Breaking News

ಮಾ.25: ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 12ನೇ ಶಾಖೆ ಬೊಳುವಾರಿನಲ್ಲಿ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದರ್ಬೆಯಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ೧೨ನೇ ಶಾಖೆ ಮಾ.೨೫ರಂದು ಬೊಳುವಾರು ಮಹಾವೀರ ಮಾಲ್‌ನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಹೇಳಿದರು.

ಮಾ.೧೬ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೦೨ರಲ್ಲಿ ಪ್ರಾರಂಭಗೊಂಡಿರುವ ಸಹಕಾರಿ ಸಂಘದ ಕಳೆದ ೧೮ ವರ್ಷಗಳಲ್ಲಿ ೧೧ ಶಾಖೆಗಳನ್ನು ಹೊಂದಿದೆ. ಸುಳ್ಯ, ಸುಬ್ರಹ್ಮಣ್ಯ, ವಿಟ್ಲ, ಉಜಿರೆ, ಕಡಬ, ಸವಣೂರು, ಸಾಲೆತ್ತೂರು, ಕುಂಬ್ರ, ಬೆಳ್ಳಾರೆ ಮತ್ತು ಪಂಜಗಳಲ್ಲಿ ಶಾಖೆಗಳು ಕಾರ್ಯನಿರ್ವಹಿಸುತ್ತಿದೆ. ಸಂಘವು ೨೦೧೮-೧೯ನೇ ಸಾಲಿನಲ್ಲಿ ರೂ.೨೭೦ಕೋಟಿ ೯೫ಲಕ್ಷದ ವ್ಯವಹಾರ ನಡೆಸಿ ದಾಖಲೆಯ ರೂ.೧.೩೦ಕೋಟಿಗೂ ಅಧಿಕ ಲಾಭಗಳಿಸಿದೆ. ಸಂಘದಲ್ಲಿ ೬೧೬೦ಸದಸ್ಯರನ್ನು ಹೊಂದಿದ್ದು ರೂ.೨.೧೩ಕೋಟಿ ಪಾಲು ಬಂಡವಾಳ, ರೂ.೬೭ಕೋಟಿ ಠೇವಣಾತಿ ಹೊಂದಿದೆ.ರೂ.೫೬.೭೦ ಕೋಟಿ ವಿವಿಧ ರೀತಿಯ ಸಾಲಗಳನ್ನು ವಿತರಿಸಿರುತ್ತದೆ. ಮಂಗಳೂರಿನಲ್ಲಿ ನಡೆದ ೬೪ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಸಂಘವು ಅವಿಭಜಿತ ಜಿಲ್ಲೆಯಲ್ಲಿ ಅತ್ಯುತ್ತಮ ಸಹಕಾರ ಸಂಘ’ ಪ್ರಶಸ್ತಿ ಪಡೆದುಕೊಂಡಿದೆ

ನೂತನ ಶಾಖೆಯನನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಉದ್ಯಮಿ ಅರಿಯಡ್ಕ ಚಿಕ್ಕಪ್ಪ ನಾಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ನಾಯಕ್ ಭದ್ರತಾಕೋಶ ಉದ್ಘಾಟಿಸಲಿದ್ದಾರೆ. ಮಹಾವೀರ ಮೆಡಿಕಲ್ ಸೆಂಟರ್‌ನ ಆಡಳಿತ ನಿರ್ದೇಶಕ ಡಾ|ಅಶೋಕ್ ಪಡಿವಾಳ್ ಪ್ರಥಮ ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ. ಪುತ್ತೂರು ಉಪ ವಿಭಾಗದ ಸಹಕಾರ ಸಂಘಗಳ ಪ್ರಭಾರ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಕೆ., ನಗರ ಸಭಾ ಸದಸ್ಯ ಪಿ.ಜಿ ಜಗನ್ನಿವಾಸ ರಾವ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.

ಸಂಘದ ನಿರ್ದೇಶಕರಾದ ಎನ್.ರಾಮಯ್ಯ ರೈ ತಿಂಗಳಾಡಿ, ಅಶ್ವಿನ್ ಎಲ್.ಶೆಟ್ಟಿ ಸವಣೂರು, ಜೈರಾಜ್ ಭಂಡಾರಿ ನೋಣಾಲು, ಮಹಾಪ್ರಬಂಧಕ ವಸಂತ್ ಜಾಲಾಡಿ, ಶಾಖಾ ವ್ಯವಸ್ಥಾಪಕಿ ದಯಾಕಾಂತಿ ಹಾಗೂ ಸಿಬಂದಿ ಕವಿತಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.