ಕಡಬದಲ್ಲಿ ಸಮರ್ಥ ನಿಧಿ ಲಿಮಿಟೆಡ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಕಡಬ: ಇಲ್ಲಿನ ಶ್ರೀರಾಮ ಟವರ್ಸ್ ಎರಡನೆಯ ಮಹಡಿಯಲ್ಲಿ ಸಮರ್ಥ ನಿಧಿ ಲಿಮಿಟೆಡ್‌ನ 9ನೇ ಶಾಖೆ ಮಾ.15ರಂದು ಶುಭಾರಂಭಗೊಂಡಿತು, ಪುತ್ತೂರು ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ನೂತನ ಶಾಖೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ತಾಲೂಕು ಕೇಂದ್ರವಾಗಿ ಬೆಳೆಯುತ್ತಿರುವ ಕಡಬದಲ್ಲಿ ಹಣಕಾಸು ಸಂಸ್ಥೆಗಳು ಪ್ರಾರಂಭವಾಗುತ್ತಿರುವುದು ಉತ್ತಮ ಬೆಳವಣಿಗೆ, ಅಂತೆಯೇ ಸಮರ್ಥ ನಿಧಿ ಲಿ.ನ 9ನೇ ಶಾಖೆ ಪ್ರಾರಂಭವಾಗುತ್ತಿದ್ದು ಯಶಸ್ವಿಯಾಗಿ ಮುನ್ನಡೆಯಲಿ, ವ್ಯವಹಾರದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕ ಸೇವೆ ನೀಡಿದಾಗ ಸಂಸ್ಥೆಯು ಅಭಿವೃದ್ದಿಯಾಗುತ್ತದೆ. ಸಂಸ್ಥೆಯಿಂದ ಕಡಬದ ಜನತೆಯ ಆರ್ಥಿಕ ವ್ಯವಹಾರಗಳು ಸಾಕಾರಗೊಳ್ಳಲಿ ಎಂದು ಹೇಳಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ನಿವೃತ್ತ ಮುಖ್ಯ ಶಿಕ್ಷಕ ಗುಮ್ಮಣ್ಣ ಗೌಡ ರಾಮಕುಂಜ ಅವರು ಮಾತನಾಡಿ, ಪ್ರಾಮಾಣಿಕ ಮತ್ತು ದಕ್ಷ ಸೇವೆಯಿಂದ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ನವೀನ್ ಕುಮಾರ್ ಅವರು ಸಮರ್ಥ ನಿಧಿನ 9 ಶಾಖೆಗಳನ್ನು ತೆರೆಯುವಂತಾಯಿತು. ಇದಕ್ಕೆ ಅವರ ಸಂಸ್ಥೆಯ ಸಿಬ್ಬಂದಿಗಳು ಮತ್ತು ಗ್ರಾಹಕರ ಸಹಕಾರದಿಂದ ಸಂಸ್ಥೆಯು ಅಭಿವೃದ್ದಿಯ ಪಥದಲ್ಲಿ ಸಾಗುತ್ತಿದೆ, ಸಂಸ್ಥೆಯು ಇನ್ನಷ್ಟು ಅಭಿವೃದ್ದಿಯಾಗಲಿ ಎಂದು ಹೇಳಿ ಶುಭ ಹಾರೈಸಿದರು. ಎ.ಪಿ.ಎಂ.ಸಿ. ಸದಸ್ಯ ಸೀತಾರಾಮ ಗೌಡ ಪೊಸವಳಿಕೆ, ಕಟ್ಟಡದ ಮಾಲಕ ಶಿವರಾಮ ಶೆಟ್ಟಿ ಕೇಪು ಅವರು ಮಾತನಾಡಿ ಶುಭ ಹಾರೈಸಿದರು. ನಿರ್ದೇಶಕ ಬಾಲಕೃಷ್ಣ, ರಮಿತಾ ಸೋಮಯ್ಯ, ಡಿವಿಷನಲ್ ಮ್ಯಾನೆಜರ್ ಶಿವಕುಮಾರ್ ಅತಿಥಿಗಳಿಗೆ ಗೂ ಗುಚ್ಚ ನೀಡಿ ಗೌರವಿಸಿದರು. ಕಡಬ ಶಾಖಾ ವ್ಯವಸ್ಥಾಪಕಾ ಯೋಗೀಶ್.ಬಿ ಸ್ವಾಗತಿಸಿ, ಡಿವಿಷನಲ್ ಮ್ಯಾನೆಜರ್ ಹರೀಶ್ ಕುಮಾರ್ ಕಾರ‍್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿಗಳಾದ ರಶ್ಮಿತಾ ಸಿ.ಕೆ, ರಮೇಶ್, ರಂಜನ್ ಕುಮಾರ್ ಬಸವಪ್ಪ ಸಹಕರಿಸಿದರು. ಈ ಸಂದರ್ಭದಲ್ಲಿ ಕಟ್ಟಡದ ಮಾಲಕ ಶಿವರಾಮ ಶೆಟ್ಟಿ ಕೇಪು, ನಿವೃತ್ತ ಮುಖ್ಯ ಗುರು ಗುಮ್ಮಣ್ಣ ಗೌಡ ರಾಮಕುಂಜ ಅವರನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.

ಮೂರೇ ದಿನದಲ್ಲಿ ಸಾಲ ಸೌಲಭ್ಯ-ನವೀನ್ ಕುಮಾರ್

ಸಮರ್ಥ ನಿಧಿ ಲಿಮಿಟೆಡ್‌ನ ಮ್ಯಾನೆಜಿಂಗ್ ಡೈರೆಕ್ಟರ್ ನವೀನ್ ಕುಮಾರ್.ಕೆ ಯವರು ಮಾತನಾಡಿ, ದ.ಕ. ಹಾಸನ, ತುಮಕೂರು ಜಿಲ್ಲೆಯಲ್ಲಿ ನಮ್ಮ ಸಂಸ್ಥೆಯು ಕಾರ‍್ಯಾಚರಿಸುತ್ತಿದ್ದು ಕಡಬದಲ್ಲಿ ಇದೀಗ ೯ನೇ ಶಾಖೆ ಪ್ರಾರಂಭವಾಗುತ್ತಿದೆ, ನಮ್ಮಲ್ಲಿ ಪಿಗ್ಮಿ ಗ್ರಾಹಕರಿಗೆ ಸಾಲ ಸೌಲಭ್ಯವಿದ್ದು ಮೂರು ತಿಂಗಳಿನಲ್ಲಿ ಯಾವುದೇ ಶುಲ್ಕ ಕಡಿತವಿಲ್ಲದೆ ಪಿಗ್ಮಿ ಹಣವನ್ನು ಹಿಂಪಡೆಯುವ ಅವಕಾಶವಿದೆ, ಅಲ್ಲದೆ ಚಿನ್ನಾಭರಣ ಈಡಿನ ಸಾಲ, ವಾಹನ ಸಾಲ, ಭದ್ರತಾ ಸಾಲಗಳನ್ನು ನೀಡಲಾಗುತ್ತದೆ, ಯಾವುದೇ ಸಾಲ ಮಂಜೂರಾತಿ ಆದರೆ ಕೇವಲ ಮೂರು ದಿನಗಳಲ್ಲಿ ಗ್ರಾಹಕನ ಖಾತೆಗೆ ಹಣ ವರ್ಗಾವಣೆ ಮಾಡುತ್ತೇವೆ, ಸಮರ್ಥ ನಿಧಿ ಲಿಮಿಟೆಡ್‌ನಲ್ಲಿ ಈಗಾಗಲೇ ಒಟ್ಟು 135೦೦ ಗ್ರಾಹಕರಿದ್ದು 120 ಕೋಟಿ ವ್ಯವಹಾರ ಇದೆ. ಇನ್ನೂ ಮುಂದಿನ ದಿನಗಳಲ್ಲಿ ಹಲವು ಕಡೆ ಹೊಸ ಶಾಖೆಗಳನ್ನು ತೆರೆಯುವ ಯೋಜನೆ ಇದೆ ಕಡಬದ ಜನತೆ ನಮ್ಮ ಸಂಸ್ಥೆಗೆ ಸಹಕಾರ ನೀಡುವಂತೆ ಅವರು ವಿನಂತಿಸಿದರು.

ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೊಂಡ ಅತ್ಲೇಟಿಕ್ ಕ್ರೀಡಾಪಟು ಮೋಹನ್ ಕೆರೆಕೋಡಿಯವರಿಗೆ ಸನ್ಮಾನ-ಸಂಸ್ಥೆಯ ವತಿಯಿಂದ ವಿಮಾನ ಟಿಕೇಟ್

ಗ್ರಾಮೀಣ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೊಂಡ ಅತ್ಲೇಟಿಕ್ ಕ್ರೀಡಾಪಟು ಮೋಹನ್ ಕೆರೆಕೋಡಿ ಅವರನ್ನು ಕಾರ‍್ಯಕ್ರಮದಲ್ಲಿ 1೦ ಸಾವಿರ ನಗದು ಶಾಲು ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ಅಲ್ಲದೆ ಮುಂದೆ ಜಪಾನ್‌ನಲ್ಲಿ ನಡೆಯಲಿರುವ ಅತ್ಲೇಟಿಕ್ ಕ್ರೀಡಾಕೂಟಕ್ಕೆ ತೆರಳುವ ವಿಮಾನದ ಟಿಕೇಟ್‌ನ ಮೊತ್ತವನ್ನು ಸಮರ್ಥ ನಿಧಿ ಲಿಮಿಟೆಡ್ ವತಿಯಿಂದ ಭರಿಸಲಾಗುವುದು ಎಂದು ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ನವೀನ್ ಕುಮಾರ್ ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.