ನೆಲ್ಯಾಡಿ: ಪಲ್ಟಿಯಾಗಿದ್ದ ವಾಹನದಲ್ಲಿ ಜಾನುವಾರು ಮಾಂಸ ಪತ್ತೆ: ಆರೋಪಿಗಳು ಪರಾರಿ ವಾಹನ, ಮಾಂಸ ವಶ

Puttur_Advt_NewsUnder_1
Puttur_Advt_NewsUnder_1


ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಲಾವತ್ತಡ್ಕ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಟೆಂಪೋವೊಂದು ಪಲ್ಟಿ ಆಗಿದ್ದು, ಇದರಲ್ಲಿ ಭಾರೀ ಪ್ರಮಾಣದಲ್ಲಿ ಗೋಮಾಂಸ ಸಾಗಾಟ ಪತ್ತೆ ಆಗಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಲ್ಟಿ ಆಗಿರುವ ಟೆಂಪೋದಲ್ಲಿ ಸುಮಾರು 3೦೦ ಕೆ.ಜಿ. ಗೋಮಾಂಸ ಇತ್ತೆನ್ನಲಾಗಿದೆ. ವಾಹನದಲ್ಲಿ ಚಾಲಕ ಸಹಿತ 3 ಮಂದಿ ಆರೋಪಿಗಳು ಇದ್ದರೆನ್ನಲಾಗಿದ್ದು, ಅವರು ಟೆಂಪೋ ಪಲ್ಟಿ ಆಗುತ್ತಿದ್ದಂತೆ ಪರಾರಿ ಆಗಿದ್ದಾರೆ ಎಂದು ಹೇಳಲಾಗಿದೆ.

ಪೊಲೀಸರ ತಡೆಯನ್ನು ಲೆಕ್ಕಿಸದೆ ಬಂದಿದ್ದರು:
ಗುಂಡ್ಯದಲ್ಲಿ ಕರ್ತವ್ಯ ನಿರತರಾಗಿದ್ದ ನೆಲ್ಯಾಡಿ ಹೊರ ಠಾಣೆ ಪೊಲೀಸರು ಮಂಗಳವಾರ ನಸುಕಿನಲ್ಲಿ ಹಾಸನ ಕಡೆಯಿಂದ ಬಂದ ಟೆಂಪೊವನ್ನು ತಪಾಸಣೆ ಸಲುವಾಗಿ ನಿಲ್ಲಿಸಲು ಸೂಚನೆ ನೀಡಿದ್ದರು. ಆದರೆ ನಿಲ್ಲಿಸದ ಈ ವಾಹನ ಮುಂದೆ ಸಾಗುತ್ತಿದ್ದಂತೆ ಗಸ್ತಿನಲ್ಲಿದ್ದ ಪೊಲೀಸರು ಈ ವಾಹನವನ್ನು ಬೆನ್ನಟ್ಟಿ ಬಂದಿದ್ದರು. ಆದರೆ ಅತೀ ವೇಗದಲ್ಲಿ ಬಂದಿದ್ದ  ಟೆಂಪೋ ಲಾವತ್ತಡ್ಕ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಹೇಳಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.