ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ವಂಚಿಸಿ, ತಪ್ಪು ಮಾಹಿತಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಮಹಿಳಾ ವಿವಿಧೋದ್ಧೇಶ ಸಹಕಾರಿ ಸಂಘದಿಂದ ಸಾಲ ಪಡೆದು, ಅದನ್ನು ಮರುಪಾವತಿಸಿದ ಹಿನ್ನೆಲೆಯಲ್ಲಿ ಹಲವು ನೋಟೀಸು ನೀಡಿದರೂ ಮರುಪಾತಿಸದೇ ಸಂಘಕ್ಕೆ ವಂಚನೆ ಮಾಡಿರುವುದಲ್ಲದೆ ಪತ್ರಿಕಾ ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸಂಘದ ಅಧ್ಯಕ್ಷೆ ಗೌರಿ ಬನ್ನೂರು ಆರೋಪಿಸಿದ್ದಾರೆ.

ಮಾ.16ರಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದಿಂದ ಸಂತೋಷ್‌ಕುಮಾರ್ ಯಚ್, ಆರ್ ಎಂಬವರು ಸಂಘದ ದರ್ಬೆ ಶಾಖೆಯಿಂದ 2016ರಲ್ಲಿ ರೂ.1.50 ಲಕ್ಷ ವಾಹನ ಸಾಲ ಪಡೆದುಕೊಂಡಿದ್ದರು. ಈ ಸಾಲವನ್ನು ಅವರು ಮರುಪಾವತಿ ಮಾಡಿಲ್ಲ. ಈ ಬಗ್ಗೆ ಹಲವಾರು ನೋಟೀಸುಗಳನ್ನು ಸಂಘದಿಂದ ನೀಡಲಾಗಿದ್ದರೂ ಮರುಪಾವತಿ ಮಾಡಿಲ್ಲ. ಇದರ ಕುರಿತು ಪುತ್ತೂರು ಸಹಾಯಕ ನಿಬಂಧಕರ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಇದೇ ಸಂಸ್ಥೆಯಲ್ಲಿ ಅವರ ಚಿನ್ನಾಭರಣ ಈಡಿನ ಸಾಲವೂ ಇದ್ದು, ವಾಹನ ಸಾಲಕ್ಕೆ ಈ ಚಿನ್ನಾಭರಣವನ್ನು ವಿಲೀನಗೊಳಿಸಲು ಸಂಘದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಈ ಹಿನ್ನಲೆಯಲ್ಲಿ ಅವರ ಚಿನ್ನಾಭರಣಗಳನ್ನು ಸಾಲಗಾರ ಸಂತೋಷ್ ಅವರಿಗೆ ನೀಡಲಾಗಿಲ್ಲ. ಇದರ ಜತೆ ಸಾಲ ಪಡೆದು ತೆಗೆದುಕೊಂಡ ಬೈಕ್‌ನ್ನು ವಾಪಾಸು ಪಡೆದುಕೊಳ್ಳಲು ಪ್ರಯತ್ನ ಮಾಡಲಾಗಿತ್ತು. ಆದರೆ ಆ ಬೈಕ್‌ನ್ನು ಅವರು ಬೇರೆಯವರಿಗೆ ಪರಭಾರೆ ಮಾಡಿದ ಹಿನ್ನಲೆಯಲ್ಲಿ ಇದು ವಿಫಲಗೊಂಡಿತ್ತು.

ಇದೀಗ ಸಂತೋಷ್ ಅವರು ಪತ್ರಿಕಾ ಪ್ರಕಟಣೆ ಕೊಡುವ ಮೂಲಕ ಸಂಘದ ಹೆಸರಿಗೆ ಕಳಂಕ ತರುವ ಪ್ರಯತ್ನ ನಡೆಸಿದ್ದಾರೆ. ಮಹಿಳಾ ಸಹಕಾರ ಸಂಘವು ಎಲ್ಲವನ್ನೂ ಕಾನೂನು ಮತ್ತು ಮಾನವೀಯತೆ ದೃಷ್ಟಿಯಿಂದಲೇ ಕ್ರಮ ಕೈಗೊಂಡಿದ್ದರೂ, ಸಂತೋಷ್ ಅವರು ಸಾಲ ಪಡೆದು ಸಹಕಾರ ಸಂಘಕ್ಕೆ ವಂಚಿಸುವ ಕೆಲಸ ನಡೆಸಿದ್ದಾರೆ. ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿ ಮಾಡದೆ ಸಂಸ್ಥೆಗೆ ನಷ್ಟ ಉಂಟು ಮಾಡುವ ಜತೆಗೆ ಪತ್ರಿಕಾ ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ತಪ್ಪು ಮಾಹಿತಿ ರವಾನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಜಾಮೀನುದಾರೆಯ ಮುಚ್ಚಳಿಕೆ:
ಸಾಲ ವಾಪಸಾತಿ ಮಾಡದೆ ಸಂಘಕ್ಕೆ ನಷ್ಟ ಉಂಟು ಮಾಡಿದ ಬಗ್ಗೆ ಸಂತೋಷ್ ವಿರುದ್ಧ ಪುತ್ತೂರು ನಗರ ಪೊಲೀಸರಿಗೂ ದೂರು ನೀಡಲಾಗಿತ್ತು. ಈ ಸಂದರ್ಭದಲ್ಲಿ ಸಾಲಕ್ಕೆ ಜಾಮೀನುದಾರೆಯಾದ ಅವರ ಪತ್ನಿ ರಾಧಿಕಾ ಅವರು ಮುಚ್ಚಳಿಕೆ ಬರೆದಿದ್ದು, ಇದರಲ್ಲಿ ಸಂಸ್ಥೆ ತೆಗೆದುಕೊಳ್ಳುವ ಯಾವುದೇ ಕಾನೂನಿನ ಕ್ರಮಗಳಿಗೆ ಅಡ್ಡಿ ಮಾಡುವುದಿಲ್ಲ. ತನ್ನ ಗಂಡ ಸಂತೋಷ್ ಅವರನ್ನು ಮಹಿಳಾ ಸಹಕಾರ ಸಂಘದ ಮುಖ್ಯ ಕಚೇರಿಗೆ ಹಾಜರುಪಡಿಸುವುದಾಗಿ ಹೇಳಿಕೆ ನೀಡಿದ್ದರು.

ಮಹಿಳಾ ಸಹಕಾರಿ ಸಂಘಗಳ ರಕ್ಷಣೆಗೆ ಕೇಂದ್ರ ಸಚಿವೆಗೆ ಮನವಿ:
ಮಹಿಳಾ ಸಹಕಾರ ಸಂಘಗಳಲ್ಲಿ ಹಲವು ಸಮಸ್ಯೆಗಳು ಕಾಡುತ್ತಿದ್ದು, ಈ ಸಂಸ್ಥೆಗಳಿಗೆ ಭಾರತೀಯ ಸಂವಿಧಾನದ ಪ್ರಕಾರ ಮಹಿಳೆಯರಿಗೆ ಸಮಾನತೆ, ಸಮಾನ ಅವಕಾಶ ಮತ್ತು ಮಹಿಳೆಯರಿಗೆ ಸೂಕ್ತವಾದ ಮಾನವೀಯತೆ-ಭದ್ರತೆಯಿಂದ ಕೂಡಿದ ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ಮನವಿ ನೀಡಲು ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ತೀರ್ಮಾನಿಸಿದೆ ಸಂಘದ ಅಧ್ಯಕ್ಷೆ ಗೌರಿ ಬನ್ನೂರು ಹೇಳಿದರು.

ತ್ವರಿತ ವಸೂಲಾತಿಗೆ ಸಹಕಾರಿ ಸಚಿವರಿಗೆ ಮನವಿ
ರಾಜ್ಯದಲ್ಲಿ 1443 ಮಹಿಳಾ ಸಹಕಾರ ಸಂಘಗಳಿದ್ದು, ಇದರಲ್ಲಿ ಇಂತಹ ಹಲವು ಪ್ರಕರಣಗಳಿಗೆ ಒಳಗಾಗಿ ನೂರಾರು ಮಹಿಳಾ ಸಹಕಾರ ಸಂಘಗಳಿಂದು ನಿಷ್ಕ್ರೀಯವಾಗಿವೆ. ಮಹಿಳಾ ಸಹಕಾರ ಸಂಘಗಳನ್ನು ಮತ್ತೆ ಬಲಿಷ್ಠಗೊಳಿಸುವ ಹಿನ್ನಲೆಯಲ್ಲಿ ತ್ವರಿತ ವಸೂಲಾತಿ ನಡೆಸಲು ಸಹಾಯಕ ನಿಬಂಧಕರಿಗೆ ಸಮರ್ಪಕ ಸೂಚನೆಗಳನ್ನು ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಸಹಕಾರ ಸಚಿವರಿಗೆ ಮನವಿ ನೀಡಲಾಗುವುದು ಎಂದು ಸಂಘದ ಉಪಾಧ್ಯಕ್ಷೆ ಉಮಾ ಡಿ ಪ್ರಸನ್ನ ತಿಳಿಸಿದರು.

ಸಹಾಯಕ ನಿಬಂಧಕರಿಲ್ಲ..!
ಪುತ್ತೂರು ಉಪವಿಭಾಗದ ಸಹಾಯಕ ನಿಬಂಧಕರ ಕಚೇರಿಯಲ್ಲಿ ಕಳೆದ ಒಂದು ವರ್ಷಗಳಿಂದ ಖಾಯಂ ನಿಬಂಧಕರು ಇಲ್ಲ. ಸಂತೋಷ್ ಯಚ್.ಆರ್ ಅವರು ಸಾಲ ಪಡೆದು ವಾಪಾಸಾತಿ ಮಾಡದ ಕಾರಣ ಪುತ್ತೂರು ಸಹಾಯಕ ನಿಬಂಧಕರ ನ್ಯಾಯಾಲಯದಲ್ಲಿ ಸಂಸ್ಥೆ ವತಿಯಿಂದ ದಾವೆ ಹೂಡಲಾಗಿತ್ತು. ಆದರೆ ಸಹಾಯಕ ನಿಬಂಧಕರಿಲ್ಲದೆ ಈ ದಾವೆ ಇನ್ನೂ ದಾವೆ ಹಂತದಲ್ಲಿಯೇ ಬಾಕಿ ಉಳಿದಿದೆ. ಸಹಾಯಕ ನಿಬಂಧಕರ ಹುದ್ದೆ ಭರ್ತಿ ಮಾಡುವಂತೆಯೂ ಸಚಿವರಿಗೆ ಮನವಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಸಂಘದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ವಿದ್ಯಾ , ದರ್ಬೆ ಶಾಖಾ ವ್ಯವಸ್ಥಾಪಕಿ ಚೈತ್ರಾ, ಸಂಘದ ಆರ್ಥಿಕ ಸಲಹೆಗಾರ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.