ಕೃಷ್ಣನಗರ: ಮನೆ, ಅಂಗಡಿಗಳಿಂದ ಸಂಗ್ರಹವಾದ ಕಸ ಡಂಪಿಂಗ್ ಯಾರ್ಡ್ ತಲುಪುವ ಮುನ್ನ ರಸ್ತೆಯಲ್ಲೇ ಡಂಪ್!! ಕಸ ವಿಲೇವಾರಿ ಸಾಗಾಟ ವಾಹನದ ಅವ್ಯವಸ್ಥೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮನೆ ಮತ್ತು ಅಂಗಡಿ ಸಂಸ್ಥೆ ಹೊಟೇಲುಗಳಿಂದ ಸಂಗ್ರಹವಾದ ಕಸ ವಾಹನದಲ್ಲೆನೋ ತುಂಬಿಸುತ್ತಾರೆ ಆದರೆ ಇದು ಡಂಪಿಂಗ್ ಯಾರ್ಡ್ ತಲುಪುವ ಮುನ್ನ ರಸ್ತೆಯಲ್ಲೇ ಡಂಪ್ ಆಗುತ್ತಿದೆ. ಇದು ಪುತ್ತೂರು ಕೇಪುಳು ಬನ್ನೂರು ರಸ್ತೆಯಲ್ಲಿ ಮಾ.16ರಂದು ನಡೆದ ಘಟನೆ.

ಕಸ ಮತ್ತು ತ್ಯಾಜ್ಯ ಸಂಗ್ರಹದ ವಾಹನ ಕೇಪುಳು ರಸ್ತೆಯಾಗಿ‌ ಕೃಷ್ಣನಗರ ಬನ್ನೂರು ಚರ್ಚ್ ಬಳಿಯಿಂದ ಬನ್ನೂರು ಡಂಪಿಂಗ್ ಯಾರ್ಡ್ ಗೆ ಹೋಗುವ ವೇಳೆ ಕೇಪುಳುನಿಂದ ಬನ್ನೂರು ಡಂಪಿಂಗ್ ಯಾರ್ಡ್ ಗೆ ಹೋಗುವ ರಸ್ತೆಯ ಅಲ್ಲಲ್ಲಿ ಕಸ, ತ್ಯಾಜ್ಯ ತುಂಬಿದ ಗೋಣಿಗಳು, ಪ್ಲಾಸ್ಟಿಕ್ ಕಟ್ ಗಳು ಚೆಲ್ಲಾಪಿಲ್ಲಿಯಾಗಿ ರಸ್ತೆ ಮಧ್ಯದಲ್ಲಿ ಬಿದ್ದಿದೆ. ಈ ನಡುವೆ ರಸ್ತೆಯಲ್ಲಿ ಇತರ ವಾಹನಗಳ ಒಡಾಟದ ವೇಳೆ ಕಸದ ರಾಶಿಗಳು ಗಾಳಿಗೆ ಪಕ್ಕದ ಅಂಗಡಿ ಹೊಟೇಲುಗಳು ಮತ್ತು ರಸ್ತೆ ಬದಿಯಲ್ಲಿ ಹೋಗುವ ಸಾರ್ವಜನಿಕರ ಮೇಲೆ ಬೀಳುತ್ತಿದ್ದು ಸಾರ್ವಜನಿಕರು ಕಸ ವಿಲೇವಾರಿ ವಿಭಾಗಕ್ಕೆ‌ಹಿಡಿ ಶಾಪ ಹಾಕುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.