಯಣ
ತಮಿಳುನಾಡಿ ವನಿಯಂಬಾಡಿ ಎಂಬ ಊರಿನವರಾದ ಅಹ್ಮದ್ ತನ್ನ ದ್ವಿಚಕ್ರ ವಾಹನದಲ್ಲಿ ತಮಿಳುನಾಡಿನಿಂದ ಮೆಕ್ಕಾ ಎಂಬ ನಾಮಫಲಕವನ್ನು ತನ್ನ ವಾಹನಕ್ಕೆ ತೂಗಿಸಿ ಕಳೆದ ಒಂದು ತಿಂಗಳ ಹಿಂದೆ ಯಾತ್ರೆ ಹೊರಟಿದ್ದಾರೆ. ಏಕಾಂಗಿಯಾಗಿ ಇವರು ಈ ಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಹ್ಮದ್‌ರವರಿಗೆ ಮಕ್ಕಾ ಯಾತ್ರೆ ಕೈಗೊಳ್ಳಲು ಆರ್ಥಿಕವಾಗಿ ಶಕ್ತಿವಂತರಲ್ಲ. ಆದರೂ ಮಕ್ಕಾಗೆ ತೆರಳಬೇಕು, ಪ್ರವಾದಿಯವರ ಪುಣ್ಯ ಮಣ್ಣಿಗೆ ಕಾಲಿಡಬೇಕು ಎಂಬ ಅತ್ಯಾಗ್ರಹ ಅವರ ಮನಸ್ಸಿನಲ್ಲಿದೆ. ಹಣ ಸಂಗ್ರಹಿಸಿ ಅಥವಾ ತಾನು ಶ್ರೀಮಂತನಾಗಿ ಈ ಯಾತ್ರೆಯನ್ನು ಕೈಗೊಳ್ಳುವ ಕನಸಿಗೆ ಇತಿಶ್ರೀ ಹಾಡಿದ ಅವರು ತನ್ನ ದ್ವಿಚಕ್ರವಾಹನದಲ್ಲೇ ಪಯಣವನ್ನು ಮುಂದುವರೆಸಿದ್ದಾರೆ. 70 ದಾಟಿರುವ ಅಹ್ಮದ್‌ರವರು ಯಾತ್ರೆ ಕೈಗೊಂಡಿರುವುದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.

ಮಸೀದಿಯಲ್ಲೇ ವಿಶ್ರಾಂತಿ
ಪಯಣದ ವೇಳೆ ರಾತ್ರಿಯಾಗುತ್ತಲೇ ಆಯಾ ಊರಿನ ಮಸೀದಿಯಲ್ಲಿ ವಿಶ್ರಾಂತಿ ಪಡೆಯುತ್ತಾರೆ. ತನ್ನ ವಾಹನದಲ್ಲಿರುವ ನಾಮಫಲಕವನ್ನು ಕಂಡ ಸ್ಥಳೀಯರು ಇವರ ಕಷ್ಟ ಸುಖವನ್ನು ವಿಚಾರಿಸಿ ಅವರಿಗೆ ಧನ ಸಹಾಯವನ್ನು ಮಾಡುತ್ತಾರೆ. ಮಕ್ಕಾಗೆ ತೆರಳಬೇಕು ಎಂಬ ನಿಮ್ಮ ಆಸೆ ಕೈಗೂಡಲಿ ಸುಖ ಪ್ರಯಾಣ ನಿಮ್ಮದಾಗಲಿ ಎಂದು ಧನ ಸಹಾಯ ಮಾಡುತ್ತಾರೆ. ಆ ಹಣದಿಂದಲೇ ಅಹ್ಮದ್ ತನ್ನ ವಾಹನಕ್ಕೆ ಇಂಧನವನ್ನು ಹಾಕುತ್ತರೆ. ಯಾವುದೇ ಆದಾಯವಿಲ್ಲದ ಅಹ್ಮದ್‌ರವರಿಗೆ ಪ್ರವಾದಿ ಸ್ನೇಹಿಗಳು ನೀಡಿದ ಆರ್ಥಿಕ ಸಹಾಯವೇ ಅವರನ್ನು ಮಕ್ಕಾವರೆಗೂ ತಲುಪಿಸಲಿದೆ.

ಅಹ್ಮದ್‌ರ ಯಾತ್ರೆಗೆ ಕೊರೋನಾ ಅಡ್ಡಿ
ಅಹ್ಮದ್‌ರವರ ಯಾತ್ರೆಗೆ ಕೊರೋನಾ ಅಡ್ಡಿಯಾಗಿದೆ. ಸೌದಿ ಸರಕಾರ ಮೆಕ್ಕಾ ಯಾತ್ರಿಕರನ್ನು ತನ್ನ ದೇಶಕ್ಕೆ ಕರೆಸಿಕೊಳ್ಳುತ್ತಿಲ್ಲ. ಉಮ್ರಾ ಯಾತ್ರಿಕರು ತೆರಳದಂತೆ ನಿರ್ಭಂಧವನ್ನು ವಿಸಿದ್ದಾರೆ. ಇನ್ನು ದ್ವಿಚಕ್ರ ವಾಹನದಲ್ಲಿ ಹೊರಟ ಅಹ್ಮದ್‌ರ ಸಂಚಾರಕ್ಕೂ ಕೊರೋನಾ ಅಡ್ಡಿಯಾಗಲಿದೆ. ಈಗಾಗಲೇ ತಮಿಳುನಾಡು ದಾಟಿ ಕರ್ನಾಟಕದ ಗಡಿಯನ್ನು ದಾಟಿರುವ ಅಹ್ಮದ್ ಮಹಾರಾಷ್ಟಕ್ಕೆ ತಲುಪಿ ಅಲ್ಲಿಂದ ತನ್ನ ದ್ವಿಚಕ್ರ ವಾಹನದಲ್ಲೇ ಸುದೀರ್ಘ ರಸ್ತೆ ಮಾರ್ಗವಾಗಿ ಪಯಣಿಸಲಿದ್ದು ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದರೂ ಕೊರೋನಾ ಪರಿಣಾಮದಿಂದ ಅರ್ಧದಾರಿಯಲ್ಲೇ ಬಾಕಿಯಾಗುವ ಸಾಧ್ಯತೆ ಇದ್ದು. ಕೊರೋನಾ ಇಲ್ಲವಾದ ಬಳಿಕ ಯಾತ್ರೆ ಮುಂದುವರೆಸುವ ಸಾಧ್ಯತೆ ಇದೆ.

ಯಾವುದೇ ಕಾರಣಕ್ಕೂ ಅಹ್ಮದ್ ರವರ ಯಾತ್ರೆಗೆ ಮೊಠಕುಗೊಳ್ಳಬಾರದು ಎಂಬುದು ನಮ್ಮೆಲ್ಲರ ಪ್ರಾರ್ಥನೆಯಾಗಿದೆ. ಪ್ರವಾದಿ ಮಹಮ್ಮದರ ಊರಿಗೆ ಹೋಗಬೇಕು, ಅಲ್ಲಿನ ಪುಣ್ಯ ಮಣ್ಣನ್ನು ಸ್ಪರ್ಶಿಸಬೇಕು ಎಂಬ ಏಕೈಕ ಉದ್ದೇಶದಿಂಧ ಅವರು ಯಾತ್ರೆ ಕೈಗೊಂಡಿದ್ದಾರೆ. ಬಡ ಯಾತ್ರಿಕ ಅಹ್ಮದ್‌ರ ಉದ್ದೇಶವನ್ನು ದೇವರು ಈಡೇರಿಸಲಿ ಎಂಬುದೇ ನಮ್ಮ ಪ್ರಾರ್ಥನೆಯಾಗಿದೆಎಸ್ ಪಿ ಬಶೀರ್ ಶೇಕಮಲೆ, ಜಮಾತ್ ಮುಖಂಡರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.