Breaking News

ಮಣಿಕರ್ಣಿಕ ಮಾತುಗಾರರ ವೇದಿಕೆ ಪ್ರತಿಭೆಗಳ ಅನಾವರಣಕ್ಕೆ ಕಾಲೇಜು ವೇದಿಕೆ: ಲೆ.ಅತುಲ್ ಶೆಣೈ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಶಿಕ್ಷಣ ಪಡೆಯಲು ಬಂದಾಗ ಇದ್ದ ಮಾನಸಿಕ ಸ್ಥಿತಿಯು ಅನುಭವಗಳನ್ನು ಪಡೆದು ಮಾಗುತ್ತದೆ. ಅನುಭವಗಳಿಂದ ನಮ್ಮ ಕೌಶಲ್ಯವೂ ಹೆಚ್ಚುತ್ತದೆ. ಕಾಲೇಜಿನಲ್ಲಿ ಕಲಿತ ಪಾಠಗಳು ಜೀವನದುದ್ದಕ್ಕೂ ಸಹಕಾರಿಯಾಗಿರುತ್ತದೆ ಎಂದು ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಮತ್ತು ಎನ್‌ಸಿಸಿ ಘಟಕದ ಸಂಯೋಜಕ ಲೆ. ಭಾಮಿ ಅತುಲ್ ಶೆಣೈ ಹೇಳಿದರು.

ಅವರು ಇಲ್ಲಿನ ಕಾಲೇಜಿನಲ್ಲಿ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸುತ್ತಿರುವ ಮಣಿಕರ್ಣಿಕ ಮಾತುಗಾರರ ವೇದಿಕೆ ಕಾರ್ಯಕ್ರಮದಲ್ಲಿ ಗುರುವಾರ ಭಾಗವಹಿಸಿ’ ಒಂದು ತಿಂಗಳು ಸಾವಿರ ನೆನಪು’ ಎಂಬ ವಿಷಯದ ಕುರಿತಾಗಿ ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳಲ್ಲಿ ಹಲವು ಪ್ರತಿಭೆಗಳಿವೆ. ನಮ್ಮಲ್ಲಿರುವ ವಸ್ತುಗಳನ್ನು ಇನ್ನೊಬ್ಬರು ಕಸಿದುಕೊಳ್ಳುವುದು ಸುಲಭ. ಆದರೆ ಪ್ರತಿಭೆಯನ್ನಲ್ಲ. ಕಾಲೇಜು ಎಂಬ ವೇದಿಕೆ ನಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಅವಕಾಶವನ್ನು ನೀಡುತ್ತದೆ. ಪ್ರತಿಭೆಯೊಂದಿಗೆ ಆತ್ಮವಿಶ್ವಾಸವಿದ್ದರೆ ಎಲ್ಲಕ್ಷೇತ್ರದಲ್ಲೂ ಮುನ್ನಡೆಯಲು ಸಾಧ್ಯ. ಕಾಲೇಜಿನಿಂದ ಹೊರಗಿಳಿಯುವಾಗ ವಿದ್ಯಾರ್ಥಿಗಳು ಸಿಹಿ ನೆನಪುಗಳನ್ನು ಮಾತ್ರ ತೆಗೆದುಕೊಂಡು ಹೋಗಬೇಕು ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿಗಳಾದ ದೀಕ್ಷಿತಾ, ಕಾರ್ತಿಕ್, ಪ್ರಶಾಂತ್, ಜಗದೀಶ್, ಅರುಣ್, ಸೌಜನ್ಯ, ತನುಶ್ರೀ, ಶಶಿಧರ್, ಅನುಷಾ, ಶ್ರೀರಾಮ, ಸುಕನ್ಯಾ, ಸೋನು, ತೇಜಶ್ರೀ, ಜಯಶ್ರೀ ಅನುಭವಗಳನ್ನು ಹಂಚಿಕೊಂಡರು. ವಾರದ ಉತ್ತಮ ಮಾತುಗಾರರಾಗಿ ತೃತೀಯ ವರ್ಷದ ಪ್ರಶಾಂತ್ ರೈ ಆಯ್ಕೆಯಾದರು. ಉತ್ತಮ ಮಾತುಗಾರರ ತಂಡವಾಗಿ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಹೊರಹೊಮ್ಮಿದರು.

ವೇದಿಕೆಯಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ. ಆರ್. ನಿಡ್ಪಳ್ಳಿ ಹಾಗೂ ಕಾರ್ಯಕ್ರಮದ ಕಾರ್ಯದರ್ಶಿ ತೇಜಶ್ರೀ ವೆಂಕಟೇಶ್ ಉಪಸ್ಥಿತರಿದ್ದರು. ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿ ಜಯಶ್ರೀ ಸ್ವಾಗತಿಸಿ, ಸ್ವಾತಿ ಕಾಮತ್ ವಂದಿಸಿ, ಯಶಸ್ವಿ ಕಾರ್ಯಕ್ರಮವನ್ನು ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.